Breaking News

ಆಸ್ತಿ ತೆರಿಗೆ ಕಡಿತಗೊಳಿಸಿ ಇಲ್ಲದಿದ್ದರೇ ಸಾಮೂಹಿಕ ರಾಜೀನಾಮೆ

Spread the love

ಆಸ್ತಿ ತೆರಿಗೆ ಕಡಿತಗೊಳಿಸಿ ಇಲ್ಲದಿದ್ದರೇ ಸಾಮೂಹಿಕ ರಾಜೀನಾಮೆ…
ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿರುವ ಆಸ್ತಿ ತೆರಿಗೆಯನ್ನು ಕಡಿತಗೊಳಿಸಬೇಕು.
ಚುನಾಯಿತ ಪ್ರತಿನಿಧಿಗಳ ಬೇಡಿಕೆಯನ್ನು ಮನ್ನಿಸದಿದ್ದರೇ, ರಾಜೀನಾಮೆ ನೀಡುತ್ತೇವೆಂದು ಬೆಳಗಾವಿ ತಾಲೂಕಿನ ಕಾಕತಿ ಗ್ರಾಮ ಪಂಚಾಯತಿ ಸದಸ್ಯರು ಎಚ್ಚರಿಕೆಯನ್ನು ನೀಡಿದ್ದಾರೆ.
ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಮುಂದೆ ಕಾಕತಿ ಗ್ರಾಮ ಪಂಚಾಯತಿಯ ಸದಸ್ಯರು ಪ್ರತಿಭಟನೆಯನ್ನು ನಡೆಸಿ, ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಕಾಕತಿ ಗ್ರಾಮವು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಹಿನ್ನೆಲೆ ಆಸ್ತಿ ತೆರಿಗೆಯನ್ನು ಕೂಡ ಹೆಚ್ಚಿಸಲಾಗಿದೆ.
ಇದರಿಂದಾಗಿ ಬಡಜನರು ಮತ್ತು ರೈತರಿಗೆ ಇದು ಬಡವರ ಮೇಲೆ ಹೊರೆಯಾಗಿದೆ. ಕೂಡಲೇ ತೆರಿಗೆ ಹೆಚ್ಚಳವನ್ನು ಕಡಿತಗೊಳಿಸದಿದ್ದರೇ, ಸಾಮೂಹಿಕ ರಾಜೀನಾಮೆ ನೀಡಲಾಗುವುದು ಎಂದು ಗ್ರಾಮ ಪಂಚಾಯತ ಸದಸ್ಯ ಗಜಾನನ ಗವ್ಹಾಣೆ ಅವರು ಎಚ್ಚರಿಕೆಯನ್ನು ನೀಡಿದರು. 
ಕಾಕತಿ ಗ್ರಾಮದಲ್ಲಿ ಹೆಚ್ಚಾಗಿ ರೈತರೇ ವಾಸಿಸುತ್ತಾರೆ. ಆದರೇ, ಈ ಬಾರಿ ಸುಮಾರು ಶೇ. 5 ರಷ್ಟು ತೆರಿಗೆಯನ್ನು ಹೆಚ್ಚಿಸಲಾಗಿದೆ. ಇದು ಜನಸಾಮಾನ್ಯರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ವೈಜ್ಞಾನಿಕವಾಗಿ ತೆರಿಗೆಯನ್ನು ಹೆಚ್ಚಿಸಬೇಕು. ನ್ಯಾಯ ಸಿಗುವವರೆಗೂ ನಮ್ಮ ಪ್ರತಿಭಟನೆ ನಿರಂತರವಾಗಿರುತ್ತದೆ ಎಂದು ಮತ್ತೋರ್ವ ಸದಸ್ಯರು ಹೇಳಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಪಾಟೀಲ್, ಬಿ.ಟಿ. ಟುಮರಿ, ಬಿ.ಜೆ. ಹಿರೇಮಠ, ಮಾರುತಿ ಕಂಗ್ರಾಳಕರ, ಮಲ್ಲಪ್ಪ ಗೋಮನಾಚೆ, ಸಿದ್ಧಪ್ಪ ಟುಮರಿ, ಜಿ.ಎಸ್. ಶಿವಪೂಜಿಮಠ, ಮಹೇಶ್ ರಂಗಾಯಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ