Breaking News

ಹೆಮ್ಮೆಯ ಮುಧೋಳ ಶ್ವಾನಕ್ಕೆ ಮತ್ತೊಂದು ಗರಿ. ಇನ್ಮುಂದೆ ಒಡಿಶಾದ ಸಿಐಡಿ ಪತ್ತೇದಾರನಾಗಿ ಮುಧೋಳ ಶ್ವಾನ ಬಳಕೆ‌

Spread the love

ಹೆಮ್ಮೆಯ ಮುಧೋಳ ಶ್ವಾನಕ್ಕೆ ಮತ್ತೊಂದು ಗರಿ.
ಇನ್ಮುಂದೆ ಒಡಿಶಾದ ಸಿಐಡಿ ಪತ್ತೇದಾರನಾಗಿ ಮುಧೋಳ ಶ್ವಾನ ಬಳಕೆ‌
ಒಡಿಶಾ ಕಟಕ್‌ನ ಸಿಐಡಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳಿಂದ ಪ್ರಶಂಸೆ
ಮುಧೋಳ ಶ್ವಾನ ಸಂಶೋಧನಾ ಮಾಹಿತಿ ಕೇಂದ್ರಕ್ಕೆ ಭೇಟಿ
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಹೆಮ್ಮೆಯ ಮುಧೋಳ ಶ್ವಾನವು ಇದೀಗ ಮತ್ತೊಂದು ಪ್ರಮುಖ ಭದ್ರತಾ ಸಂಸ್ಥೆಯನ್ನು ಪ್ರವೇಶಿಸುವ ಮೂಲಕ ತನ್ನ ಹೆಮ್ಮೆಯ ಗರಿಯನ್ನು ಹೆಚ್ಚಿಸಿಕೊಂಡಿದೆ. ಇನ್ಮುಂದೆ ಈ ಶ್ವಾನವು ಒಡಿಶಾದ ಸಿಐಡಿ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್ ಪತ್ತೇದಾರನಾಗಿ ಕಾರ್ಯನಿರ್ವಹಿಸಲಿದೆ.
ಇತ್ತೀಚೆಗೆ ಒಡಿಶಾ ಕಟಕ್‌ನ ಸಿಐಡಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಮುಧೋಳ ಶ್ವಾನ ಸಂಶೋಧನಾ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿಂದ 4 ಗಂಡು ಮತ್ತು 1 ಹೆಣ್ಣು ಮರಿಯನ್ನು ಕೊಂಡೊಯ್ದಿದ್ದಾರೆ.
ಈಗಾಗಲೇ ಭಾರತೀಯ ಸೇನೆ, ಸಿಐಎಸ್‌ಎಫ್, ಬಿಎಸ್‌ಎಫ್, ಸಿಎಸ್‌ಎಫ್, ಮೀರತ್‌ನ ಆರ್‌ವಿಎಸ್ ಸೇರಿದಂತೆ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುಧೋಳ ಶ್ವಾನ ಇದೀಗ ಒಡಿಶಾದ ಸಿಐಡಿ ಕ್ರೈಂ ಬ್ರ್ಯಾಂಚ್‌ಗೆ ಪ್ರವೇಶ ಪಡೆದಿದೆ. ದೇಶದ ಪ್ರತಿಷ್ಠಿತ ಭದ್ರತೆ ಮತ್ತು ಪತ್ತೆದಾರಿಕೆ ಸಂಸ್ಥೆಗಳಲ್ಲಿ ಈ ಶ್ವಾನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಇದು ಕೇಂದ್ರಕ್ಕೆ ಮತ್ತಷ್ಟು ಹೆಮ್ಮೆ ತಂದಿದೆ. ಮುಧೋಳ ಶ್ವಾನವು ತನ್ನ ನೀಳ ದೇಹ, ಉದ್ದ ಕಾಲು ಮತ್ತು ವಾಸನೆ ಗ್ರಹಿಕೆಯಲ್ಲಿನ ಅಸಾಧಾರಣ ಸಾಮರ್ಥ್ಯದಿಂದಾಗಿ ದೇಶಾದ್ಯಂತ ಜನಪ್ರಿಯವಾಗಿದೆ.
ಗಂಟೆಗೆ ಸುಮಾರು 50 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿರುವ ಈ ಶ್ವಾನವು ಪತ್ತೇದಾರಿಕೆ ಕಾರ್ಯಗಳಿಗೆ ಅತ್ಯಂತ ಸೂಕ್ತವಾಗಿದೆ. ಈ ವಿಶೇಷತೆಗಳಿಂದಾಗಿಯೇ ಮುಧೋಳ ಶ್ವಾನ ಕೇಂದ್ರದಿಂದ ಪ್ರತಿ ವರ್ಷ ಸುಮಾರು 400 ಮರಿಗಳನ್ನು ದೇಶದ ವಿವಿಧ ಭದ್ರತಾ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳು ಖರೀದಿಸುತ್ತಿದ್ದಾರೆ.
ಅಲ್ಲದೆ, ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಮುಧೋಳ ಶ್ವಾನದ ಸಾಮರ್ಥ್ಯವನ್ನು ಪ್ರಶಂಸಿಸಿರುವುದು ಶ್ವಾನದ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಒಡಿಶಾ ಸಿಐಡಿ ಸೇರ್ಪಡೆಯು ಮುಧೋಳ ಶ್ವಾನದ ರಾಷ್ಟ್ರೀಯ ಮಹತ್ವವನ್ನು ಮತ್ತೊಮ್ಮೆ ದೃಢಪಡಿಸಿದೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ