Breaking News

ಆಂಜನೇಯ ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಆಸಿಪ್ ಸೇಠ

Spread the love

ಜನ ಸೇವೆಯೇ ನನ್ನ ಪ್ರಮುಖ ಧ್ಯೇಯ.
ರಾಮತೀರ್ಥನಗರ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಆಸಿಪ್ ಸೇಠ ಅಭಿಮತ..
ಬೆಳಗಾವಿ. ೨೨- ಅಭಿವ್ರದ್ಧಿಯೇ ನನ್ನ ಪ್ರಥಮ ಗುರಿ. ರಾಮತೀರ್ಥನಗರ ಸೇರಿದಂತೆ ಇಡೀ ನನ್ನ ಕ್ಷೇತ್ರ ಸರ್ವ ರೀತಿಯಿಂದ ಅಭಿವ್ರದ್ಧಿ ಹೊಂದಿ ನಂದನ ವನದಂತಾಗಬೇಕು. ಕ್ಷೇತ್ರ ಜನರ ಪ್ರೀತಿ ವಾತ್ಸಲ್ಯಗಳಲ್ಲಿ ಸದಾ ನಾನಿರಬೇಕು.
ಜನ ಮನದ ಆಶಯದಂತೆ ನಾನು ಮುನ್ನಡೆಯುವೆ ಎಂದು ಬೆಳಗಾವಿ ಉತ್ತರ ಕ್ಷೇತ್ರ ಶಾಸಕ ಆಸಿಫ್ ಸೇಠ ಹೇಳಿದರು. ಅವರು ಶನಿವಾರ ರಾಮತೀರ್ಥನಗರ ಕಣಬರ್ಗಿ ರಸ್ತೆಯ ಶ್ರೀ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿವ್ರದ್ಧಿ ಪರ ಮನವಿ ಸ್ವೀಕರಿಸಿ, ಸಾಂಸ್ಕೃತಿಕ ಭವನ ಕಟ್ಟಡಕ್ಕೆ ಮತ್ತು ಬಡಾವಣೆಯ ವೀರಭದ್ರೇಶ್ವರ ದೇವಸ್ಥಾನದ ಸುತ್ತ ಮುತ್ತಲಿನ ರಸ್ತೆಗಳು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಅಭಿವ್ರದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯ. ಇಡೀ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಸಮರ್ಪಕ ಅನುಷ್ಠಾನ ನನ್ನ ಪ್ರಥಮ ಆದ್ಯತೆಯಾಗಿದೆ ಎಂದರಲ್ಲದೆ, ಸನ್ಮಾನಿಸಿ ಗೌರವಿಸಿದ್ದಕ್ಕೆ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ ಕಮಿಟಿ ಗೆ ಧನ್ಯವಾದ ಹೇಳಿದರು.
ದೇವಸ್ಥಾನ ಕಮಿಟಿ ಅದ್ಯಕ್ಷರಾದ ಸುರೇಶ ಉರಬಿನಟ್ಟಿ ಸ್ವಾಗತಿಸಿ ಮಾತನಾಡಿ , ನಮ್ಮ ದೇವಸ್ಥಾನಕ್ಕೆ ಅಸಂಖ್ಯಾತ ಭಕ್ತ ಜನರು ಆಗಮಿಸುತ್ತಿದ್ದು, ಇಲ್ಲಿ ಮೂಲ ಭೂತ ಸೌಕರ್ಯಗಳ ಕೊರತೆಯಿಂದ ತೊಂದರೆ ಅನುಭವಿಸುವಂತಾಗಿದೆ. ಇಲ್ಲಿ ಜರುಗುವ ಜಾತ್ರೆ,ಉತ್ಸವ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳದ ಅಭಾವ ಎದುರಾಗಿದ್ದು, ಕಾರ್ಯಕ್ರಮಗಳಿಗೆ ಸಂಚಾರಕ್ಕಿರುವ ರಸ್ತೆಗಳನ್ನೇ ಬಳಸುತ್ತಿದ್ದು, ಈ ನಮ್ಮ ತೊಂದರೆ ಮನಗಂಡು, ಮಾನ್ಯರು ನಮಗೆ ಅಗತ್ಯವಿರುವ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸುವಂತೆ ಕೋರಿದರಲ್ಲದೆ, ಅಭಿವ್ರದ್ಧಿಗೆ ಪೂರಕವಾದ ಮನವಿ ಅರ್ಪಿಸಿದರು.
ವೇದಿಕೆಯಲ್ಲಿ ಪಾಲಿಕೆ ಸದಸ್ಯ, ಹನುಮಂತ ಕೊಂಗಾಲಿ, ಯುವ ಧುರೀಣ ಅಮನ್ ಸೇಠ, ಮಾಜಿ ಮೇಯರ್ ಎನ್ ಬಿ ನಿರ್ವಾಣಿ, ತಾಹೀರ ಸೈಯ್ಯದ, ಪ್ರವೀಣ ಕೋರಿಶೆಟ್ಟಿ, ಬಸವರಾಜ ಶಿರಗಾವಿ ಉಪಸ್ತಿತರಿದ್ದರು. ಬುಡಾ ಎಂಜನೀಯರ ಮಂಜುಶ್ರೀ ಬಡಿಗೇರ, ಹೆಸ್ಕಾಂ ಎಂಜನೀಯರ ಅಶ್ವಿನಿ ಶಿಂಧೆ, ಕಾರ್ಪೊರೇಶನ್ ಎಂಜನೀಯರ ಅಂಕಿತ ಇದ್ದರು.
ದೇವಸ್ಥಾನ ಕಮಿಟಿ ಯ ಮನೋಹರ ಕಾಜಗಾರ, ಡಿ ಎಮ್ ಟೊಣ್ಣೆ, ದುಂಡಪ್ಪಾ ಉಳ್ಳೇಗಡ್ಡಿ ಮಂಜುನಾಥ ಪಾಟೀಲ, ಶಿವಾನಂದ ಮಠಪತಿ, ಮಹೇಶ ಮಾವಿನಕಟ್ಟಿ , ಮಹೇಶ ಚಿಟಗಿ, ಸಂತೋಷ ಸನದಿ , ಜಿ ಜಿ ಹುನ್ನೂರ, ಬಸವರಾಜ ಹಿರೇಮಠ, ಸಿ ಎಸ್ ಖನಗಣ್ಣಿ, ಜಿ ಎಸ್ ಪಾಟೀಲ, ಐ ಬಿ ನಿರ್ವಾಣಿ, ಅಶೋಕ ಕರಲಿಂಗನ್ನವರ,, ವೀರನಗೌಡಾ ಈಶ್ವರಪ್ಪಗೋಳ , ಎಸ್ ಎಲ್ ಸನದಿ, ಗುರುಸಂಗಪ್ಪಾ ಚೆಳಗೇರಿ,
ಮಹಿಳಾ ಸಂಘದ ನಿರ್ಮಲಾ ಉರಬಿನಹಟ್ಟಿ, ಲತಾ ಕಾಜಗಾರ , ಮಹಾದೇವಿ ಕರಾಳೆ , ಲತಾ ಕೆರೂರ, ಕಾವ್ಯಾ ಚಿಟಗಿ, ಮಹಾದೇವಿ ಉಳ್ಳೇಗಡ್ಡಿ , ಮುಂತಾದವರಿದ್ದರು.
ಆರ್ಚಕ ಪ್ರಕಾಶ ದೀಕ್ಷಿತ್ ಪೂಜೆ ಸಲ್ಲಿಸಿದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ