Breaking News

ಇಟಗಿ ಸರ್ಕಾರಿ ಶಾಲೆ ಶಿಪ್ಟ್ – ವಿದ್ಯಾರ್ಥಿಗಳ ವಿರೋಧ – ಸ್ಥಳದಲ್ಲೇ ಮುಂದುವರೆಸಲು ಭರವಸೆ ನೀಡಿದ ಅಂಜಲಿ ನಿಂಬಾಳ್ಕರ್

Spread the love

ಇಟಗಿ ಸರ್ಕಾರಿ ಶಾಲೆ ಶಿಪ್ಟ್ – ವಿದ್ಯಾರ್ಥಿಗಳ ವಿರೋಧ – ಸ್ಥಳದಲ್ಲೇ ಮುಂದುವರೆಸಲು ಭರವಸೆ ನೀಡಿದ ಅಂಜಲಿ ನಿಂಬಾಳ್ಕರ್
ಸರ್ಕಾರಿ ಪ್ರೌಢ ಶಾಲೆ ಬೇರೆ ಊರಿಗೆ ಶಿಪ್ಟ್ ಮಾಡಿರುವುದನ್ನು ಖಂಡಿಸಿ ಶನಿವಾರ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಖಾನಾಪುರ ತಾಲೂಕಿನ ಶಾಲೆಗಳನ್ನ ಬಂದ್ ಮಾಡಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದ ವಿಧ್ಯಾರ್ಥಿಗಳ ಸಮಸ್ಯೆ ತಿಳಿದ ಕಾಂಗ್ರೆಸ್ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಇಟಗಿ ಗ್ರಾಮದಲ್ಲಿಯೇ ಸರಕಾರಿ ಶಾಲೆಯನ್ನು ಮುಂದುವರೆಸುತ್ತೇವೆ ಎಂದು ಭರವಸೆ ನೀಡಿದರು.
ಇಟಗಿ ಗ್ರಾಮದಲ್ಲೇ ಪ್ರೌಢ ಶಾಲೆ ಮುಂದುವರೆಸುವಂತೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಗೆ ಮಕ್ಕಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅಂಜಲಿ ಸಂಬಂಧಿಸಿದ ಸಚಿವರಿಗೆ ಕರೆ ಮಾಡಿ ಇಟಗಿ ಗ್ರಾಮದ ಶಾಲೆಯನ್ನು ಸ್ಥಳಾಂತರ ಮಾಡದಂತೆ ಮನವಿ ಮಾಡಿದರು.
ಪಕ್ಕದೂರಿಗೆ ಪ್ರೌಢ ಶಾಲೆ ಶಿಪ್ಟ್ ಮಾಡಿದ್ದ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು ಮಾಜಿ ಶಾಸಕಿ ಅಂಜಲಿಗೆ ಧನ್ಯವಾದ ಹೇಳಿದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ