ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ಸಮಸ್ತರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಈ ಅವಿರೋಧ ಆಯ್ಕೆಯು ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಸಹಕಾರದ ಸಂಕೇತವಾಗಿದೆ. ಮುಖ್ಯವಾಗಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ Satish Jarkiholi, ಅರಭಾವಿ ಶಾಸಕರಾದ ಶ್ರೀ ಬಾಲಚಂದ್ರ ಜಾರಕಿಹೊಳಿ, ಯರಗಟ್ಟಿ ತಾಲ್ಲೂಕಿನ ಎಲ್ಲಾ ಪಿ.ಕೆ.ಪಿ.ಎಸ್. (PKPS) ಸೊಸೈಟಿಗಳ ಅಧ್ಯಕ್ಷರುಗಳಿಗೆ, ಸರ್ವ ಸದಸ್ಯರುಗಳಿಗೆ, ಮತ್ತು ಎಲ್ಲ ಮುಖಂಡರುಗಳಿಗೆ ನನ್ನ ಅನಂತ ಕೃತಜ್ಞತೆಗಳು.
ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ.”
Laxmi News 24×7