Breaking News

ಸಂಭ್ರಮದಿದ ಜರುಗಿದ ಲಚ್ಯಾಣದ ಶ್ರೀ ಸಿದ್ದಲಿಂಗೇಶ್ವರ ತೊಟ್ಟಿಲೋತ್ಸವ*

Spread the love

ಸಂಭ್ರಮದಿದ ಜರುಗಿದ ಲಚ್ಯಾಣದ ಶ್ರೀ ಸಿದ್ದಲಿಂಗೇಶ್ವರ ತೊಟ್ಟಿಲೋತ್ಸವ*
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಲಿಂ.ಶ್ರೀ ಸಿದ್ದಲಿಂಗ ಮಹಾರಾಜರ ಜಯಂತೋತ್ಸವ ಅಂಗವಾಗಿ ಶ್ರಾವಣ ಮಾಸದ ನಿಮಿತ್ತ ನಡೆದ ತೊಟ್ಟಿಲೋತ್ಸವವು ನೆರೆದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿoದ ಜರುಗಿತು.
ಈ ಉತ್ಸವದ ಅಂಗವಾಗಿ ಮಠದಲ್ಲಿ ನಸುಕಿನ ಜಾವದಲ್ಲಿ ಲಿಂಗೈಕ್ಯ ಶ್ರೀ ಸಿದ್ದಲಿಂಗ ಮಹಾರಾಜರು, ಗುರು ಶಂಕರಲಿಂಗ ಮಹಾ ಶಿವಯೋಗಿಗಳು ಹಾಗೂ ಲಿಂಗಕ್ಕೆ ಶ್ರೀ ಸಂಗನಬಸವ ಮಹಾಶಿವಯೋಗಿಗಳ ಶೀಲಾಮೂರ್ತಿಗಳಿಗೆ ಭಕ್ತರಿಂದ ವಿಶೇಷ ಪೂಜೆ, ಅಭಿಷೇಕ ನೆರವೇರಿತು.
ಬಳಿಕ ಮಠದಲ್ಲಿ ಇಲ್ಲಿನ ಕಮರಿ ಮಠದ ಸೇವಾ ಸಮಿತಿಯ ವತಿಯಿಂದ ಅನ್ನಪ್ರಸಾದ ವಿತರಣೆ ನಡೆಯಿತು. ಬಳಿಕ ಸಾಯಂಕಾಲ 5 ಗಂಟೆಗೆ ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು,
ಹೂವಿನ ಹಿಪ್ಪರಗಿಯ ಪತ್ರಿವನ ಮಠದ ಮಾತೋಶ್ರೀ ದ್ರಾಕ್ಷಾಯಣಿ ಅಮ್ಮನವರು, ಅಗರಖೇಡದ ಶ್ರೀ ಅಭಿನವ ಪ್ರಭುಲಿಂಗ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಸಂಪ್ರದಾಯದoತೆ ಸ್ಥಳೀಯ ಸದ್ಭಕ್ತ ಮಲ್ಲಿಕಾರ್ಜುನ ಸಂಗೀತಾ ಮಜಗೊಂಡ ಮನೆತನದವರಿಂದ ತೊಟ್ಟಿಲು ಸೇವೆ ಜರುಗಿತು.
ಈ ನಿಮಿತ್ಯ ಇವರ ಮನೆಯಿಂದ ಮಠದ ವರೆಗೆ ವಾದ್ಯ ಮೇಳದೊಂದಿಗೆ ಶ್ರೀ ಸಿದ್ದಲಿಂಗ ಮಹಾರಾಜರ ಬೆಳ್ಳಿಯ ಮೂರ್ತಿ ಭವ್ಯ ಮೆರವಣಿಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಸುತ್ತಮುತ್ತಲ ಗ್ರಾಮದ ಸಹಸ್ರಾರು ಮಹಿಳೆಯರು ಹೆಚ್ಚಿನ ಭಾಗವಹಿಸಿ ತೊಟ್ಟಿಲು ಸೇವೆ ಸಲ್ಲಿಸಿ, ಜೋಗುಳ ಪದ ಹಾಡಿ ಸಂಭ್ರಮಿಸಿದರು.
ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರಿಗೆ ಗುಗ್ಗರಿ ಪ್ರಸಾದ ವಿತರಿಸಲಾಯಿತು. ನಂತರ ಇಡೀ ರಾತ್ರಿ ಮಠದಲ್ಲಿ ಈ ಮೆರವಣಿಗೆಯಲ್ಲಿ ಕಕ್ಕಳಮೇಲಿಯ ಶ್ರೀಸಿದ್ಧಲಿಂಗೇಶ್ವರ ಭಜನಾಸಂಘ ಹಾಗೂ ಸ್ಥಳಿಯ ಸ್ರೀ ಸಿದ್ದಲಿಂಗೇಶ್ವರ ಭಜನಾ ಸಂಘದವರು ಭಾಗವಹಿಸಿ ನಿರಂತರ ಭಜನೆ ಮಾಡಿ ಜನರಲ್ಲಿ ಭಕ್ತಿ ಭಾವ ಮೂಡಿಸಿದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ