Breaking News

ರಾಹುಲ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಬಿಡಿಸಿಸಿ ಬ್ಯಾಂಕಿನ ಮೊದಲ ಮಾಸಿಕ ಸಭೆ

Spread the love

ರಾಹುಲ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಬಿಡಿಸಿಸಿ ಬ್ಯಾಂಕಿನ ಮೊದಲ ಮಾಸಿಕ ಸಭೆ
ಬಿಡಿಸಿಸಿ ಬ್ಯಾಂಕಿನ ಮೊದಲ ಮಾಸಿಕ ಸಭೆ
ರಾಹುಲ್ ಜಾರಕಿಹೊಳಿ ಅಧ್ಯಕ್ಷತೆ
ಮಹತ್ವದ ವಿಷಯಗಳ ಕುರಿತು ಚರ್ಚೆ
ನಿರ್ದೇಶಕರ ಸಲಹೆ ಸೂಚನೆ
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಬೆಳಗಾವಿ ಪಟ್ಟಣ ಶಾಖೆಯಲ್ಲಿ, ಮಾಸಿಕ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಬುಧವಾರದಂದು ಬೆಳಗಾವಿ ತಾಲೂಕಿನ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ರಾಹುಲ್ಸತೀಶ ಜಾರಕಿಹೋಳಿ ಅವರ ಅಧ್ಯಕ್ಷತೆಯಲ್ಲಿ ಪ್ರಧಾನ ಕಾರ್ಯಾಲಯದ ಸಭಾ ಭವನದಲ್ಲಿ ಮಾಸಿಕ ಸಭೆ ನಡೆಯಿತು.
ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು: ಸಂಘದ ಕ್ರಮದ ಪತ್ತಿನ ಅವಧಿ ಮುಗಿದಿರುವ ಬಗ್ಗೆ ಪರಿಶೀಲನೆ ನಡೆಸಲಾಯಿತು. 2024-25ರ ಲೆಕ್ಕ ಪರಿಶೋಧನೆ ಮಾಡಿಸದೇ ಇರುವ ವಿಷಯದ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಸಂಘಗಳಲ್ಲಿನ ಎಲ್ಲ ಕಟಬಾಕಿ ಸಾಲಗಳ ವಸೂಲಾತಿ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಸಂಘಗಳಲ್ಲಿ ಕೇಂದ್ರ ಸರಕಾರದ ಗಣಕೀಕರಣವನ್ನು ಡಿಸೆಂಬರ್-25ರೊಳಗೆ ಅಳವಡಿಸುವ ಬಗ್ಗೆ ನಿರ್ದೇಶನ ನೀಡಲಾಯಿತು. ಸಂಘಗಳಲ್ಲಿ ಅಪಘಾತ ವಿಮೆಯನ್ನು ಅಳವಡಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಯಿತು.
ಹೊಸ ಕ್ರಮದ ಅನುಸಾರವಾಗಿ ಪ್ರಟ್ಟ ತಂತ್ರಾಂಶದಲ್ಲಿ ಬೋಜಾ ದಾಖಲಿಸುವ ಬಗ್ಗೆ ಚರ್ಚಿಸಲಾಯಿತು. ಸಭೆಯ ಅಧ್ಯಕ್ಷರ ಅನುಮತಿಯ ಮೇರೆಗೆ ಇತರ ವಿಷಯಗಳನ್ನೂ ಚರ್ಚಿಸಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ಧರು..

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ