Breaking News

ಕಟ್ಟಡಗಳ ಸೆಟ್​​ಬ್ಯಾಕ್ ನಿಯಮದಲ್ಲಿ ಬದಲಾವಣೆ: ಹೊಸ ಅಧಿಸೂಚನೆ ಮಾಹಿತಿ ಇಲ್ಲಿದೆ

Spread the love

ಬೆಂಗಳೂರು, ನವೆಂಬರ್​ 13: ಸಣ್ಣ ಜಾಗಗಗಳಲ್ಲಿ ಕಟ್ಟಡ ನಿರ್ಮಿಸಲು ಇದ್ದ ಸೆಟ್​ಬ್ಯಾಕ್​ ನಿಯಮಗಳಲ್ಲಿ ಕೆಲ ಬದಲಾವಣೆಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ (UDD) ಮುಂದಾಗಿದೆ. ಹಾಲಿ ಇರುವ ನಿಯಮಗಳನ್ನ ಸರಗೊಳಿಸುವುದು ಮತ್ತು ಏಕರೂಪತೆ ಜಾರಿಯ ಉದ್ದೇಶದ ಹಿನ್ನಲೆ, ನವೆಂಬರ್ 11ರಂದು ಪರಿಷ್ಕೃತ ಮಾಸ್ಟರ್ ಪ್ಲಾನ್ 2015 ಅಡಿಯಲ್ಲಿ ವಲಯ ನಿಯಮಾವಳಿಗಳ ತಿದ್ದುಪಡಿ ಕುರಿತಾದ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

ಕಟ್ಟಡದ ಸೆಟ್​ಬ್ಯಾಕ್ ಅಂದರೆ ಏನು?

ಕಟ್ಟಡ ಸೆಟ್​​ಬ್ಯಾಕ್​ ಎಂದರೆ ಕಟ್ಟಡದ ಸುತ್ತಲು ಕಡ್ಡಾಯವಾಗಿ ಬಿಡಬೇಕಾದ ಖಾಲಿ ಜಾಗ. ಅಂದರೆ, ಕಟ್ಟಡ ಮತ್ತು ಆಸ್ತಿ ಗಡಿಯ ಮಧ್ಯೆ ಉಳಿಸಬೇಕಾದ ಕನಿಷ್ಠ ಪ್ರದೇಶವಾಗಿದೆ.

ಹೊಸ ಕರಡು ಪ್ರಸ್ತಾಪದ ಪ್ರಕಾರ, 150 ಚ.ಮೀ (ಸುಮಾರು 1,600 ಚ.ಅಡಿ) ವರೆಗೆ ಇರುವ ವಸತಿ ಜಾಗಗಳಿಗೆ ಸೆಟ್​ಬ್ಯಾಕ್​ ಕಡಿತಗೊಳಿಸಲಾಗಿದ್ದು, ಹೊಸದಾಗಿ ಮರುನಿಗದಿ ಮಾಡಲಾಗಿದೆ. ಈ ಮೊದಲು ಬಿಲ್ಡರ್​​ಗಳು ಸೆಟ್​​ಬ್ಯಾಕ್​ ಅಂತರವನ್ನು ಜಾಗದ ಉದ್ದ ಮತ್ತು ಅಗಲದ ಶೇಕಡಾವಾರು ಆಧಾರದಲ್ಲಿ ಲೆಕ್ಕ ಹಾಕಬೇಕಿತ್ತು. ಮುಂಭಾಗದಲ್ಲಿ ಶೇ.12, ಹಿಂಭಾಗದಲ್ಲಿ ಶೇ.8, ಮತ್ತು ಉಳಿದ ಎರಡು ಬದಿಗಳಲ್ಲಿ ತಲಾ ಶೇ.8ರಷ್ಟು ಜಾಗವನ್ನು ಖಾಲಿ ಬಿಡಬೇಕಿತ್ತು.

ಹೊಸ ಕರಡು ಪ್ರಸ್ತಾಪದಲ್ಲಿ ಏನಿದೆ?

  • 60 ಚ.ಮೀ (20×30 ಅಡಿ) ವರೆಗೆ ಇರುವ ಜಾಗಗಳಿಗೆ ಮುಂಭಾಗದಲ್ಲಿ 0.7 ಮೀಟರ್ ಹಾಗೂ ಇತರ ಎಲ್ಲಾ ಬದಿಗಳಲ್ಲಿ 0.6 ಮೀಟರ್ ಸೆಟ್​​ಬ್ಯಾಕ್​ ಕಡ್ಡಾಯ.
  • 60-150 ಚ.ಮೀ (30×40 ಮತ್ತು 30×50 ಅಡಿ) ಇರುವ ಜಾಗಗಳಿಗೆ ಮುಂಭಾಗದಲ್ಲಿ 0.9 ಮೀಟರ್​​, ಇತರ ಎಲ್ಲ ಬದಿಳಲ್ಲಿ 0.7 ಮೀಟರ್​​ ಸೆಟ್​​ಬ್ಯಾಕ್​ ಕಡ್ಡಾಯ.
  • 150 ಚ.ಮೀ.ಗಿಂತ ಹೆಚ್ಚಿರುವ ಜಾಗಗಳ ಸೆಟ್​​ಬ್ಯಾಕ್​ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ.

150 ಚ.ಮೀ ವರೆಗೆ ಇರುವ ಜಾಗಗಳಲ್ಲಿ ನಿರ್ಮಿಸುವ ಕಟ್ಟಡಗಳ ಗರಿಷ್ಠ ಎತ್ತರವನ್ನು 12 ಮೀಟರ್​ಗೆ ನಿಗದಿ ಮಾಡಲಾಗಿದೆ. 750 ಚ.ಮೀ ವರೆಗೆ ಇರುವ ಜಾಗಗಳಲ್ಲಿ ಓಪನ್​ ಮೆಟ್ಟಿಲುಗಳನ್ನು ಸೆಟ್​ಬ್ಯಾಕ್​ ಒಳಗಡೆ ನಿರ್ಮಿಸಲು ಅನುಮತಿ ಇದೆ, ಆದರೆ ಮಳೆನೀರು ಭೂಮಿಯಲ್ಲಿ ಇಂಗುವ ರೀತಿ ಇರಬೇಕು ಎಂದು ಕರಡು ಸ್ಪಷ್ಟಪಡಿಸಿದೆ.  ಅದೇ ರೀತಿ, ನೆಲಮಹಡಿ ಅಥವಾ ಮೇಲ್ಛಾವಣಿ ಮಹಡಿಗಳಲ್ಲಿ ಯಾಂತ್ರಿಕ ಅಥವಾ ಹೈಡ್ರಾಲಿಕ್ ಪಾರ್ಕಿಂಗ್ ವ್ಯವಸ್ಥೆ ಬಳಸಲು ಅನುಮತಿ ನೀಡಲಾಗಿದೆ. ಆದರೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೆಲ ಮಹಡಿಗಳ ನಿರ್ಮಾಣಕ್ಕೆ ನಿಷೇಧ ಇರಲಿದೆ ಎಂದು ಕರಡು ತಿಳಿಸಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ