BGLKT POLICE RAID ON ILLEGAL GAS STORAGEಅಕ್ರಮ ಸಿಲಿಂಡರ್ ಮಾರಾಟ ಅಡ್ಡೆಗಳ ಮೇಲೆ ಪೊಲೀಸ್ ದಾಳಿ
೨೮ ಸಿಲಿಂಡರಗಳು ವಶ; ಸ್ಪೋಟದ ಹಿನ್ನಲೆ ಎಚ್ಚೆತ್ತ ಖಾಕಿಅಕ್ರಮ ಸಿಲಿಂಡರ್ ಮಾರಾಟ ಅಡ್ಡೆಗಳ ಮೇಲೆ ಪೊಲೀಸ್ ದಾಳಿ೨೮ ಸಿಲಿಂಡರಗಳು ವಶಸ್ಪೋಟದ ಹಿನ್ನಲೆ ಎಚ್ಚೆತ್ತ ಖಾಕಿಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಘಟನೆ
ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಸಂಭವಿಸಿದ ಅಕ್ರಮ ಸಿಲಿಂಡರ್ ಸ್ಪೋಟ ಪ್ರಕರಣದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಅಕ್ರಮ ಸಿಲಿಂಡರ್ ಮಾರಾಟ ಅಡ್ಡೆಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.
ಬಾಗಲಕೋಟೆ ಪೊಲೀಸ್ ತಂಡಗಳು, ಡಿವೈಎಸ್‌ಪಿ ಗಜಾನನ ಸುತಾರ ಅವರ ನೇತೃತ್ವದಲ್ಲಿ ನವನಗರ ಮತ್ತು ಇತರ ಕೆಲವು ಭಾಗಗಳಲ್ಲಿ ದಾಳಿ ನಡೆಸಿವೆ. ಖಚಿತ ಮಾಹಿತಿಯ ಆಧಾರದ ಮೇಲೆ ನಡೆದ ಈ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 28 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ.
ಅಕ್ರಮ ಗ್ಯಾಸಿನ ಅಡ್ಡೆಗಳನ್ನು ಹತ್ತಿಕ್ಕಲು ಬಾಗಲಕೋಟೆ ಜಿಲ್ಲಾಡಳಿತ ಗಂಭೀರ ತೀರ್ಮಾನ ತೆಗೆದುಕೊಂಡಿದ್ದು, ಪೋಲೀಸ್ ಇಲಾಖೆ ಜೊತೆಗೆ ಅಗ್ನಿಶಾಮಕ ಮತ್ತು ಆಹಾರ ಇಲಾಖೆಯ ಜಂಟಿ ಅಧಿಕಾರಿಗಳಿಂದ ಈ ದಾಳಿ ನಡೆಯಿತು.
ಸಾರ್ವಜನಿಕರ ಭದ್ರತೆಗಾಗಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿ ಇಂಥ ಅಡ್ಡೆಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7