Breaking News

ಹಾವೇರಿ ಹುಕ್ಕೇರಿಮಠದ ಜಾತ್ರೆಗೆ ದಿನಗಣನೆ

Spread the love

ಹಾವೇರಿ : ಜಿಲ್ಲೆಯ ಹುಕ್ಕೇರಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಇದೇ 25 ರಿಂದ ಜನವರಿ ಎರಡರವರೆಗೆ ಹಾವೇರಿ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಈ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.

ಹುಕ್ಕೇರಿಮಠ ತನ್ನ ವಿಶಿಷ್ಠತೆಯಿಂದಲೇ ಜನಜನಿತವಾಗಿದೆ. ಈ ಹಿಂದೆ ಮಠದ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಶಿವಬಸವ ಮತ್ತು ಲಿಂಗೈಕ್ಯ ಶಿವಲಿಂಗಸ್ವಾಮಿಗಳ ಪುಣ್ಯಸ್ಮರಣೆಯನ್ನ ಪ್ರತಿವರ್ಷವೂ ಆಚರಿಸಿಕೊಂಡು ಬರಲಾಗುತ್ತಿದೆ. ಈ ಲಿಂಗೈಕ್ಯ ಶ್ರೀಗಳ ಭಾವಚಿತ್ರಗಳ ಮೆರವಣಿಗೆಯನ್ನ ವಿದ್ಯುತ್ ದೀಪ ಅಲಂಕೃತಿ ಕಟ್ಟಿಗೆ ಮಂಟಪದಲ್ಲಿ ಮಾಡಲಾಗುತ್ತದೆ. ಈ ಆಚರಣೆಗೆ ಹುಕ್ಕೇರಿಮಠ ಜಾತ್ರೆ ಎಂದು ಕರೆಯಲಾಗುತ್ತದೆ.ಹುಕ್ಕೇರಿಮಠದ ಜಾತ್ರೆ ಕರ್ನಾಟಕದ ಆರಂಭಿಕ ಜಾತ್ರೆಗಳಲ್ಲಿ ಒಂದು. ಈ ಜಾತ್ರೆ ಆರಂಭವಾದ ನಂತರವೇ ಕರ್ನಾಟಕದ ವಿವಿಧ ಜಾತ್ರೆಗಳು ಆರಂಭವಾಗುತ್ತವೆ. ಅಲ್ಲದೇ, ಉತ್ತರ ಕರ್ನಾಟಕದಲ್ಲಿ ಅತಿದೊಡ್ಡ ಜಾತ್ರೆಗಳಲ್ಲಿ ಹುಕ್ಕೇರಿಮಠ ಜಾತ್ರೆ ಸಹ ಒಂದು. ಈ ಜಾತ್ರೆಯಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಚಟುವಟಿಕೆಗಳಲ್ಲದೆ, ರೈತರ, ಜನಸಾಮಾನ್ಯರ ಜಾತ್ರೆಗಳನ್ನ ಆಚರಿಸಲಾಗುತ್ತದೆ. ರೈತರಿಗಾಗಿ ಜಾನುವಾರುಗಳ ಜಾತ್ರೆ ಆಯೋಜಿಸುವುದು ಈ ಜಾತ್ರೆಯ ವಿಶೇಷ.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ