Breaking News

ಬೆಳಗಾವಿ ತಾಲೂಕಿನ ಯಳ್ಳೂರಿನಲ್ಲಿ ಶ್ರೀ ಸ್ವಾಮಿ ಸಮರ್ಥರ ನೂತನ ಸೇವಾ ಕೇಂದ್ರದ ಪ್ರಾರಂಭ

Spread the love

ಬೆಳಗಾವಿ ತಾಲೂಕಿನ ಯಳ್ಳೂರಿನಲ್ಲಿ ಶ್ರೀ ಸ್ವಾಮಿ ಸಮರ್ಥರ ನೂತನ ಸೇವಾ ಕೇಂದ್ರದ ಪ್ರಾರಂಭ
ಶ್ರೀ ಸ್ವಾಮಿ ಸಮರ್ಥರ ನೂತನ ಸೇವಾ ಕೇಂದ್ರ
ಯಳ್ಳೂರಿನಲ್ಲಿ ನೂತನ ಕೇಂದ್ರ ಪ್ರಾರಂಭ
ದಿಂಡೋರಿ ಪ್ರಣೀತ ಅ. ಭಾ. ಶ್ರೀ ಸ್ವಾಮಿ ಸಮರ್ಥ ಸೇವಾ ಕೇಂದ್ರದ ಹೊಸ ಶಾಖೆ
ಇಂದು ಅದ್ಧೂರಿ ಸಂಭ್ರಮದ ಪಲ್ಲಕ್ಕಿ ಮೆರವಣಿಗೆ
ಅಖಿಲ ಭಾರತ ಶ್ರೀ ಸ್ವಾಮಿ ಸಮರ್ಥ ಸೇವಾ ಕೇಂದ್ರದ ವತಿಯಿಂದ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಇಂದು ಶ್ರೀ ಸ್ವಾಮಿ ಸಮರ್ಥರ ಹೊಸ ಸೇವಾ ಕೇಂದ್ರಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ದಾದಾಸಾಹೇಬ್ ಅವರ ಮಾರ್ಗದರ್ಶನದಲ್ಲಿ ‘ಗ್ರಾಮ ಅಭಿಯಾನ ವಿಭಾಗ’ದಡಿಯಲ್ಲಿ ಈ ಸೇವಾ ಕೇಂದ್ರವನ್ನು ದತ್ತ ಮಂದಿರದಲ್ಲಿ ಆರಂಭಿಸಲಾಗಿದೆ. ಈ ನಿಮಿತ್ಯ ಇಂದು ಅದ್ಧೂರಿ ಸಂಭ್ರಮದ ಪಲ್ಲಕ್ಕಿ ಮೆರವಣಿಗೆ
ನಡೆಸಲಾಯಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಶ್ರೀ ಸ್ವಾಮೀ ಸಮರ್ಥರ ಭಕ್ತಾಧಿಗಳು ಭಾಗಿಯಾಗಿದ್ಧರು.
ಈ ಕೇಂದ್ರದ ಶುಭಾರಂಭದ ನಿಮಿತ್ತ ಸೋಮವಾರ, ದಿನಾಂಕ ಅಕ್ಟೋಬರ್ ೨೭, ೨೦೨೫ ರಂದು ಶ್ರೀ ಸ್ವಾಮಿಗಳ ಭವ್ಯ ಪಲ್ಲಕ್ಕಿ ಉತ್ಸವವನ್ನು ಆಯೋಜಿಸಲಾಗಿತ್ತು. ಈ ಉತ್ಸವದಿಂದಾಗಿ ಯೆಳ್ಳೂರು ಗ್ರಾಮದಲ್ಲಿ ಸಂಭ್ರಮದ ಮತ್ತು ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು.
ಈ ಹೊಸ ಕೇಂದ್ರದಲ್ಲಿ ಇನ್ನು ಮುಂದೆ ಪ್ರತಿ ಸೋಮವಾರ ಸಂಜೆ ೬:೦೦ ಗಂಟೆಗೆ ಸರಿಯಾಗಿ ಆರತಿ ನಡೆಯಲಿದೆ. ಶ್ರೀ ದತ್ತ ಮಂದಿರ, ಲಕ್ಷ್ಮಿ ಗಲ್ಲಿ, ಯಳ್ಳೂರಿನಲ್ಲಿ ಈ ನೂತನ ಕೇಂದ್ರ ಕಾರ್ಯನಿರ್ವಹಿಸಲಿದೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ