Breaking News

ಅವಧಿಗೂ ಮುನ್ನ ಜನಿಸಿದ, ಕಡಿಮೆ ತೂಕದ ಎರಡು ಶಿಶುಗಳ ಜೀವ ಉಳಿಸಿದ ವೈದ್ಯರು

Spread the love

ಮೈಸೂರು: ಮದರ್‌ಹುಡ್ ಆಸ್ಪತ್ರೆಯಲ್ಲಿ ಅವಧಿಗೂ ಮುನ್ನ ಜನಿಸಿದ ಹಾಗೂ ಕಡಿಮೆ ತೂಕ ಹೊಂದಿದ್ದ ಎರಡು ಶಿಶುಗಳ ಜೀವ ಉಳಿಸಲಾಗಿದೆ ಎಂದು ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಶ್ವೇತಾ ನಾಯಕ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸವದ ಅವಧಿಗೂ ಬಹಳ ಮುಂಚಿತವಾಗಿ ಜನಿಸಿದ ಹಾಗೂ ಜನನದ ಸಮಯದಲ್ಲಿ ಬಹಳ ಕಡಿಮೆ ದೇಹ ತೂಕ ಹೊಂದಿದ್ದ ಶಿಶುಗಳು ಬದುಕುಳಿದಿದ್ದು, ಮಾತ್ರವಲ್ಲದೇ ದೇಹ ತೂಕದಲ್ಲಿ ಉತ್ತಮ ಬೆಳವಣಿಗೆ ಕೂಡ ಕಂಡು ಬಂದಿದೆ ಎಂದು ಹೇಳಿದರು.

ಉಮಾ ಮತ್ತು ಚೇತನ್‌ಕುಮಾರ್ ದಂಪತಿಗೆ ಕೇವಲ 29 ವಾರಗಳಲ್ಲಿಯೇ ಗಂಡು ಶಿಶು ಜನಿಸಿತ್ತು. ತಾಯಿಯ ಗರ್ಭಾಶಯದಲ್ಲಿ ಶಿಶುವಿನ ಬೆಳವಣಿಗೆಗೆ ಕುಂಠಿತವಾಗಿತ್ತು (ಸಿವಿಯರ್​ ಇಂಟ್ರಾಯುಟರೈನ್ ಗ್ರೋಥ್ ರೆಸ್ಟ್ರಿಕ್ಷನ್). ಶಿಶು ಜನಿಸಿದಾಗ ಕೇವಲ 480 ಗ್ರಾಂ ತೂಕ ಹೊಂದಿತ್ತು. ಅಂದರೆ ಶಿಶು ಕೇವಲ ಅಂಗೈ ಅಗಲದ ಗಾತ್ರ ಇತ್ತು. ಇದಲ್ಲದೇ ಶಿಶುವಿಗೆ ಹಲವು ಸಮಸ್ಯೆಗಳು ಇದ್ದವು ಎಂದರು.ಶಿಶು ಆಹಾರವನ್ನು ಜೀರ್ಣಿಸಿ ಕೊಳ್ಳಲಾಗದಂತಹ ಸ್ಥಿತಿಯಲ್ಲಿತ್ತು. ಅವಧಿಗೂ ಮುನ್ನ ಜನಿಸಿದ ಶಿಶುಗಳಲ್ಲಿ ಉಂಟಾಗುವ ಕಣ್ಣಿನ ರಕ್ತನಾಳಗಳ ತೊಂದರೆ(ಆರ್‌ಒಪಿ ಹಂತ 3) ಮುಂತಾದ ಅನಾರೋಗ್ಯ ಸಮಸ್ಯೆಗಳು ಇದ್ದವು. ಈ ಸಂಕೀರ್ಣ ತೊಂದರೆಗಳು ಇದ್ದರೂ ಕೂಡ, ಆಮ್ಲಜನಕ, ಪೋಷಕಾಂಶ, ತಾಪಮಾನಗಳನ್ನು ಬಹಳ ಎಚ್ಚರಿಕೆಯೊಂದಿಗೆ ನಿಯಂತ್ರಿಸಿ ಗರ್ಭಾಶಯದೊಳಗಿನ ಸ್ಥಿರವಾದ ಸ್ಥಿತಿಯನ್ನು ಎನ್‌ಐಸಿಯು ತಂಡ ಉಳಿಸಿಕೊಂಡಿತು ಎಂದು ತಿಳಿಸಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ