Breaking News

ಸ್ಕೂಲ್ ಗೇಮ್ಸ್ 2025 ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆ: ಬೆಳಗಾವಿ ಸ್ಕೇಟರ್‌ಗಳಿಂದ ಅತ್ಯುತ್ತಮ ಸಾಧನೆ

Spread the love

ಸ್ಕೂಲ್ ಗೇಮ್ಸ್ 2025 ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆ: ಬೆಳಗಾವಿ ಸ್ಕೇಟರ್‌ಗಳಿಂದ ಅತ್ಯುತ್ತಮ ಸಾಧನೆ
ಸ್ಕೂಲ್ ಗೇಮ್ಸ್ 2025 ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆ
ಬೆಳಗಾವಿ ಸ್ಕೇಟರ್‌ಗಳಿಂದ ಅತ್ಯುತ್ತಮ ಸಾಧನೆ
ಒಟ್ಟು 13 ಪದಕಗಳನ್ನು ಮುಡಿಗೇರಿಸಿಕೊಂಡ ಸ್ಕೇಟರ್ಸ್
3 ಚಿನ್ನ, 6 ಬೆಳ್ಳಿ ಹಾಗೂ 4 ಕಂಚಿನ ಪದಕ
ಬೆಂಗಳೂರಿನಲ್ಲಿ ನಡೆದ ‘ಸ್ಕೂಲ್ ಗೇಮ್ಸ್ 2025’ ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬೆಳಗಾವಿಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಒಟ್ಟು 13 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನಿಂದ ಆಯ್ಕೆಯಾದ ಈ ಸ್ಕೇಟರ್‌ಗಳು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಈ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ 300 ಕ್ಕೂ ಹೆಚ್ಚು ಪ್ರಮುಖ ಸ್ಕೇಟಿಂಗ್ ಪಟುಗಳು ಭಾಗವಹಿಸಿದ್ದರು. ತೀವ್ರ ಪೈಪೋಟಿಯ ನಡುವೆ ಬೆಳಗಾವಿಯ ಸ್ಕೇಟರ್‌ಗಳು 3 ಚಿನ್ನ, 6 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಜಾನ್ವಿ ತೆಂಡೂಲ್ಕರ್: 2 ಚಿನ್ನದ ಪದಕಗಳು, ಆರಾಧ್ಯಾ ಪಿ.: 1 ಚಿನ್ನ ಮತ್ತು 1 ಬೆಳ್ಳಿ ಪದಕ, ರಶ್ಮಿತಾ ಅಂಬಿಗಾ: 2 ಬೆಳ್ಳಿ ಮತ್ತು 1 ಕಂಚಿನ ಪದಕ, ಶಲ್ಯ ತರಳೇಕರ್: 1 ಬೆಳ್ಳಿ ಮತ್ತು 1 ಕಂಚಿನ ಪದಕ, ಋತ್ವಿಕ್ ದುಬಾಶಿ: 1 ಬೆಳ್ಳಿ ಪದಕ, ಅವನೀಶ್ ಕಾಮನ್ನವರ್: 1 ಬೆಳ್ಳಿ ಮತ್ತು 1 ಕಂಚಿನ ಪದಕ, ಕರುಣಾ ವಾಘೇಲಾ: 1 ಕಂಚಿನ ಪದಕ ಪಡೆದಿದ್ದಾರೆ.
ಈ ಎಲ್ಲಾ ಕ್ರೀಡಾಪಟುಗಳು ಕೆ.ಎಲ್.ಇ ಸಂಸ್ಥೆಯ ಸ್ಕೇಟಿಂಗ್ ರಿಂಕ್ ಮತ್ತು ಗುಡ್ ಶೆಫರ್ಡ್ ಸ್ಕೇಟಿಂಗ್ ರಿಂಕ್‌ನಲ್ಲಿ ತರಬೇತುದಾರರಾದ ಸೂರ್ಯಕಾಂತ್ ಹಿಂಡಲಗೇಕರ್, ವಿಠ್ಠಲ ಗಂಗಾಣೆ, ಯೋಗೇಶ್ ಕುಲಕರ್ಣಿ, ವಿಶ್ವನಾಥ ಯಳ್ಳೂರಕರ್ ಮತ್ತು ಸೋಹಮ್ ಹಿಂಡಲಗೇಕರ್, ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಸಾಧಕರಿಗೆ ಡಾ. ಪ್ರಭಾಕರ್ ಕೋರೆ, ಮಾಜಿ ಶಾಸಕ ಶ್ಯಾಮ್ ಘಾಟಗೆ, ರಾಜ್ ಘಾಟಗೆ, ಉಮೇಶ್ ಕಲಘಟಗಿ, ಪ್ರಸಾದ್ ತೆಂಡೂಲ್ಕರ್ ಹಾಗೂ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಇಂದುಧರ್ ಸೀತಾರಾಮ್ ಅವರು ಪ್ರೋತ್ಸಾಹ ನೀಡಿದ್ದಾರೆ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ