ಗ್ರಾಮ ಪಂಚಾಯತಿಯ ನಿರ್ಲಕ್ಷ ಹಲಗಾ ಗ್ರಾಮದ ಸರ್ವಿಸ್ ರಸ್ತೆಯಲ್ಲಿ ಘನತ್ಯಾಜ್ಯ ವಸ್ತುಗಳ ಸಾಮ್ರಾಜ್ಯ……
ಹಲಗಾ ಗ್ರಾಮದ ಸರ್ವಿಸ್ ರಸ್ತೆಯಲ್ಲಿ ತ್ಯಾಜ್ಯ ವಸ್ತುಗಳ ಸಾಮ್ರಾಜ್ಯಸ್ವಚ್ಛತೆಯನ್ನು ಕೈಗೊಳ್ಳದ ಗ್ರಾಮ ಪಂಚಾಯಿತಿದುರ್ವಾಸನೆಯ ಮಧ್ಯದಲ್ಲಿ ತೆರಳುವ ಸಾರ್ಜನಿಕರು
ಸುವರ್ಣಸೌಧದ ಎದುರಿನ ಪ್ರಮುಖ ಸರ್ವಿಸ್ ರಸ್ತೆ
ಗ್ರಾಮ ಪಂಚಾಯತಿಯವರ ನಿರ್ಲಕ್ಷದಿಂದ ಸುವರ್ಣಸೌಧಕ್ಕೆ ತೆರಳುವ ಹಲಗಾ ಗ್ರಾಮದ ಸರ್ವಿಸ್ ರಸ್ತೆಯಲ್ಲಿ ಘನತ್ಯಾಜ್ಯ ವಸ್ತುಗಳ ಸಾಮ್ರಾಜ್ಯವಾಗಿ ಹೋಗಿದೆ. ದುರ್ವಾಸನೆಯ ಮಧ್ಯದಲ್ಲಿ ಸಾರ್ಜನಿಕರು ಮೂಗಿನ ಮೇಲೆ ಕೈ ಇಟ್ಟುಕೊಂಡು ಅಲೆದಾಡುವ ಪ್ರಸಂಗ ಎದುರಾಗಿದೆ.
ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಿಂದ ಸುವರ್ಣಸೌಧಕ್ಕೆ ಹೋಗುವ ಸರ್ವಿಸ್ ರಸ್ತೆಯಲ್ಲಿ ಕಸದ ರಾಶಿ ಸಂಗ್ರಹವಾಗಿದ್ದು, ಈ ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರು ದುರ್ವಾಸನೆಯನ್ನು ಅನುಭವಿಸಬೇಕಾಗಿದೆ.
ಹಲಗಾ ಈ ಪ್ರದೇಶದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಸಂಸ್ಕರಿಸುವ ಎರಡು ದೊಡ್ಡ ಘಟಕಗಳಿವೆ. ಅವುಗಳ ತ್ಯಾಜ್ಯವನ್ನು ಸಹ ಈ ಸ್ಥಳದಲ್ಲಿ ಸುರಿಯಲಾಗುತ್ತಿದೆ.ಈ ಸರ್ವಿಸ್ ರಸ್ತೆಯಲ್ಲಿ ಅನೇಕ ಅಧಿಕಾರಿಗಳು ಸುವರ್ಣಸೌಧಕ್ಕೆ ಮತ್ತು ಮನೆಗೆ ಪ್ರಯಾಣಿಸುತ್ತಾರೆ, ಆದರೆ ಗ್ರಾಮ ಪಂಚಾಯಿತಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Laxmi News 24×7