Breaking News

65 ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ವಶಪಡೆಸಿಕೊಂಡಿದ್ದ ಮಾದಕ ವಸ್ತು ನಾಶ ಬೆಳಗಾವಿ ಅಬಕಾರಿ ಜಂಟಿ ವಿಭಾಗದಲ್ಲಿ ಕಾರ್ಯಾಚರಣೆ

Spread the love

65 ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ವಶಪಡೆಸಿಕೊಂಡಿದ್ದ ಮಾದಕ ವಸ್ತು ನಾಶ
ಬೆಳಗಾವಿ ಅಬಕಾರಿ ಜಂಟಿ ವಿಭಾಗದಲ್ಲಿ ಕಾರ್ಯಾಚರಣೆ
65 ಎನ್.ಡಿ.ಪಿ.ಎಸ್ ಪ್ರಕರಣಗಳ ಮಾದಕ ವಸ್ತು ನಾಶ
ಬೆಳಗಾವಿ ಅಬಕಾರಿ ಜಂಟಿ ವಿಭಾಗದಲ್ಲಿ ಕಾರ್ಯಾಚರಣೆ
5 ಜಿಲ್ಲೆಯ ಅಬಕಾರಿ ಉಪಾಯುಕ್ತರು ಭಾಗಿ
ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳು
ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿದ್ದ ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ಇಂದು ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿರುವ ಎಸ್‌ಪಿ ಕೆಮಿಕಲ್ಸ್‌ ಪ್ರೈ.ಲಿ. ಸಂಸ್ಥೆಯ ಫರ್ನೇಸ್ ನಲ್ಲಿ ಪರಿಸರಕ್ಕೆ ಹಾನಿಯಾಗದಂತೆ ನಿಯಮಾನುಸಾರ ನಾಶಪಡಿಸಲಾಯಿತು.
ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಬೆಳಗಾವಿ ವಿಭಾಗದ ಶ್ರೀ ಎಫ್.ಹೆಚ್. ಚಲವಾದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಡ್ರಗ್ ಡಿಸ್ಟೋಸಲ್ ಕಮಿಟಿ ಸಭೆಯಲ್ಲಿ, ಬೆಳಗಾವಿ ದಕ್ಷಿಣ, ಚಿಕ್ಕೋಡಿ, ಧಾರವಾಡ, ಬಾಗಲಕೋಟೆ (ಪ್ರಭಾರ) ಮತ್ತು ವಿಜಯಪುರ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರು ಸದಸ್ಯರಾಗಿ ಪಾಲ್ಗೊಂಡಿದ್ದರು.
ಒಟ್ಟು 65 ಪ್ರಕರಣಗಳಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ವಶಪಡಿಸಿಕೊಂಡ ಹಾಗೂ ಪೊಲೀಸ್ ಇಲಾಖೆಯಿಂದ ಹಸ್ತಾಂತರಗೊಂಡ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ.ಬೆಳಗಾವಿ ದಕ್ಷಿಣ 18ಧಾರವಾಡ 10ವಿಜಯಪುರ 34ಬಾಗಲಕೋಟೆ 03ಒಟ್ಟು 65
ಪ್ರಕರಣಗಳು ದಾಖಲಾಗಿದ್ದವು. ಗಾಂಜಾ: 1213.146 ಕೆ.ಜಿ., ಗಾಂಜಾ ಗಿಡಗಳು: 101, ಪಾಪಿ ಬೀಜಗಳು 37.100 ಕೆ.ಜಿ., ಪಾಪಿ ಸ್ಯಾಚೆಟ್‌ಗಳು: 13, ಅಫೀಮು : 50.414 ಕೆ.ಜಿ., ತಂಬಾಕು : 9.602 ಕೆ.ಜಿ., ಹೆರಾಯಿನ್ 11.56 ಕೆ.ಜಿ. ಮತ್ತು ಹಶೀಶ್ : 3.439 ಕೆ.ಜಿ. ನಾಶಪಡಿಸಲಾಯಿತು. ಸಮಿತಿಯ ಸದಸ್ಯರು ಹಾಗೂ ಎಲ್ಲ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರ ಕಚೇರಿಗಳ ಎನ್.ಡಿ.ಪಿ.ಎಸ್. ಮಾಲಖಾನಾ ಉಸ್ತುವಾರಿಗಳಾದ ಅಬಕಾರಿ ಅಧೀಕ್ಷಕರುಗಳು ಮತ್ತು ಸಂಬಂಧಪಟ್ಟ ಅಬಕಾರಿ ಉಪ ಅಧೀಕ್ಷಕರು, ನಿರೀಕ್ಷಕರು ಹಾಗೂ ಸಿಬ್ಬಂದಿಗಳ ಸಮಕ್ಷಮದಲ್ಲಿ ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಈ ಪ್ರಕ್ರಿಯೆ ನಡೆಯಿತು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ