Breaking News

ಮಲಮಗಳನ್ನು ಕಟ್ಟಡದ ಮೇಲಿಂದ ತಳ್ಳಿ ಕೊಲೆಗೈದ ಮಲತಾಯಿ; ಆಸ್ತಿಗಾಗಿ ಕೃತ್ಯ!

Spread the love

ಬೀದರ್: ಮಲ ಮಗಳಿಗೂ ಆಸ್ತಿ ಹಂಚಿಕೆ ಆಗುತ್ತದೆ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಮೂರು ಮಹಡಿ ಕಟ್ಟಡದ ಮೇಲಿಂದ ಬಾಲಕಿಯನ್ನು ತಳ್ಳಿ ಕೊಲೆ ಮಾಡಿದ ಘಟನೆ ಇಲ್ಲಿನ ನ್ಯೂ ಆದರ್ಶ ಕಾಲನಿಯಲ್ಲಿ ಇತ್ತೀಚೆಗೆ ನಡೆದಿದೆ. ಈ ಸಂಬಂಧ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಸಾನ್ವಿ (6) ಮೃತ ಬಾಲಕಿ. ಪ್ರಕರಣದಲ್ಲಿ ಆರೋಪಿಯನ್ನು ರಾಧಾ ಎಂದು ಗುರುತಿಸಲಾಗಿದೆ. ಆಗಸ್ಟ್​​ 27ರಂದು ಮಲತಾಯಿ ರಾಧಾ ಬಾಲಕಿಗೆ ಆಟವಾಡಿಸುವ ನೆಪದಲ್ಲಿ ಮೂರನೇ ಮಹಡಿಗೆ ಕರೆದೊಯ್ದಿದ್ದು, ಯಾರಿಗೂ ಕಾಣದಂತೆ ತಳ್ಳಿ ಕೊಲೆ ಮಾಡಿದ್ದಳು. ಮಗು ಆಯತಪ್ಪಿ ಬಿದ್ದಿದ್ದಾಳೆ ಎಂದು ನಂಬಿದ್ದರು. ಈ ಬಗ್ಗೆ ಆಕಸ್ಮಿಕವಾಗಿ ಬಿದ್ದ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಂದೆ ಸಿದ್ಧಾಂತ ನೀಡಿದ ದೂರಿನ ಮೇರೆಗೆ ಗಾಂಧಿಗಂಜ್ ಪೊಲೀಸ್​ ಠಾಣೆಯಲ್ಲಿ ಯುಡಿಆರ್​ ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ಮುಂದುವರೆಸಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಸಿಸಿಟಿವಿ ದೃಶ್ಯದಿಂದ ಕೊಲೆ ಬಯಲಿಗೆ: ಕೆಲ ದಿನಗಳ ಬಳಿಕ ಸೆಪ್ಡಂಬರ್​ 13ರಂದು ಸಾರ್ವಜನಿಕರೊಬ್ಬರು ನಮಗೆ ಸಿಸಿಟಿವಿ ದೃಶ್ಯಗಳನ್ನು ತಂದು ಕೊಟ್ಟರು. ವಿಡಿಯೋ ಪರಿಶೀಲಿಸಿದಾಗ, ಬಾಲಕಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿಲ್ಲ. ಮಲತಾಯಿಯೇ ತಳ್ಳಿ ಕೊಲೆ ಮಾಡಿದ್ದಾರೆ ಎಂಬುದು ನಮ್ಮ ಗಮನಕ್ಕೆ ತಿಳಿದುಬಂದಿತ್ತು. ಅದರ ಪ್ರಕಾರ, ಬಾಲಕಿಯ ಅಜ್ಜಿ ಠಾಣೆಗೆ ಬಂದು ಕೊಲೆ ಪ್ರಕರಣ ದಾಖಲಿಸಿದರು. ಆ ಬಳಿಕ ನಾವು ಆರೋಪಿ ಮಹಿಳೆಯನ್ನು ಸೋಮವಾರ (ಸೆ.15) ಬಂಧನ ಮಾಡಿದ್ದೇವೆ. ಅಲ್ಲದೆ, ಆರೋಪಿಯು ತಾನು ಕೊಲೆ ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ ಎಂದು ಎಸ್​ಪಿ ತಿಳಿಸಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ