Breaking News

₹2.70 ಲಕ್ಷ ಮೌಲ್ಯದ 4 ಬೈಕ್ಸ್ ಕಳವು !!! ಬೈಕ್ ಸಹಿತ ಒಬ್ಬ ಖತರ್ನಾಕ್ ಕಳ್ಳನ ಬಂಧನ

Spread the love

₹2.70 ಲಕ್ಷ ಮೌಲ್ಯದ 4 ಬೈಕ್ಸ್ ಕಳವು !!!
ಬೈಕ್ ಸಹಿತ ಒಬ್ಬ ಖತರ್ನಾಕ್ ಕಳ್ಳನ ಬಂಧನ
ಬೆಳಗಾವಿಯಲ್ಲಿ ಸರಣಿ ಮೋಟಾರ್ ಸೈಕಲ್ ಕಳ್ಳತನ
ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಭರ್ಜರಿ ಕಾರ್ಯಾಚರಣೆ
ಒಟ್ಟು 4 ಮೋಟಾರ್ ಸೈಕಲ್‌ಗಳ ಜಪ್ತಿ
ಇನ್ಸಪೆಕ್ಟರ್ ಹೊಳೆನ್ನವರ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ
ಬೆಳಗಾವಿ ನಗರದಲ್ಲಿ ಇತ್ತೀಚೆಗೆ ಹೆಚ್ಚಾಗಿದ್ದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ, ಬೆಳಗಾವಿ ನಗರ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ, ಅಜಯ್ ಊರ್ಫ್ ಅಜೀತ ಬಸವರಾಜ ಭಜಂತ್ರಿ (19) ಎಂಬ ಆರೋಪಿಯನ್ನು ಬಂಧಿಸಿ, ಆತನಿಂದ ಒಟ್ಟು ₹2,70,000 ಮೌಲ್ಯದ 4 ಕಳುವಾದ ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ನಗರದ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಹಾಗೂ ಉಪಪೊಲೀಸ್ ಆಯುಕ್ತರುಗಳಾದ ನಾರಾಯಣ ಭರಮನಿ, ನಿರಂಜನ ರಾಜೆ ಅರಸ್ ಮತ್ತು ಬೆಳಗಾವಿ ಗ್ರಾಮೀಣ ಉಪವಿಭಾಗದ ಎಸಿಪಿ ಬಿ ಎಂ ಗಂಗಾಧರ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಎಸ್ ಕೆ ಹೊಳೆನ್ನವರ ಅವರ ನೇತೃತ್ವದಲ್ಲಿ ರಚಿಸಲಾದ ತಂಡ, ದಿನಾಂಕ 20/11/2025 ರಂದು ಕಳವು ಮಾಡಿದ ಮೋಟಾರ್ ಸೈಕಲ್‌ನೊಂದಿಗೆ ಸಂಶಯಾಸ್ಪದ ರೀತಿಯಲ್ಲಿ ಅಲೆದಾಡುತ್ತಿದ್ದ ಅಜಯ್ ಭಜಂತ್ರಿ ಎಂಬಾತನನ್ನು ವಶಕ್ಕೆ ಪಡೆದಿದೆ. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಅಳ್ಳಾವರ ವಿಷ್ಣು ಲಾಡ್ಜ್, ಧಾರವಾಡ ಹೊಸ ಬಸ್ ಸ್ಟ್ಯಾಂಡ್, ಮತ್ತು ಕಿತ್ತೂರು ಚೆನ್ನಮ್ಮ ಸರ್ಕಲ್ ಪ್ರದೇಶಗಳಿಂದ ಕಳ್ಳತನ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀರೋ ಸ್ಟ್ಯಾಂಡರ್ ಪ್ಲಸ್ ಅಂದಾಜು ಮೌಲ್ಯ ₹45,000, ಹೀರೋ ಹೆಚ್‌ಎಫ್ ಡಿಲಕ್ಸ್ – ಅಂದಾಜು ಮೌಲ್ಯ ₹15,000, ಬಜಾಜ್ ಡಿಸ್ಕವರ್ – ಅಂದಾಜು ಮೌಲ್ಯ ₹75,000.ಮತ್ತು ಹೀರೋ ಸ್ಟ್ಯಾಂಡರ್ ಪ್ಲಸ್ (– ಅಂದಾಜು ಮೌಲ್ಯ ₹75,000 ಒಟ್ಟು ಅಂದಾಜು ₹2,70,000 ಮೌಲ್ಯದ ಬೈಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ನಿರ್ವಹಿಸಿದ ತಂಡದಲ್ಲಿ ಇನ್ಸಪೇಕ್ಟರ್ ಎಸ್ ಕೆ ಹೊಳೆನ್ನವರ, ಪಿಎಸ್‌ಐಗಳಾದ ಅವಿನಾಶ ಯರಗೊಪ್ಪ ಮತ್ತು ಬಿ ಕೆ ಮಿಟಗಾರ, ಹಾಗೂ ಸಿಬ್ಬಂದಿಗಳಾದ ಎಂ ಐ ತುರಮರಿ, ಗುರುಸಿದ್ದ ಪೂಜೇರಿ, ಎಮ್ ಜಿ ಮಾಣಿಕಬಾರ, ಮಹಾಂತೇಶ ಕಡನ್ನವರ, ಮತ್ತು ಆರ್ ಎಸ್ ಕೆಳಗಿನಮನಿ ಇದ್ದರು. ಈ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಕಾರ್ಯವೈಖರಿಯನ್ನು ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ