Breaking News

36 ಕೋಟಿಯಲ್ಲಿ ಅನುದಾನದಲ್ಲಿ 45 ಕಿಲೋ ಮೀಟರ್ ಯುಜಿಡಿ ಕಾಮಗಾರಿ ಶಾಸಕ ಆಸೀಫ್ ಸೇಠ್ ಅವರಿಂದ ಚಾಲನೆ

Spread the love

36 ಕೋಟಿಯಲ್ಲಿ ಅನುದಾನದಲ್ಲಿ 45 ಕಿಲೋ ಮೀಟರ್ ಯುಜಿಡಿ ಕಾಮಗಾರಿ
ಶಾಸಕ ಆಸೀಫ್ ಸೇಠ್ ಅವರಿಂದ ಚಾಲನೆ
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ 36 ಕೋಟಿಯಲ್ಲಿ ಅನುದಾನದಲ್ಲಿ 45 ಕಿಲೋ ಮೀಟರ್ ಯುಜಿಡಿ ಕಾಮಗಾರಿಯನ್ನು ಕೈಗೊಳ್ಳಲು ಉತ್ತರ ಶಾಸಕ ಆಸೀಫ್ ಸೇಠ್ ಅವರು ಚಾಲನೆಯನ್ನು ನೀಡಿದರು.
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ 36 ಕೋಟಿಯಲ್ಲಿ ಅನುದಾನದಲ್ಲಿ 45 ಕಿಲೋ ಮೀಟರ್ ಯುಜಿಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಉತ್ತರ ಶಾಸಕ ಆಸೀಫ್ ಸೇಠ್ ಅವರು ಇಂದು ಕಾಮಗಾರಿಗೆ ಚಾಲನೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಉತ್ತರ ಶಾಸಕ ಆಸೀಫ್ ಸೇಠ್ ಅವರು 36 ಕೋಟಿಯಲ್ಲಿ 45 ಕಿಲೋ ಮೀಟರ್ ಯುಜಿಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಉತ್ತರ ಮತಕ್ಷೇತ್ರದಲ್ಲಿನ ಯುಜಿಡಿ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲಾಗುವುದು. 8 ತಿಂಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಇನ್ನು ಜನರು ಕೂಡ ತಮ್ಮ ಸಮಸ್ಯೆಗಳಿದ್ದರೇ, ತಮ್ಮ ಗಮನಕ್ಕೆ ತರಬೇಕು. 5 ತಂಡಗಳಲ್ಲಿ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದರು.
ಇನ್ನು ನಗರಸೇವಕ ಬಾಬಾಜಾನ್ ಮತವಾಲೆ ಅವರು ಶಾಸಕರ ವಿಶೇಷ ಪ್ರಯತ್ನದಿಂದ ಜನರ ಸಮಸ್ಯೆಯನ್ನು ನೀಗಿಸಲಾಗುತ್ತಿದೆ. ಇದರಿಂದಾಗಿ ಮಳೆಯಿಂದಾಗಿ ಉಂಟಾಗುತ್ತಿದ್ದ ಅತಿದೊಡ್ಡ ಸಮಸ್ಯೆಯನ್ನು ಪರಿಹರಿಸಿದಂತಾಗಿದ್ದು, ಜನರ ಪರವಾಗಿ ಅವರ ಕಾರ್ಯವನ್ನು ಶ್ಲಾಘಿಸುತ್ತೇವೆ ಎಂದರು.
ನಗರಸೇವಕಿ ರೇಷ್ಮಾ ಭೈರಕದಾರ್ ಅವರು, ನಾಲೆಯ ಸಮಸ್ಯೆ ತಮ್ಮ ಕ್ಷೇತ್ರದಲ್ಲಿ ಹೆಚ್ಚಾಗಿ ತೊಂದರೆಯಾಗುತ್ತಿತ್ತು. ಅದನ್ನು ಕೂಡ ಪರಿಹರಿಸಲು ಶಾಸಕರು ಪ್ರಯತ್ನಿಸುತ್ತಿದ್ದಾರೆ ಎಂದರು. ಇದಕ್ಕೆ ಶಾಸಕ ಆಸೀಫ್ ಸೇಠ್ ಅವರು ಕಿಲ್ಲಾ ಕೆರೆಯ ಬಳಿ ತ್ಯಾಜ್ಯ ಸಂಗ್ರಹವಾಗಿ ಉಂಟಾಗುತ್ತಿದ್ದ ಓವರ್ ಫ್ಲೋ ತಡೆಯುವ ಕಾಮಗಾರಿಯನ್ನು ಕೈಗೊಳ್ಳಲು 8 ಕೋಟಿ ರೂಪಾಯಿ ಕೂಡ ಮಂಜೂರಾಗಿದೆ ಎಂದು ತಿಳಿಸಿದರು. ಇದಕ್ಕೆ ನಗರಸೇವಕಿ ರೇಷ್ಮಾ ಭೈರಕದಾರ್ ಶಾಸಕರ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ಜಜನಿಕರು ಭಾಗಿಯಾಗಿದ್ಧರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ