Breaking News

ಗಂಡನ ರಾಸಲೀಲೆ ವಿಡಿಯೋ ನೋಡಿ ಹೆಂಡ್ತಿ ಶಾಕ್

Spread the love

ಬೆಂಗಳೂರು, (ಅಕ್ಟೋಬರ್ 16): ಪತ್ನಿಯಿಂದ ಅಂತರ ಕಾಯ್ದುಕೊಂಡು ಪರಸ್ತ್ರೀಯರೊಂದಿಗೆ ಸರಸ ಸಲ್ಲಾಪವಾಡುತ್ತಿದ್ದ ಪತಿರಾಯ ಸಿಕ್ಕಿಬಿದ್ದಿದ್ದಾನೆ. ಪತ್ನಿ ಅನ್ನಪೂರ್ಣ ಹಾಗೂ ಪತಿ ನಾರಾಯಣ್ 20 ವರ್ಷಗಳ ಹಿಂದೆ ಮದುವೆಯಾಗಿದ್ದು, ಬೆಂಗಳೂರಿನ ಇಂದಿರಾನಗರದ ಬಿಎಂ ಕಾವಲ್ ನಲ್ಲಿ ವಾಸವಿದ್ದರು. ಆದ್ರೆ, ಇತ್ತೀಚೆಗೆ ಪತಿ ಹೆಂಡತಿಯಿಂದ ಅಂತರ ಕಾಯ್ದುಕೊಂಡು ಬೇರೆ ಮಹಿಳೆಯರ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದಾನೆ. ಅಲ್ಲದೇ ಮಹಿಳೆಯರೊಂದಿಗಿನ ಪಲ್ಲಂಗದಾಟವನ್ನು ವಿಡಿಯೋ ಮಾಡಿಕೊಂಡಿದ್ದು, ಇದೀಗ ಈ ಹಸಿ ಬಿಸಿ ವಿಡಿಯೋಗಳು ಹೆಂಡ್ತಿ ಕೈಗೆ ಸಿಕ್ಕಿವೆ.ನಾರಾಯಣ್.ಪತ್ನಿಗೆ ಕೆಪಿಸಿಸಿ ನಲ್ಲಿ ಕೆಲಸ ಮಾಡುತ್ತೇನೆ ಎಂದು 20 ವರ್ಷದ ಹಿಂದೆ ಮದುವೆ ಆಗಿದ್ದ.ಪ್ರಾರಂಭದಲ್ಲಿ ಎಲ್ಲವೂ ಚನ್ನಾಗಿಯೇ ಇತ್ತು.ಆದ್ರೆ ಬರುತ್ತಾ ಬರುತ್ತಾ ಪತ್ನಿ ಬೋರ್ ಆಗಿದ್ದಾಳೆಂದು ಪರಸ್ತ್ರೀ ಸಾಂಗತ್ಯ ಬೆಳೆಸಿದ್ದ. ಕೆಪಿಸಿಸಿ ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ತಿದ್ದ ಆತ ಡಿಸಿಎಂ ಸೇರಿ ಹಲವರು ನನಗೆ ಆತ್ಮೀಯರು ಎಂದು ಮಹಿಳೆಯರ ಮುಂದೆ ಬಿಲ್ಡಪ್ ಕೊಟ್ಟು ಅವರನ್ನ ಪುಸಲಾಯಿಸಿ ಮಂಚಕ್ಕೆ ಕರೆಯುತ್ತಿದ್ದ. ಆದ್ರೆ ನಾರಾಯಣನ ಕಾಮಕಾಂಡ ಹೆಂಡ್ತಿಗೆ ಗೊತ್ತಾಗುತ್ತಿದ್ದಂತೆಯೇ ಸಣ್ಣ ಪುಟ್ಟ ವಿಚಾರಕ್ಕೆ‌ ಆಕೆಯೊಂದಿಗೆ ಗಲಾಟೆ ಮಾಡುತ್ತಿದ್ದ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ