Breaking News

ಜೈಲಿನಲ್ಲಿ ಕೈದಿಗಳ ಬಳಿ ಮೊಬೈಲ್, ನಗದು ಪತ್ತೆ

Spread the love

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೆಲ ಕೈದಿಗಳಿಗೆ ವಿಶೇಷ ಆತಿಥ್ಯ ದೊರೆಯುತ್ತಿರುವ ವಿಡಿಯೋಗಳು ವೈರಲ್ ಆದ ಬಳಿಕ ಮತ್ತಷ್ಟು ಎಚ್ಚೆತ್ತಿರುವ ಜೈಲಧಿಕಾರಿಗಳು ಗುರುವಾರ ತಡರಾತ್ರಿ ದಿಢೀರ್ ತಪಾಸಣೆ ನಡೆಸಿದ್ದಾರೆ.

ಜೈಲಿನ ಕೆಲ ಬ್ಯಾರಕ್‌ಗಳಲ್ಲಿ ದಿಢೀರ್​​ ತಪಾಸಣೆ ನಡೆಸಲಾಗಿದ್ದು, ಕೈದಿಗಳ ಬಳಿಯಿದ್ದ ಮೊಬೈಲ್ ಫೋನ್, ನಗದು, ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನ ವಶಕ್ಕೆ ಪಡೆಯಲಾಗಿದೆ. ಗುರುವಾರ ರಾತ್ರಿ 8:30ರಿಂದ 09:30 ಹಾಗೂ 11:05 ರಿಂದ 12:30ರ ವರೆಗೆ ಎರಡು ಬಾರಿ ತಪಾಸಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ, 33 ಮೊಬೈಲ್‌ ಫೋನ್‌ಗಳು, 22 ಸಂಖ್ಯೆ ಸಿಮ್ ಕಾರ್ಡ್‌ಗಳು, 5 ಸಂಖ್ಯೆ ಚಾರ್ಜ‌ರ್‌ಗಳು, 4 ಇಯರ್ ಬಡ್ಸ್, 49 ಸಾವಿರ ರೂಪಾಯಿ ನಗದು, 1 ಇಯರ್ ಫೋನ್, 3 ಚಾಕು ತರಹದ ವಸ್ತುಗಳು ದೊರೆತಿವೆ. ಕಾರಾಗೃಹದೊಳಗೆ ನಿಷೇಧಿಸಲ್ಪಟ್ಟಿದ್ದರೂ ಸಹ ಅವುಗಳನ್ನ ಸಾಗಿಸಿದವರು, ಸಹಕರಿಸಿದವರ ವಿರುದ್ಧ ರಾಜ್ಯ ಕಾರಾಗೃಹ (ತಿದ್ದುಪಡಿ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆ‌ರ್ ದಾಖಲಿಸಲಾಗಿದೆ ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ