Breaking News

ದಂಡ ಕಟ್ಟಿ ಮಾರುದ್ದದ ಚಲನ್ ಸ್ವೀಕರಿಸುತ್ತಿರುವ ವಾಹನ ಸವಾರ

Spread the love

ದಾವಣಗೆರೆ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಪಾವತಿ ಮಾಡಲು ಸರ್ಕಾರ ಶೇ.50% ರಿಯಾಯಿತಿ ನೀಡಿತ್ತು. ಇದರಿಂದ ವಾಹನ ಸವಾರರು ಸರತಿ ಸಾಲಿನಲ್ಲಿ ನಿಂತು ದಂಡ ಪಾವತಿ ಮಾಡಿದ್ದಾರೆ. ಹತ್ತಿಪ್ಪತ್ತು ಪ್ರಕರಣಗಳಲ್ಲಿ 20 ರಿಂದ 30 ಸಾವಿರ ರೂಪಾಯಿ ವರೆಗೂ ದಂಡ ಪಾವತಿ ಮಾಡಿದ್ದಾರೆ.

ಇನ್ನು ದಾವಣಗೆರೆ ಉತ್ತರ ಹಾಗೂ ದಕ್ಷಿಣ ಸಂಚಾರಿ ಠಾಣೆಗಳಲ್ಲಿ ದಂಡ ಪಾವತಿಸಿ ಉದ್ದನೆಯ ಚಲನ್ ಪಡೆಯುವ ಮೂಲಕ ಕೆಲ ವಾಹನ ಸವಾರರು ಗಮನ ಸೆಳೆದಿದ್ದಾರೆ. ಉದ್ದನೆಯ ಬಿಲ್ ಹಿಡಿದು ನಿಂತಿರುವ ಫೋಟೋಗಳನ್ನು ದಾವಣಗೆರೆ ಉತ್ತರ ಸಂಚಾರಿ ಪೊಲೀಸ್‌ ಠಾಣೆಯ ಸಿಬ್ಬಂದಿ ಹಂಚಿಕೊಂಡಿದ್ದಾರೆ.

ಶೇ.50% ರಿಯಾಯಿತಿಯಲ್ಲಿ ದಂಡ ಕಟ್ಟಲು ಅವಕಾಶ ನೀಡಿದ್ದರಿಂದ ವಾಹನ ಸವಾರರು ದಂಡ ಕಟ್ಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಕ್ಲಿಯರ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಸಂಚಾರಿ ಪೊಲೀಸ್‌ ಠಾಣೆಗೆ ಆಗಮಿಸಿದ ಅನೇಕ ವಾಹನ ಸವಾರರು ದಂಡ ಕಟ್ಟಿ ಮಾರುದ್ದದ ಚಲನ್‌ ಪಡೆದರು.

ಗಾಂಧಿ ನಗರ ವ್ಯಾಪ್ತಿಯಲ್ಲಿ ಬೈಕ್​​ನ ಮಾಲೀಕರೊಬ್ಬರು 22 ಸಾವಿರ ರೂಪಾಯಿ ದಂಡ ಕಟ್ಟಬೇಕಿದ್ದು, ಶೇ.50% ರಿಯಾಯಿತಿಯಲ್ಲಿ 11 ಸಾವಿರ ರೂಪಾಯಿ ದಂಡ ಕಟ್ಟಿದರು. ಉತ್ತರ ಸಂಚಾರಿ ಠಾಣೆಯ ಪಿಎಸ್ಐ ಜಯಶೀಲಾ ಅವರು ದಂಡ ಕಟ್ಟಿದ ಬಳಿಕ ಉದ್ದನೆಯ ಚಲನ್​ ತೆಗೆದು ವಾಹನ ಸವಾರನಿಗೆ ನೀಡಿದರು. ಕೆಲವರು ದಂಡ ಕಟ್ಟಿ ಐದಾರು ಮಾರಿನಷ್ಟು ಉದ್ದದ ಚಲನ್‌ ಪಡೆದರು. ಯಾರು ಸಂಚಾರ ನಿಯಮ ಉಲ್ಲಂಘನೆ ಮಾಡಬೇಡಿ ಎಂದು ಪೊಲೀಸರು ವಾಹನ ಸವಾರರಿಗೆ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ