Breaking News

ಅಗಷ್ಟ 29 ಮತ್ತು 30 ರಂದು ಹುಕ್ಕೇರಿ ಅವುಜಿಕರ ಮಠದ ಜಾತ್ರಾಮಹೋತ್ಸವ ಜರಗುವದು – ಮಂಜುನಾಥ ಮಹಾರಾಜ.

Spread the love

ಹುಕ್ಕೇರಿ : ಅಗಷ್ಟ 29 ಮತ್ತು 30 ರಂದು ಹುಕ್ಕೇರಿ ಅವುಜಿಕರ ಮಠದ ಜಾತ್ರಾಮಹೋತ್ಸವ ಜರಗುವದು – ಮಂಜುನಾಥ ಮಹಾರಾಜ.
ಹುಕ್ಕೇರಿ ನಗರದಲ್ಲಿ ಅಗಷ್ಟ 29 ಮತ್ತು 30 ರಂದು ಕ್ಯಾರಗುಡ್ಡ ಅವಜೀಕರ ಮಹಾರಾಜರ ಮತ್ತು ಜಗನ್ನಾಥ ಮಹಾರಾಜರ ಸ್ಮರಣಾರ್ಥ ಸಪ್ತಾಹ ಮತ್ತು ಮಂಜುನಾಥ ಮಹಾರಾಜರ ಕಲ್ಯಾಣ ಮಹೋತ್ಸವ ಜರುಗಲಿದೆ ಎಂದು ಮಂಜುನಾಥ ಮಹಾರಾಜರು ಹೇಳಿದರು.
ಅವರು ಇಂದು ಕಾರ್ಯಕ್ರಮದ ಪೂರ್ವಭಾವಿ ಸಿದ್ದತೆಯನ್ನು ಪರಶೀಲಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಶುಕ್ರವಾರ ದಿನಾಂಕ 29 ಮತ್ತು ಶನಿವಾರ 30 ರಂದು ಕಾಕಡಾರತಿಯೊಂದಿಗೆ ಪ್ರಾರಂಭವಾದ ಜಾತ್ರಾ
ಮಹೋತ್ಸವದಲ್ಲಿ ಸದ್ಗುರು ಮಲ್ಲೇಶ್ವರ ಗೋಶಾಲೆ, ಗೋಪುರದ ಮೇಲೆ ಸ್ವರ್ಣ ಲೇಪಿತ ಕಳಸಾರೋಹಣ ಹಾಗೂ ಮಂಜುನಾಥ ಮಹಾರಾಜರ ಕಲ್ಯಾಣ ಮಹೋತ್ಸವ ಕಾರ್ಯಕ್ರಮಗಳು ನಾಡಿನ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಹಾಗೂ ಶಾಸಕ , ಸಚಿವರ ಮಠದ ಭಕ್ತರ ಉಪಸ್ಥಿತಿಯಲ್ಲಿ ಜರುಗಲಿದ್ದು ಕಾರಣ ಅವುಜೀಕರ ಧ್ಯಾನ ಆಶ್ರಮದ ಹಾಗೂ ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಭಕ್ತರು ಹೇಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ಸು ಗೋಳಿಸ ಬೇಕು ಎಂದರು ( )
ನಂತರ ಮಲ್ಲಪ್ಪ ಮಹಾರಾಜರು ಕಾರ್ಯಕ್ರಮದ ಬಿತ್ತಿ ಪತ್ರ ಬಿಡುಗಡೆ ಗೋಳಿಸಿದರು.
ಈ ಸಂದರ್ಭದಲ್ಲಿ ಮಠದ ಪರಮ ಭಕ್ತರಾದ ಪ್ರೋ ಪಿ ಜಿ ಕೋಣ್ಣುರ, ರಾಮಣ್ಣಾ ನಾಯಿಕ, ನೆಮಿನಾಥ ಸೋಲ್ಲಾಪುರೆ, ಶಿರಹಟ್ಟಿಯ ರವಿ ಕಾಂಬಳೆ, ಬೆಳವಿಯ ಮಹಾದೇವ ನಾಯಿಕ, ವಿಶ್ವನಾಥ ನಾಯಿಕ ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ