Breaking News

ಲಿಂಗಾಯತ ಸಮಾಜದ ಮುಖಂಡ ಬಸವರಾಜ ಜೇವರ್ಗಿ ನಿಧನ

Spread the love

ಲಿಂಗಾಯತ ಸಮಾಜದ ಮುಖಂಡ ಬಸವರಾಜ ಜೇವರ್ಗಿ ನಿಧನ
ಲಿಂಗಾಯತ ಸಮಾಜದ ಮುಖಂಡರು, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿಯವರ ಆಪ್ತರಾದ ಬಸವರಾಜ ಗ. ಜೇವರ್ಗಿ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.
ಗೋಕಾಕನ ಗುರುವಾರ ಪೇಟೆಯ ನಿವಾಸಿಯಾಗಿರುವ ಬಸವರಾಜ ಗ. ಜೇವರ್ಗಿ ಅವರಿಗೆ ಭಾನುವಾರ ರಾತ್ರಿ ಎದೆನೋವಿನ ಲಕ್ಷಣ ಕಂಡಾಗ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸೋಮವಾರ ಮಧ್ಯಾಹ್ನ ಲಘು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ತಾಯಿ, ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಗೋಕಾಕನ ಲಿಂಗಾಯತ ಸಜಮಾದ ರುದ್ರಭೂಮಿಯಲ್ಲಿ ಇಂದು ರಾತ್ರಿ 8 ಗಂಟೆಗೆ ನೆರವೇರಲಿದೆ ಕುಟುಂಬಸ್ಥರು ತಿಳಿಸಿದ್ದಾರೆ.
ಸಂತಾಪ: ಲಿಂಗಾಯತ ಸಮಾಜದ ಮುಖಂಡರಾದ ಬಸವರಾಜ ಗ. ಜೇವರ್ಗಿ ನಿಧನಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿಯವರು ಸಂತಾಪ ಸೂಚಿಸಿದ್ದು, ಮುಖಂಡರಾದ ವಿವೇಕ್ ಜತ್ತಿ, ಬಸು ಜತ್ತಿ, ರಾಜು ಮೇದಾರ, ವಿಜಯ್ ಜಾಧವ್, ಅಪ್ಪು ಸದಲಗಿ, ಸುರೇಶ ಹಾಲದೊಡೆ, ಅಶೋಕ್ ಪಾಟೀಲ್, ಚಂದು ಗಮಾನಿ, ಮಹೇಶ ಕಡಪಟ್ಟಿ, ಮುನ್ನಾ ಬಾಗವಾನ, ಚಂದ್ರಶೇಖರ ಕೊಣ್ಣೂರು ಸೇರಿದಂತೆ ಅಪಾರ ಸಂಖ್ಯೆಯ ಗೆಳೆಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ