ಬೆಂಗಳೂರು, (ಆಗಸ್ಟ್ 30):ಸಂಚಾರ ನಿಯಮ ಉಲ್ಲಂಘನೆ (Traffic Rules Break) ಮಾಡಿ ದಂಡ ಕಟ್ಟದೇ (Traffic Fine) ಬಾಕಿ ಉಳಿಸಿಕೊಂಡಿದ್ದ ವಾಹನ ಸವಾರರಿಗೆ ಸರ್ಕಾರ 50% ಡಿಸ್ಕೌಂಡ್ ನೀಡಿದ್ದು, ವಾಹನ ಮಾಲೀಕರು ಈ ಆಫರ್ ಅನ್ನು ಭರ್ಜರಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂಕರವೆಂಬಂತೆ ಬೆಂಗಳೂರಿನಲ್ಲಿ (Bengaluru) ಒಂದೇ ವಾರದಲ್ಲಿ ಬರೋಬ್ಬರಿ 21 ಕೋಟಿ 86 ಸಾವಿರ ರೂ. ದಂಡದ ಹಣ ಸಂಗ್ರಹವಾಗಿದೆ. ಇದರೊಂದಿಗೆ 50% ಡಿಸ್ಕೌಂಟ್ ಆಫರ್ ಶುರುವಾದ ಒಂದು ವಾರದೊಳಗೆ ಅಂದ್ರೆ ಆಗಸ್ಟ್ 23ರಿಂದ ಆಗಸ್ಟ್ 29ರವರೆಗೆ 7,43,160 ಬಾಕಿ ಕೇಸ್‌ಗಳಿಗೆ ವಾಹನ ಮಾಲೀಕರು ದಂಡ ಪಾವರಿಸಿದ್ದಾರೆ.
ಆಗಸ್ಟ್ 21ರಂದು ಟ್ರಾಫಿಕ್ ಫೈನ್‌ಗೆ 50% ಡಿಸ್ಕೌಂಟ್ ಆದೇಶ ನೀಡಲಾಗಿತ್ತು. ಆ.23 ರಿಂದ ಸೆ.12 ರ ವರೆಗೆ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ವಾಹನ ಸವಾರರಿಗೆ ಅವಕಾಶ ನೀಡಲಾಗಿದೆ. ಅದರಂತೆ ಕಳೆದ ಆರು ದಿನದಲ್ಲಿ 7,43,160 ಕೇಸ್ ವಿಲೇವಾರಿ ಮಾಡಿ 21 ಕೋಟಿ 86 ಸಾವಿರ ರೂ. ದಂಡ ಸಂಗ್ರಹ ಮಾಡಲಾಗಿದೆ.
Laxmi News 24×7