Breaking News

ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರಕ್ಕೆ ರಾಯಬಾಗ ಪಟ್ಟಣದಲ್ಲಿ ಖಂಡನೆ

Spread the love

ಚಿಕ್ಕೋಡಿ: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಒಳಸಂಚು ನಡೆಸುತ್ತಿರುವವರ ವಿರುದ್ಧ ಸಕಾರ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಡಾ.ಸಿದ್ಧಸೇನ ಮುನಿ ಮಹಾರಾಜರು ನೇತೃತ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಯ ಭಕ್ತಾಭಿಮಾನಿಗಳು ಪಟ್ಟಣದ ಮಹಾವೀರ ಭವನದಲ್ಲಿ ತಹಶೀಲ್ದಾರ ಸುರೇಶ ಮುಂಜೆ ಅವರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಬೆಳಿಗ್ಗೆ ೧೧ ರಾಯಬಾಗ ಗಂಟೆಗೆ ಪಟ್ಟಣದ ಹನುಮಾನ ದೇವಸ್ಥಾನದಿಂದ ಮಹಾವೀರ ಭವನದ ವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಧರ್ಮಸ್ಥಳ ಭಕ್ತಾಭಿಮಾನಿಗಳು ಮತ್ತು ವಿವಿಧ ಹಿಂದೂ ಸಂಘಟನೆ ಮುಖಂಡರು ಯೂಟ್ಯೂಬ್ ರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಡಾ.ಸಿದ್ಧಸೇನ ಮುನಿ ಮಹಾರಾಜರು ಮಾತನಾಡಿ, ಪವಿತ್ರಕ್ಷೇತ್ರವಾಗಿರುವ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರಿಗೆ ಅಪಪ್ರಚಾರ ಮಾಡಿ, ಕಳಂಕ ತರುವ ಕೆಲಸ ಮಾಡುತ್ತಿರುವವ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಸರ್ಕಾರ ಮಾಡದ ಕೆಲಸವನ್ನು ಡಾ.ವಿರೇಂದ್ರ ಹೆಗ್ಗಡೆ ಅವರು ಮಾಡುತ್ತಿದ್ದಾರೆ. ಸಾಮಾಜಿಕವಾಗಿ ಅನೇಕ ಒಳ್ಳೆ ಕಾರ್ಯ ಮಾಡುತ್ತಿರುವ ಹೆಗ್ಗಡೆ ಅವರ ಪರ ನಾವೇಲ್ಲರೂ ಒಂದಾಗಿ ನಿಲ್ಲಬೇಕು ಎಂದು ಕರೆ ನೀಡಿದರು. ಧರ್ಮಸ್ಥಳ ರಕ್ಷಣೆಗಾಗಿ ಆ.೨೪ ರಂದು ಧರ್ಮಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಡಾ.ಹೆಗ್ಗಡೆ ಅವರಿಗೆ ಬೆಂಬಲ ವ್ಯಕ್ತಪಡಿಸಬೇಕೆಂದರು.
ಯುವ ಧುರೀಣ ಧೂಳಗೌಡ ಪಾಟೀಲ ಮಾತನಾಡಿ, ಯುಟ್ಯೂಬರ್ ಸಮೀರ, ತಿಮರೋಡಿ, ಮಟ್ಟೆನ್ನವರ, ಸಂತೋಷ ಶೆಟ್ಟಿ, ಜಯಂತ ಟಿ ಹಾಗೂ ಇವರ ಸಹಚರರು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರಿಗೆ ಕಳಂಕ ತುರವ ಪಿತೂರಿ ನಡೆಸುತ್ತಿರುವವರ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಧರ್ಮಾಧಿಕಾರಿ ಹೆಗ್ಗಡೆ ಅವರ ವಿರುದ್ಧ ಕೆಲವೊಂದು ವ್ಯಕ್ತಿಗಳು ಸಾರ್ವಜನಿಕವಾಗಿ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಮಾತನಾಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ, ನಡೆದಿದೆ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಿ, ಬಿತ್ತರಿಸುತ್ತಿದ್ದಾರೆ. ಇದರಿಂದ ಶ್ರೀಕ್ಷೇತ್ರದ ಭಕ್ತಾದಿಗಳಿಗೆ ನೋವುಂಟಾಗಿದೆ ಎಂದು ಹೇಳಿದರು. ಎಸ್‌ಐಟಿ ಯವರು ಇಲ್ಲಿವರೆಗೆ ನಡೆದ ಶೋಧಕಾರ್ಯದ ಬಗ್ಗೆ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಿ ಸತ್ಯಾಸತ್ಯೆಯನ್ನು ಜನರಿಗೆ ತಿಳಿಸಬೇಕೆಂದು ಒತ್ತಾಯಿಸಿದರು. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಮತ್ತು ಡಾ.ವಿರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿರುವವರನ್ನು ತನಿಖೆ ಮಾಡಿ, ಇವರ ಷಡ್ಯಂತ್ರದ ಹಿಂದಿರುವ ಸತ್ಯಾಂಶಗಳನ್ನು ಬಯಲಿಗೆಳೆಯಬೇಕು ಮತ್ತು ಇನ್ರ್ನೆಂದು ತನಿಖಾ ತಂಡ ರಚಿಸಿ ಸೂಕ್ತ ತನಿಖೆ ಮಾಡಬೇಕೆಂದು ಆಗ್ರಹಸಿದರು.
ಪ್ರತಿಭಟನೆಯಲ್ಲಿ ನಂದಿಕುರಳಿ ವೀರಭದ್ರ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಹಿರಿಯ ಮುಖಂಡರಾದ ಡಿ.ಸಿ.ಸದಲಗಿ,ಡಿ ಎಸ್ ನಾಯಿಕ ,ಈರಗೌಡ ಪಾಟೀಲ , ಪಾರೀಸ ಉಗಾರೆ, ಎಸ್.ಟಿ.ಮುನ್ನೊಳಿ, ಸಿದ್ದಪ್ಪ ನಾಗನೂರ, ಜೀನ್ನಪ್ಪ ಬಡೋರೆ, ಶೀತಲ ಬೇಡಕಿಹಾಳೆ, ಅಣ್ಣಾಸಾಹೇಬ ಖೆಮಲಾಪೂರೆ, ಜಿನೇಂದ್ರ ಖೇಮಲಾಪುರೆ, ಸಂದೇಶ ಶೆಟ್ಟಿ, ಕುಂತಿನಾಥ ಮಗದುಮ್ಮ, ನಿಂಗಪ್ಪ ಪಕಾಂಡಿ, ವೆಂಕಟೇಶ ಬನವಣೆ, ಸನ್ಮತಿ ಶೆಟ್ಟಿ, ಸಿದ್ದಪ್ಪ ನಾಗನೂರ, ಗಿರೀಶ ಪಾಟೀಲ, ಸಂಜಯ ಕುಸ್ತಿಗಾರ, ವಿದ್ಯಾ ಪೂಜೇರಿ ಸೇರಿ ಧರ್ಮಸ್ಥಳ ಸಂಘದ ಸದಸ್ಯರು, ಜೈನ ಸಮಾಜದ ಮುಖಂಡರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ