ಮೈಸೂರು: ಕಷ್ಟ ಭಂಜನ (ಕಷ್ಟನಾಶಕ) ಭೈರವ ದೇವರಿಗೆ 2025ನೇ ವರ್ಷದ ಪ್ರಕಾರದ ಮಿಷ್ಠಾನ ನೈವೇದ್ಯ ಸಮರ್ಪಣೆಯು ವಿಶ್ವ ದಾಖಲೆಯ ಪುಟ ಸೇರಿತು. ನಗರದ ಪುರಭವನ ಆವರಣದಲ್ಲಿ ಭೈರವ ಜನ್ಮಾಷ್ಟಮಿ ಪ್ರಯುಕ್ತ ನವೆಂಬರ್ 5 ರಿಂದ 12 ರವರೆಗೆ ಕೃಷ್ಣಗಿರಿ ಪೀಠಾಧಿಪತಿ ಶ್ರೀ 1008 ಆಚಾರ್ಯ ವಸಂತ ವಿಜಯಾನಂದ ಗಿರಿಜಿ ಮಹಾರಾಜ್ ಅವರ ಸಾನ್ನಿಧ್ಯದಲ್ಲಿ ಕಷ್ಟ ಭಂಜನ ಭೈರವ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ 2025 ಪ್ರಕಾರದ ಮಿಷ್ಠಾನ ನೈವೇದ್ಯ ಸಮರ್ಪಣೆಯ ವಿಶ್ವ ದಾಖಲೆ ಕಾರ್ಯಕ್ರಮ ನೆರವೇರಿಸಲಾಯಿತು.
ಎಲ್ಲರನ್ನೂ ಆಕರ್ಷಿಸಿದ ಸುಮಾರು 2025 ಬಗೆಯ ತಿನಿಸುಗಳು: ನಾನಾ ಹೆಸರಿನ ಸುಮಾರು 2025 ಬಗೆಯ ತಿನಿಸುಗಳು, ಕಾರ್ಯಕ್ರಮದಲ್ಲಿ ಎಲ್ಲರನ್ನೂ ಆಕರ್ಷಿಸಿತು. ಮಧ್ಯಾಹ್ನ ಆಗಮಿಸಿದ ವಿಶ್ವ ದಾಖಲೆಯ ಅಧಿಕಾರಿಗಳ ತಂಡವು, ಸಿದ್ಧಪಡಿಸಿರುವ ಈ ತಿನಿಸುಗಳನ್ನು ಪರಿಶೀಲಿಸಿ ಮತ್ತು ಅಷ್ಟೂ ಬಗೆಯ ತಿನಿಸುಗಳ ಎಣಿಕೆಯನ್ನು ನಡೆಸಿತು. ಆ ಬಳಿಕ ಅದರ ವಿವರವನ್ನು ಪಡೆದು ವಿಶ್ವದಾಖಲೆಯ ಪುಟಗಳಿಗೆ ಸೇರಿಸಿದರು.ಕಾರ್ಯಕ್ರಮದ ಕೊನೆಯ ದಿನವಾದ ಬುಧವಾರ ಬೆಳಗ್ಗೆ 10.30 ರಿಂದ ವಿಶೇಷ ಭೈರವ ಸಾಧನ, ಮಧ್ಯಾಹ್ನ 3.30 ರಿಂದ ಕಷ್ಟ ಭಂಜನ ಮಹಾಯಜ್ಞ ಹಾಗೂ 2025 ವ್ಯಂಜನೆಗಳ ಸಮರ್ಪಿಸಲಾಯಿತು.
Laxmi News 24×7