Breaking News

ಎರಡನೇ ಬೆಳೆಗೆ ನೀರು ಬಿಡದಿದ್ದರೆ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಮಾಜಿ ಸಚಿವ ಶ್ರೀರಾಮುಲು

Spread the love

ಕೊಪ್ಪಳ: ಮೈಸೂರು ಭಾಗದಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂದು ಕಾಂಗ್ರೆಸ್​ನವರು ಹೋರಾಟ ಮಾಡಿದ್ದರು. ಟಿಬಿ ಡ್ಯಾಂನಿಂದ ಎರಡನೇ ಬೆಳೆಗೆ ರೈತರಿಗೆ ನೀರು ಬಿಡಲಿಲ್ಲವೆಂದರೆ ನಾವು ಸಹ ನಮ್ಮ ಭಾಗದಲ್ಲಿ ನಮ್ಮ ನೀರು, ನಮ್ಮ ಹಕ್ಕು ಎಂದು ಹೋರಾಟ ಮಾಡ್ತೇವೆ. ಟಿ ಬಿ ಡ್ಯಾಂಗೆ ಮುತ್ತಿಗೆ ಹಾಕುತ್ತೇವೆ. ನೀರು ಬಿಡಲಿಲ್ಲವೆಂದರೆ ಜಲಾಶಯಕ್ಕೆ ಜಿಗಿದು ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ಕೊಪ್ಪಳದ ಮುನಿರಾಬಾದ್​ನಲ್ಲಿ ಗುರುವಾರ ಮಾಧ್ಯಮದ ಜೊತೆಗೆ ಅವರು ಮಾತನಾಡಿ, ಟಿ ಬಿ ಡ್ಯಾಂ ಏನು ಡಿ.ಕೆ.ಶಿವಕುಮಾರ್ ಅವರ ತಾತನ ಆಸ್ತಿಯಲ್ಲ. ಎರಡನೇ ಬೆಳೆಗೆ ನೀರು ಕೊಡಲ್ಲ ಅಂದ್ರೆ ನಾವು ಕೈಕಟ್ಟಿ ಕುಳಿತುಕೊಳ್ಳಬೇಕಾ? ಎಂದು ರಾಜ್ಯ ಸರ್ಕಾದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ