Breaking News

ಹಾಡಹಗಲೇ ವಿದ್ಯಾರ್ಥಿನಿ ಹತ್ಯೆ

Spread the love

ಬೆಂಗಳೂರು: ಹಾಡಹಾಗಲೇ ಕಾಲೇಜು ವಿದ್ಯಾರ್ಥಿನಿಯನ್ನು ಚಾಕುವಿನಿಂದ ಕುತ್ತಿಗೆಗೆ ಚುಚ್ಚಿ ಹತ್ಯೆಮಾಡಿರುವ ಘಟನೆ ಮಂತ್ರಿಮಾಲ್ ಹಿಂಭಾಗದ ರೈಲ್ವೇ ಟ್ರ್ಯಾಕ್ ಬಳಿ ನಡೆದಿದೆ. ಶ್ರೀರಾಮಪುರ ಪೊಲೀಸ್​ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ಧಾರೆ.

ಘಟನೆ ಬಗ್ಗೆ ಪೊಲೀಸರು ನೀಡಿರುವ ಮಾಹಿತಿ: ಯಾಮಿನಿ ಪ್ರಿಯಾ (20) ಹತ್ಯೆಯಾದ ವಿದ್ಯಾರ್ಥಿನಿ. ಬನಶಂಕರಿಯ ಖಾಸಗಿ ಕಾಲೇಜೊಂದರಲ್ಲಿ ಬಿಫಾರ್ಮ್ ವ್ಯಾಸಂಗ ಮಾಡುತ್ತಿದ್ದ ಯಾಮಿನಿ ಕಾಲೇಜು ಮುಗಿಸಿ ಇಂದು ಮಧ್ಯಾಹ್ನ ಸ್ವಾತಂತ್ರ್ಯ ನಗರದಲ್ಲಿರುವ ನಿವಾಸಕ್ಕೆ ಬರುವಾಗ ಮಂತ್ರಿಮಾಲ್ ಹಿಂಭಾಗದ ರೈಲ್ವೇ ಟ್ರ್ಯಾಕ್ ಬಳಿ ಆರೋಪಿ ವಿಘ್ನೇಶ್​ ಹಿಂಬದಿಯಿಂದ ಬಂದು ಮುಖದ ಮೇಲೆ ಖಾರದಪುಡಿ ಎರಚಿ, ಚಾಕುವಿನಿಂದ ಕುತ್ತಿಗೆ ಚುಚ್ಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಯಾಮಿನಿ ಕುಸಿದುಬಿದ್ದು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ಧಾಳೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ಧಾರೆ.

ಆರು ತಿಂಗಳ ಹಿಂದೆ ಕೊಲೆಯಾದ ಯುವತಿ ತಂದೆ ಪೊಲೀಸರಿಗೆ ದೂರು ನೀಡಿದ್ದರು: ಕೆಲ ತಿಂಗಳಿಂದ ಪ್ರೀತಿಸುವಂತೆ ಆರೋಪಿ ಯುವತಿ ಹಿಂದೆ ಬಿದ್ದಿದ್ದ. ಯುವತಿಯ ಪೋಷಕರು ಹಲವು ಬಾರಿ ಬೈದು ಬುದ್ಧಿ ಹೇಳಿದರೂ ಯುವತಿಗೆ ಟಾರ್ಚರ್ ನೀಡುವುದನ್ನು ಮುಂದುವರೆಸಿದ್ದ. ಆರು ತಿಂಗಳ ಹಿಂದೆ ಯುವತಿ ತಂದೆ ಗೋಪಾಲ್ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ಪೊಲೀಸರು ಕರೆಯಿಸಿ ಎಚ್ಚರಿಕೆ ನೀಡಿ ಆತನಿಂದ ಮುಚ್ಚಳಿಕೆ ಬರೆಸಿಕೊಂಡಿದ್ದರು. ಇಂದು ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ವಾಪಸ್ ಬರುವಾಗ ಯುವತಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ಧಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ