Breaking News

ಕಳೆದುಹೋದ ಮೊಬೈಲನ್ನು ಹತ್ತೇ ನಿಮಿಷದಲ್ಲಿ ಹುಡುಕಿ ಕೊಟ್ಟ ಬೆಂಗಳೂರು ಪೊಲೀಸರು! ಯುವತಿಯ ಪೋಸ್ಟ್ ವೈರಲ್

Spread the love

ಬೆಂಗಳೂರು, ಸೆಪ್ಟೆಂಬರ್ 26: ಕಳೆದುಹೋದ ಮೊಬೈಲ್ ಫೋನ್ ಅನ್ನು ಬೆಂಗಳೂರಿನ (Bengaluru) ಮಹದೇವಪುರ ಪೊಲೀಸರು ಕೇವಲ 10 ನಿಮಿಷಗಳ ಅವಧಿಯಲ್ಲಿ ಹುಡುಕಿಕೊಟ್ಟ ಬಗ್ಗೆ ಯುವತಿಯೊಬ್ಬರು ಫೇಸ್​​ಬುಕ್​ನಲ್ಲಿ ಮಾಡಿರುವ ಪೋಸ್ಟ್ ಈಗ ವೈರಲ್ ಆಗುತ್ತಿದೆ.

ಒಂದೆಡೆ, ಬೆಂಗಳೂರು ಪೊಲೀಸರ ವೃತ್ತಿಪರತೆ ಮತ್ತು ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದರೆ ಮತ್ತೊಂದೆಡೆ, ನಮ್ಮ ಸ್ವತ್ತುಗಳ ಬಗ್ಗೆ ಸಾರ್ವಜನಿಕ ಪ್ರದೇಶಗಳಲ್ಲಿ ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆಯೂ ಚರ್ಚೆಗಳಾಗುತ್ತಿವೆ.

ಪೊಲೀಸರು ಮೊಬೈಲ್ ಹುಡುಕಿಕೊಟ್ಟ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬೆಬಿನಾ ಶ್ರೀಚಂದನ್ ಎಂಬವರು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅತ್ತ ವೈಟ್​ಫೀಲ್ಡ್ ಪೊಲೀಸರೂ ‘ಸ್ವಿಫ್ಟ್ ಆ್ಯಂಡ್ ಡೆಡಿಕೇಟೆಡ್ ಪೊಲೀಸಿಂಗ್’ ಎಂದು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ