50:50 ಸೂತ್ರಕ್ಕೆ ಯಾರ ವಿರೋಧವು ಇಲ್ಲ
ಕಾರ್ಖಾನೆ ಮಾಲೀಕರ ಬೇಡಿಕೆ ಕುರಿತು ಪ್ರತ್ಯೇಕ ಸಭೆ: ಸಿಎಂ ಸಿದ್ಧರಾಮಯ್ಯ
ಕಾರ್ಖಾನೆ ಮಾಲೀಕರು ₹50 ಹೆಚ್ಚು ಕೊಡಬೇಕು.
ಸರ್ಕಾರವೂ ಕೂಡ ₹50 ಹೆಚ್ಚುವರಿ ನೀಡಲಿದೆ
ಸಮಸ್ಯೆ ಬಗೆಹರಿಸಲು ಶೀಘ್ರವೇ ಆದೇಶ ಜಾರಿ
ಸಕ್ಕರೆ ಸಚಿವರು ರೈತರ ಬಳಿ ಘೋಷಿಸಲಿದ್ದಾರೆ; ಸಿಎಂ ಸಿದ್ಧರಾಮಯ್ಯ
ಕಬ್ಬು ಬೆಳೆಗಾರರಿಗೆ ಕಾರ್ಖಾನೆ ಮಾಲೀಕರು 50 ರೂ. ಹೆಚ್ಚು ಕೊಡಬೇಕು. ಸರ್ಕಾರ ಕೂಡ 50 ರೂ. ಕೊಡಲಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಲಿದೆ. ಮಾಲೀಕರ ಬೇಡಿಕೆ ಕುರಿತು ಪ್ರತ್ಯೇಕ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ದಾಸಶ್ರೇಷ್ಠ ಕನಕದಾಸ ಜಯಂತಿಯಲ್ಲಿ ಭಾಗಿಯಾಗಿ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಕನಕದಾಸರು ಕೇವಲ ಭಕ್ತ ಕನಕದಾಸರಲ್ಲ. ಅವರು ಸಮಾಜದಲ್ಲಿ ಬದಲಾವಣೆಯನ್ನು ಬಯಸಿದ ಓರ್ವ ದಾರ್ಶನಿಕರು. ಕವಿಗಳು. ಅವರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇನ್ನು 50 ರೂ. ಹೆಚ್ಚುವರಿ ಕೊಡಲು ಮಾಲೀಕರ ವಿರೋಧ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಲೀಕರ ಎದುರೇ ಇದನ್ನ ನಿರ್ಧಾರ ಮಾಡಿದ್ದೇವೆ. ಹೇಳಿರೋದೊಂದು ಮಾಡಿರೋದೊಂದು ಅಲ್ಲ. ಮಾಲೀಕರ ಎದುರಿಗೆ ಎಲ್ಲವನ್ನು ಹೇಳಿದ್ದೇನೆ.
ಝೂಮ್ ಮೀಟಿಂಗ್‌ನಲ್ಲಿ ಡಿಸಿ ಬಂದು ಹೇಳೋವರೆಗೂ ಒಪ್ಪಿರಲಿಲ್ಲ. ಡಿಸಿ ಹೇಳಿದ ಮೇಲೆ ಒಪ್ಪಿಕೊಂಡರು. ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. 50 ರೂ. ಕಾರ್ಖಾನೆಗಳು ಕೊಡಬೇಕು, ಸರ್ಕಾರ 50 ರೂ. ಕೊಡಲಿದೆ ಎಂದರು 10.25% ರಿಕವರಿಗೆ 3100+100= 3,200 ರೂ, 11.25% ರಿಕವರಿಗೆ 3,200+100=3,300 ರೂ. ಕೊಡಬೇಕು. ಬೆಳಗಾವಿ ಡಿಸಿ 3,200 ಹೇಳಿದ್ದರು, ಅದರ ಮೇಲೆ 100 ರೂ. ಜಾಸ್ತಿ ಕೊಡುತ್ತಿದ್ದೇವೆ. ಆದೇಶ ಈಗ ಜಾರಿ ಮಾಡುತ್ತೇವೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರೇ ರೈತರ ಬಳಿ ಹೋಗಿ ಅಲ್ಲೇ ಘೋಷಣೆ ಮಾಡುತ್ತಾರೆ ಎಂದು ತಿಳಿಸಿದರು.
Laxmi News 24×7