Breaking News

ಬಿಹಾರ ಚುನಾವಣೆ ಬಳಿಕ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್​ ತೀರ್ಮಾನ: ಪರಮೇಶ್ವರ್

Spread the love

ಬಿಹಾರ ಚುನಾವಣೆ ಬಳಿಕ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್​ ತೀರ್ಮಾನ: ಪರಮೇಶ್ವರ್

ಬೆಂಗಳೂರು: ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆಯ ಅಗತ್ಯವಿದ್ರೆ ಬಿಹಾರ ಚುನಾವಣೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಇಂದು ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್. ನಾವು ಇಲ್ಲಿ ಕುಳಿತುಕೊಂಡು ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ಅವಶ್ಯಕತೆ ಇದ್ದರೆ ಬಿಹಾರ ಚುನಾವಣೆ ನಂತರ ಹೈಕಮಾಂಡ್​​ನವರೇ ತೀರ್ಮಾನ ಮಾಡುತ್ತಾರೆ. ಪುನಾರಚನೆಯೋ?, ಎರಡೂವರೆ ವರ್ಷದ ನಂತರ ಅಧಿಕಾರ ಬದಲಾವಣೆಯೋ?, ಏನೇ ಇದ್ರೂ ಹೈಕಮಾಂಡ್ ತೀರ್ಮಾನ ಮಾಡಲಿದೆ‌. ನಾವು ಇಲ್ಲಿ ಮಾತಾಡೋದರಿಂದ ಗೊಂದಲ ಆಗುತ್ತೆ. ಆಡಳಿತಕ್ಕೆ ಚುರುಕು ಕೊಡುವ ಕೆಲಸ ಆಗಬೇಕಾಗಿದೆ. ಸಂಪುಟ ಪುನಾರಚನೆ ಬಗ್ಗೆ ನನಗೆ ಯಾರೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿವಕುಮಾರ್​ ಅವರಿಗೆ ಹೋಲಿಕೆ ಮಾಡುವ ನಾಯಕರು ಈಗ ಯಾರಿದ್ದಾರೆ?. ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಹೇಳೋದಕ್ಕೆ ನಮಗೆ ಸಾಮರ್ಥ್ಯ ಇಲ್ಲ‌. ಅವರು ನಮ್ಮ ನಾಯಕರು. ನಮ್ಮ ಅಧ್ಯಕ್ಷರು ಮತ್ತು ಸಮರ್ಥರು ಇದ್ದಾರೆ. ಅವರಿಗೆ ಅಷ್ಟೊಂದು ಸಾಮರ್ಥ್ಯ ಇದೆ. ಅವರು ಸಿಎಂ ಆಗುವ ಬಗ್ಗೆ ನಾವು ಹೇಳುವುದಕ್ಕಾಗುವುದಿಲ್ಲ. ಹೈಕಮಾಂಡ್ ತೀರ್ಮಾನ ಅಂತಿಮ ಆದಾಗ ನಾವು ಅದಕ್ಕೆ ಬದ್ಧರಾಗಿರುತ್ತೇವೆ ಎಂದರು.

ನವೆಂಬರ್ ಕ್ರಾಂತಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಹೈಕಮಾಂಡ್​ನವರು ಏನು ತೀರ್ಮಾನ ಮಾಡುತ್ತಾರೋ ತಿಳಿದಿಲ್ಲ. ಹೈಕಮಾಂಡ್​ನವರು ಈ ಬಗ್ಗೆ ಏನೂ ಹೇಳಿಲ್ಲ. ದೆಹಲಿಯವರು ಏನಾದ್ರೂ ಹೇಳಿದ್ರೆ ನಾವು ಹೇಳಬಹುದು ಎಂದು ತಿಳಿಸಿದರು.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್​​ನಲ್ಲಿ ವರದಿ ಕೊಡುವುದಾಗಿ ಎಸ್ಐಟಿ ಹೇಳಿದೆ. ಅಕ್ಟೋಬರ್ 31ರೊಳಗೆ ಬಹುಶ: ವರದಿ ಕೊಡಬಹುದು. ಒಂದೆರಡು ದಿನ ಆಚೆ ಈಚೆ ಆಗಬಹುದು.‌ ಎಲ್ಲವನ್ನೂ ಸೇರಿಸಿ ಸಮಗ್ರ ತನಿಖಾ ವರದಿ ಕೊಡಲು ಹೇಳಿದ್ದೇವೆ. ಅವರೇ ಹೇಳಿದ ಹಾಗೆ ಅಕ್ಟೋಬರ್​​ನಲ್ಲಿ ತನಿಖೆ ಮುಗಿಯಲಿದೆ. ಕೆಮಿಕಲ್ ಅನಾಲಿಸಿಸ್ ಮಾಡಿ ವರದಿ ಕೊಡೋದಾಗಿ ಹೇಳಿದ್ದಾರೆ. ಯಾವ ರೀತಿ ವರದಿ ಕೊಡ್ತಾರೆ ನೋಡಬೇಕು?. ಮಧ್ಯಂತರ ವರದಿ ಕೊಡ್ತಾರೋ?, ಪೂರ್ಣ ವರದಿ ಕೊಡ್ತಾರೋ ನೋಡಬೇಕು ಎಂದು ಇದೇ ವೇಳೆ ಹೇಳಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ