Breaking News

ಸೋಮನಾಥ ಮಂದಿರ ಉತ್ತರ ಕರ್ನಾಟಕದ ವಿಶೇಷ ಮಂದಿರವಾಗಲಿದೆ…

Spread the love

ಸೋಮನಾಥ ಮಂದಿರ ಉತ್ತರ ಕರ್ನಾಟಕದ ವಿಶೇಷ ಮಂದಿರವಾಗಲಿದೆ…
ಇಂದು ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದ 50 ಲಕ್ಷ ರೂಪಾಯಿ ಮೊತ್ತದಲ್ಲಿ ನೂತನ ಸೋಮನಾಥ ಮಂದಿರವು ವಿಶೇಷ ಮಂದಿರವಾಗಿ,ನೆಲ ಮಹಡಿಯಲ್ಲಿ ಸ್ವಯಂಭು ಪಾದರಸದ ಶಿವಲಿಂಗ ಹಾಗೂ ಮೇಲಿನ ಅಂತಸ್ತಿನಲ್ಲಿ ಮಹಾದೇವ ಮಂದಿರವಾಗುತ್ತಿದ್ದು ಗರ್ಭಗುಡಿಯ ಕಟ್ಟಡದ ಪ್ರಾರಂಭ ನಿರ್ಮಾಣ ಕಾಮಗಾರಿಗೆ ಸವದತ್ತಿ ಓಂಕಾರ ಮಠದ ಪ.ಪೂ.ಶ್ರೀ ಶಿವಶಕ್ತಿ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಸ್ವಯಂಭು ಪಾದರಸದಿಂದ ಮಾಡಿದ ಶಿವಲಿಂಗ ಮಂದಿರ ಶ್ರೇಷ್ಠ ಮಂದಿರ.ಪಾದರಸ ಶಿವಲಿಂಗವನ್ನು ಸ್ಪರ್ಶಿಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕ ಶಕ್ತಿ ಬರುತ್ತದೆ.ಎಂಬ ಉದ್ದೇಶದಿಂದ ಈ ಮಂದಿರ ಸ್ಥಾಪಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ,ಆದಿಬಣಜಿಗ ಸಮಾಜದ ರಾಜ್ಯಾಧ್ಯಕ್ಷರಾದ ಶ್ರೀ ಅಜ್ಜಪ್ಪಾ ನಾಗರಾಳೆ,ಶ್ರೀ ಶ್ರೀಶೈಲ ಡಂಗಿ,ಶ್ರೀ ಲಕ್ಷ್ಮಣ ಮಗದುಮ್ಮ,ಶ್ರೀ ಕಲ್ಲಪ್ಪ ನವಲಗಿ,ಶ್ರೀ ಗಂಗಪ್ಪಾ ಉಳ್ಳಾಗಡ್ಡಿ, ಶ್ರೀ ಮಲ್ಲಿಕಾರ್ಜುನ ಬಿರಾದಾರ,ಸ್ಥಳೀಯ ಮುಖಂಡರು,ಸಮಾಜದ ಮುಖಂಡರು,ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ