Breaking News

ನಾನೇ ನಿಜವಾದ ವಿಪಕ್ಷನಾಯಕ, ನಾನು ಅಡ್ಜಸ್ಟ್​ಮೆಂಟ್ ರಾಜಕಾರಣಿ ಅಲ್ಲ: ಯತ್ನಾಳ್

Spread the love

ಬೆಳಗಾವಿ: ಈ ಸದನದಲ್ಲಿ ನಿಜವಾದ ಪ್ರತಿಪಕ್ಷದ ನಾಯಕ ಅಂದರೆ ನಾನೇ. ನಾನು ಅಡ್ಜಸ್ಟ್​ಮೆಂಟ್ ರಾಜಕಾರಣಿ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಬಿಜೆಪಿ ನಾಯಕರ ಕಾಲೆಳೆದರು.

ಸದನ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಕಲಾಪಕ್ಕೆ ಸ್ಪೀಕರ್ ಯು. ಟಿ. ಖಾದರ್ ಅವಕಾಶ ಕೊಟ್ಟರು. ಇದಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ಷೇಪಿಸಿ, ಎಲ್ಲವನ್ನೂ ಬದಿಗೊತ್ತಿ ಉತ್ತರ ಕರ್ನಾಟಕ ಭಾಗದ ಚರ್ಚೆ ಮಾಡುತ್ತೇವೆ ಅಂತಾ ಸಚಿವರೇ ಹೇಳಿದ್ದಾರೆ. ಹೀಗಾಗಿ, ಉತ್ತರ ಕರ್ನಾಟಕ ಭಾಗದ ಬಗ್ಗೆ ಮೊದಲೇ ಚರ್ಚೆ ಮಾಡಬೇಕೆಂದು ಪಟ್ಟು ಹಿಡಿದರು‌. ಆಗ ಪ್ರಶ್ನೋತ್ತರ ಕಲಾಪಕ್ಕೆ ಆಡಳಿತ ಪಕ್ಷದ ಶಾಸಕ ರಂಗನಾಥ್ ಒತ್ತಾಯ ಮಾಡಿದರು. ಇದೇ ವೇಳೆ, ಮಧ್ಯಪ್ರವೇಶಿಸಿದ ಬಸನಗೌಡ ಯತ್ನಾಳ್ ಉ.ಕ. ಚರ್ಚೆ ಬಗ್ಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ, ನಿಯಮದಂತೆ ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡಿ ಬಳಿಕ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸೋಣ ಎಂದು ಮನವಿ ಮಾಡಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ