Breaking News

ಸುವರ್ಣಸೌಧದಲ್ಲಿ ಸಭಾಧ್ಯಕ್ಷರಿಗೆ 43 ಲಕ್ಷ ರೂ. ಪೀಠ… 11 ಮಹಾನ್ ಪುರುಷರ ಭಾವಚಿತ್ರ ಅಳವಡಿಸಲು 67 ಲಕ್ಷ ವ್ಯಯ!!!

Spread the love

ಸುವರ್ಣಸೌಧದಲ್ಲಿ ಸಭಾಧ್ಯಕ್ಷರಿಗೆ 43 ಲಕ್ಷ ರೂ. ಪೀಠ… 11 ಮಹಾನ್ ಪುರುಷರ ಭಾವಚಿತ್ರ ಅಳವಡಿಸಲು 67 ಲಕ್ಷ ವ್ಯಯ!!!
ಕಾನೂನಾತ್ಮಕ ಹೋರಾಟ ನಡೆಸುವ ಎಚ್ಚರಿಕೆ ನೀಡಿದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್…
ಸುವರ್ಣಸೌಧದಲ್ಲಿ ಸಭಾಧ್ಯಕ್ಷರಿಗೆ 43 ಲಕ್ಷ ರೂ. ಪೀಠ…
11 ಮಹಾನ್ ಪುರುಷರ ಭಾವಚಿತ್ರ ಅಳವಡಿಸಲು 67 ಲಕ್ಷ ವ್ಯಯ!!!
ಕಾನೂನಾತ್ಮಕ ಹೋರಾಟ ನಡೆಸುತ್ತೇವೆ
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಎಚ್ಚರಿಕೆ
ಬೆಳಗಾವಿಯ ಸುವರ್ಣಸೌಧದಲ್ಲಿ ಸಭಾಧ್ಯಕ್ಷರು ಕುಳಿತುಕೊಳ್ಳಲು 43 ಲಕ್ಷ ರೂಪಾಯಿ ವೆಚ್ಚದ ಪೀಠವನ್ನು ತಯಾರಿಸಿದ್ದು, 11 ಮಹಾನ್ ಪುರುಷರ ಭಾವಚಿತ್ರಗಳನ್ನು ಅಳವಡಿಸಲು 67 ಲಕ್ಷ ರೂಪಾಯಿ ದುಂದುವೆಚ್ಚವನ್ನು ಮಾಡಲಾಗಿದ್ದು, ಇದರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಾಗುವುದೆಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಹೇಳಿದ್ದಾರೆ.
ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಸರ್ಕಾರ ದುಂದುವೆಚ್ಚಕ್ಕೆ ಕಡಿವಾಣ ಹಾಕಿರುವುದಾಗಿ ಹೇಳುತ್ತಿದೆ.
ಆದರೇ, ಸರ್ಕಾರಿ ಮಾಶಾಸನಗಳು ಮತ್ತು ಸರ್ಕಾರಿ ನೌಕರರಿಗೂ ಕೂಡ ಸರಿಯಾಗಿ ವೇತನ ನೀಡುತ್ತಿಲ್ಲ. ಸುವರ್ಣಸೌಧದ ಉದ್ಘಾಟನೆಗೆ ರಾಷ್ಟ್ರಪತಿಗಳಿಗೆ 33 ಲಕ್ಷದ ಕುರ್ಚಿ ನೀಡಿದ್ದು ರಾಷ್ಟ್ರಮಟ್ಟದಲ್ಲಿ ಸುದ್ಧಿಯಾಗಿತ್ತು. ಈಗ ಸಭಾಧ್ಯಕ್ಷಪೀಠಕ್ಕೆ 42 ಲಕ್ಷ 93 ಸಾವಿರದ 940 ರೂಪಾಯಿ ಖರ್ಚು ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಅಲ್ಲದೇ, 11 ಮಹಾನ್ ಪುರುಷರ ತೈಲ ಚಿತ್ರಗಳಿಗೆ 67 ಲಕ್ಷ 67 ಸಾವಿರ 694 ರೂಪಾಯಿ ಖರ್ಚು ಮಾಡಲಾಗಿದೆ. ಈ ಮೂಲಕ ಜನರ ಸಾರ್ವಜನಿಕರ ತೆರಿಗೆ ಹಣವನ್ನು ದುಂದುವೆಚ್ಚ ಮಾಡಲಾಗಿದೆ. ಚಳಿಗಾಲದ ಅಧಿವೇಶನದ ವೇಳೆ ಅದ್ಭುತ ಕುರ್ಚಿ ಮತ್ತು ಭಾವಚಿತ್ರಗಳನ್ನು ನೋಡಲು ಗೈಡ್’ಗಳನ್ನು ನೇಮಿಸಿ ಎಂದರು. ಇದರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ