Breaking News

ಚಿಕ್ಕೋಡಿ ಆಸ್ತಿ ವಿವಾದ, ಗಂಡ ಓಡಿಸುತ್ತಿದ್ದ ಕಾರಿಗೆ ಬೆಂಕಿ ಇಟ್ಟ ಪತ್ನಿ

Spread the love

ಚಿಕ್ಕೋಡಿ: ಆಸ್ತಿ ವಿವಾದ ಹಿನ್ನೆಲೆ ಗಂಡ ಓಡಿಸುತ್ತಿದ್ದ ಈಕೋ ಕಾರಿಗೆ ಪತ್ನಿ ಬೆಂಕಿ ಇಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೋಗತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಶಿವನಗೌಡ ಪಾಟೀಲ್ ಮತ್ತು ಪತ್ನಿ ಸಾವಿತ್ರಿ ಪಾಟೀಲ್‌ ನಡುವೆ ಕೌಟುಂಬಿಕ ಕಲಹ ಇತ್ತು. ಒಂದೇ ಮನೆಯಲ್ಲಿದ್ರೂ ಆಸ್ತಿ ಹಣಕ್ಕಾಗಿ ಗಂಡ ಹೆಂಡತಿ ಕಿತ್ತಾಟ ನಡೆಸುತಿದ್ರು. ಇಂದು ಇಬ್ಬರ ನಡುವಿನ ಕಿತ್ತಾಟ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿಗೆ ಪತ್ನಿ ಗಂಡನ ಕಾರಿಗೆ ಬೆಂಕಿ ಇಟ್ಟಿದ್ದಾಳೆ.
ಪೆಟ್ರೋಲ್ ಸುರಿದು ಐನಾತಿ ಪತ್ನಿ ಸಾವಿತ್ರಿ ಪಾಟೀಲ್‌ ಕಾರಿಗೆ ಬೆಂಕಿ ಇಟ್ಟಿದ್ದಾಳೆ. ಕಾರಿಗೆ ಬೆಂಕಿ ಬೀಳ್ತಿದ್ದಂತೆ ಕಾಪಾಡಿ ಕಾಪಾಡಿ ಎಂದು ಪತಿ ಶಿವನಗೌಡ ಕಿರುಚಿದ್ದಾನೆ. ಈ ಘಟನೆಯಲ್ಲಿ ಸುಟ್ಟು ಕಾರು ಕರಕಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Spread the love

About Laxminews 24x7

Check Also

ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ರೈತ ಸಾವು – ಇನ್ನೋರ್ವ ಗಂಭೀರ

Spread the loveರಾಯಚೂರು: ಜಿಲ್ಲೆಯ ಸಿಂಧನೂರು  ತಾಲೂಕಿನ ಸುಲ್ತಾನಪುರ ಹತ್ತಿರದ ತೆಗ್ಗಿನ ಕ್ಯಾಂಪ್‌ನಲ್ಲಿ ಸಿಡಿಲು ಬಡಿದು ಓರ್ವ ರೈತ ಮೃತಪಟ್ಟಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ