Breaking News

ರಾಜ್ಯ ಸಭಾ ಸದಸ್ಯರಾದ ಶ್ರೀ ಈರಣ್ಣಾ ಕಡಾಡಿ ಇವರ ಅನುದಾನದಲ್ಲಿ ಆಧುನಿಕವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣ

Spread the love

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಕಲ್ಲೆಹೋಳ ಗ್ರಾಮದಲ್ಲಿ ರಾಜ್ಯ ಸಭಾ ಸದಸ್ಯರಾದ ಶ್ರೀ ಈರಣ್ಣಾ ಕಡಾಡಿ ಇವರ ಅನುದಾನದಲ್ಲಿ ಆಧುನಿಕವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣದ ಉದ್ಘಾಟನೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಈರಣ್ಣಾ ಕಡಾಡಿ ಇವರು ಮಾತನಾಡುತ್ತಾ ಹೇಳಿದರು ಚುನಾವಣೆಯ ನಂತರ ಯಾವುದೇ ಪಕ್ಷದವರಾಗಲಿ ಅಭಿವೃದ್ಧಿಗೆ ಒಟ್ಟುಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು. ಬೆಳಗಾವಿಯ ಬಿಜೆಪಿ ಗ್ರಾಮೀಣ ಮಂಡಲ ಮಾಜಿ ಅಧ್ಯಕ್ಷ ಶ್ರೀ ಧನಂಜಯ ಜಾದವ್ ಇವರು ಮಾತನಾಡುತ್ತಾ
ಶ್ರೀ ಈರಣ್ಣಾ ಕಡಾಡಿ ಇವರು ನೂರಕ್ಕಿಂತ ಹೆಚ್ಚಿಗೆ ಪ್ರತಿ ಗ್ರಾಮದಲ್ಲಿ ಬಸ್ ನಿಲ್ದಾಣಗಳ ತಮ್ಮ ಅನುದಾನದಲ್ಲಿ ಮಂಜೂರು ಮಾಡಿದ್ದಾರೆ ಹೋದ 3 ತಿಂಗಳಿಂದ ಅವರು 30 ಬಸ್ ನಿಲ್ದಾಣಗಳ ಉದ್ಘಾಟನೆಯನ್ನು ಮಾಡಿದ್ದಾರೆ. ಇನ್ನು 35 ಬಸ್ ನಿಲ್ದಾಣಗಳ ಉದ್ಘಾಟನೆಯು ಜರಗುಲಿದೆ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ಶ್ರೀ ಈರಣ್ಣ ಕಡಾಡಿಯವರ ಅನುದಾನದಲ್ಲಿ ಬಹಳಷ್ಟು ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.
ಈ ಸಮಯದಲ್ಲಿ ಬೆಳಗಾವಿಯ ಮಾಜಿ ಬುಡಾ ಅಧ್ಯಕ್ಷ ಶ್ರೀ ಸಂಜೆಯ ಬೆಳಗಾಂವ್ಕಾರ್, ರಾಮಚಂದ್ರ ಮನ್ನೊಳ್ಕರ್, ಪವನ್ ದೇಸಾಯಿ, ಸಾಯಿನಾಥ್ ಪಾಟೀಲ್, ಸುಳಗಾ (ಹಿಂಡಲಗಾ) ಗ್ರಾಮ ಪಂಚಾಯತಿ ಸದಸ್ಯ ಶ್ರೀ ಅನಿಲ್ ಪಾಟೀಲ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಬಂದುಭಗಿನಿಯರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ