Breaking News

ಜಾತಿ ಪಟ್ಟಿಯಲ್ಲಿ ಕ್ರಿಶ್ಚಿಯನ್ ಧರ್ಮದ ಜೊತೆ ಹಿಂದೂ ಜಾತಿ ಕಾಲಂ ಗೊಂದಲ

Spread the love

ಬೆಂಗಳೂರು: ಜಾತಿ ಗಣತಿ ಇದೇ ಸೆ. 22ರಿಂದ ಆರಂಭವಾಗಲಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಲು ಸಕಲ ಸಿದ್ಧತೆ ನಡೆಸಿದೆ. ಈ ಮಧ್ಯೆ ಜಾತಿ ಪಟ್ಟಿಯಲ್ಲಿ ಮತಾಂತರಿತ ಕ್ರಿಶ್ಚಿಯನ್ ಧರ್ಮದೊಂದಿಗೆ ಮೂಲ ಜಾತಿಯನ್ನು ಪ್ರತ್ಯೇಕವಾಗಿ ತೋರಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.‌ ಅಷ್ಟಕ್ಕೂ ಏನಿದು ಜಾತಿ ಪಟ್ಟಿಯಲ್ಲಿನ ಮತಾಂತರ ಜಾತಿ ಕಾಲಂ ವಿವಾದ ಎಂಬ ವರದಿ ಇಲ್ಲಿದೆ.

ಸೆ.22 ರಿಂದ ರಾಜ್ಯ ಸರ್ಕಾರ ರಾಜ್ಯದಲ್ಲಿ ಮತ್ತೊಂದು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಅ.7ರ ತನಕ ನಡೆಯಲಿರುವ 16 ದಿನಗಳ ಈ ಸಮೀಕ್ಷೆಯಲ್ಲಿ 1.75 ಲಕ್ಷ ಗಣತಿದಾರರು ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿನ ಸುಮಾರು 7 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗುವುದು. ಸಮೀಕ್ಷೆಗಾಗಿ 60 ಪ್ರಶ್ನಾವಳಿಗಳನ್ನು ಸಿದ್ಧಪಡಿಸಲಾಗಿದೆ. ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ರಾಜ್ಯದಲ್ಲಿ ಗುರುತಿಸಿರುವ ಜಾತಿ ಉಪಜಾತಿಗಳ ಪಟ್ಟಿಯನ್ನು ಪ್ರಕಟಿಸಿದೆ. ಅದರಂತೆ 1,561 ಜಾತಿ, ಉಪಜಾತಿಗಳನ್ನು ಪಟ್ಟಿ ಮಾಡಲಾಗಿದೆ.

ಜಾತಿ ಪಟ್ಟಿಯಲ್ಲಿ ಕ್ರಿಶ್ಚಿಯನ್ ಜೊತೆ ಮೂಲ ಜಾತಿ ಹೆಸರು: ಜಾತಿಗಳ ಪಟ್ಟಿಯಲ್ಲಿ ಮತಾಂತರಿತ ಕ್ರಿಶ್ಚಿಯನ್ ಧರ್ಮದೊಂದಿಗೆ ಮೂಲ ಜಾತಿಯನ್ನು ಪ್ರತ್ಯೇಕವಾಗಿ ತೋರಿಸಲಾಗಿದೆ. ಇದು ಇದೀಗ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಹಿಂದೂ ಧರ್ಮದ ಜಾತಿಗಳಿಂದ ಕ್ರೈಸ್ತ ಮತಕ್ಕೆ ಮತಾಂತರವಾಗಿರುವವರು ಅವರ ಮೂಲ ಜಾತಿ ಹೆಸರನ್ನು ಸೇರಿಸುವುದನ್ನು ಕೈಬಿಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಹಿಂದೂ ಧರ್ಮದ ಜಾತಿಗಳಿಂದ ಕ್ರೈಸ್ತ ಮತಕ್ಕೆ ಮತಾಂತರವಾಗಿರುವವರು ಅವರ ಮೂಲ ಜಾತಿ ಹೆಸರನ್ನು ನಮೂದು ಮಾಡುವ ಮೂಲಕ ಇತರೆ ಹಿಂದುಳಿದ ಜಾತಿಗಳ (ಒಬಿಸಿ) ಒಳಮೀಸಲಾತಿಯಲ್ಲಿ ದೊಡ್ಡ ತೊಂದರೆ ಸೃಷ್ಟಿ ಮಾಡುತ್ತದೆ ಎಂದು ಬಿಜೆಪಿ ಆರೋಪಿಸಿದೆ.

ಜಾತಿಪಟ್ಟಿಯಲ್ಲಿ ಸುಮಾರು 33 ಮತಾಂತರಿತ ಕ್ರಿಶ್ಚಿಯನ್ ಧರ್ಮದೊಂದಿಗೆ ಮೂಲ ಜಾತಿಯನ್ನು ನಮೂದಿಸಿ ಜಾತಿ ಕೋಡ್ ನೀಡಲಾಗಿದೆ. ಜಾತಿ ಪಟ್ಟಿಯಲ್ಲಿ ತೋರಿಸಿರುವ ಕ್ರಿಶ್ಚಿಯನ್ ಜಾತಿಗಳಲ್ಲಿ ಅಕ್ಕಸಾಲಿಗ ಕ್ರಿಶ್ಚಿಯನ್ (A-0020), ಬಣಜಿಗ ಕ್ರಿಶ್ಚಿಯನ್ (A-0127), ಬಾರಿಕಾರ್ ಕ್ರಿಶ್ಚಿಯನ್ (A-0145), ಬೆಸ್ತರು ಕ್ರಿಶ್ಚಿಯನ್ (A-0174), ಬಿಲ್ಲವ ಕ್ರಿಶ್ಚಿಯನ್ (A-0202), ಬ್ರಾಹ್ಮಣ ಕ್ರಿಶ್ಚಿಯನ್ (A-0217), ಚರೋಡಿ ಕ್ರಿಶ್ಚಿಯನ್ (A-0252), ದೇವಾಂಗ ಕ್ರಿಶ್ಚಿಯನ್ (A-0313), ಈಡಿಗ ಕ್ರಿಶ್ಚಿಯನ್ (A-0332), ಗೊಲ್ಲ ಕ್ರಿಶ್ಚಿಯನ್ (A-0393), ಗೊಂಡ ಲಾಲಗೊಂಡ ಕ್ರಿಶ್ಚಿಯನ್ (A-0395), ಗೌಡಿ ಕ್ರಿಶ್ಚಿಯನ್ (A-0426), ಜಲಗಾರ ಕ್ರಿಶ್ಚಿಯನ್​​ (A-0514), ಜಂಗಮ ಕ್ರಿಶ್ಚಿಯನ್ (A-0557), ಕಮ್ಮ ಕ್ರಿಶ್ಚಿಯನ್ (A-0619), ಕಮ್ಮನಾಯ್ಡು ಕ್ರಿಶ್ಚಿಯನ್ (A-0621) ನಮೂದು ಮಾಡಲಾಗಿದೆ


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ