ಹುಕ್ಕೇರಿ : ತಾಲೂಕು ಕೇಂದ್ರಗಳಲ್ಲಿ ಶೀಘ್ರದಲ್ಲಿ ವೈದ್ಯರ ನೇಮಕ – ಆರೋಗ್ಯ ಸಚಿವ ದಿನೇಶ ಗುಂಡೂರಾವ.
ತಾಲೂಕು ಕೇಂದ್ರಗಳಲ್ಲಿ ಶೀಘ್ರದಲ್ಲೇ ತಜ್ಞ ವೈದ್ಯರನ್ನು ನೇಮಕ ಮಾಡಿ ಜನರ ಸೇವೆಗೆ ಸಹಕರಿಸಲಾಗುವದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಹೇಳಿದರು.ಅವರು ಇಂದು ಹುಕ್ಕೇರಿ ತಾಲೂಕಿನ ಸಂಕೇಶ್ವರ ಅಮ್ಮಣಗಿ ಮತ್ತು ಹುಕ್ಕೇರಿ ನಗರಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜರುಗಿದ ವಿವಿಧ ಕಾರ್ಯಕ್ರಮಗಳಲ್ಲಿ ಹುಕ್ಕೇರಿ ಶಾಸಕ ನಿಖಿಲ್ ಕತ್ತಿಯವರ ಅಧ್ಯಕ್ಷತೆಯಲ್ಲಿ ಸಚಿವ ದಿನೇಶ ಗುಂಡೂರಾವ್ ರವರು
ಹುಕ್ಕೇರಿ ತಾಲೂಕಾ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ವಸತಿ ಗೃಹ ಕಟ್ಟಡಗಳ ಉದ್ಘಾಟನೆ, ಸಂಕೇಶ್ವರ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಿರುವ ಹೆಚ್ಚುವರಿ ವಾರ್ಡಗಳ ಹಾಗೂ ಔಷಧ ಉಗ್ರಾಣ ಕಟ್ಟಡ ಮತ್ತು ಅಮ್ಮಣಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆ ಹಾಗೂ ಹುಕ್ಕೇರಿ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬ್ಲಾಕ್ ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಶಂಕು ಸ್ಥಾಪನೆಗಳು ಜರುಗಿದವು.
ನಂತರ ನಡೆದ ಸಮಾರಂಭದಲ್ಲಿ ವೇದಿಕೆ ಮೇಲೆ ಡಿ ಎಚ್ ಓ ಡಾ, ಆಯ್ ಪಿ ಗಡಾದ, ಅಪರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ,ಎಸ್ ಎಸ್ ಗಡೇದ, ಜಂಟಿ ಆಯುಕ್ತೆ ಪುಷ್ಪಾ ದೊಡಮನಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ, ಮುಖ್ಯ ವೈದ್ಯಾಧೀಕಾರಿಗಳಾದ ಡಾ, ಮಹಾಂತೇಶ ನರಸನ್ನವರ, ಡಾ, ಪೂರ್ಣಿಮಾ ತಲ್ಲೂರ, ಡಾ, ಪೂಜೇರಿ ಹಾಗೂ ಪುರಸಭೆ ಅದ್ಯಕ್ಷರಾದ ಇಮ್ರಾನ್ ಮೊಮಿನ, ಮಹಾವೀರ ನಿಲಜಗಿ, ಮೊದಲಾದವರು ಉಪಸ್ಥಿತರಿದ್ದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವರು ಇಂದು ಹುಕ್ಕೇರಿ ತಾಲೂಕಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ಕಟ್ಟಡಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ಮಾಡಲಾಗಿದೆ, ಬರುವ ದಿನಗಳಲ್ಲಿ ಸೂಕ್ತ ತಜ್ಞ ವೈದ್ಯರ ನೇಮಕ ಮಾಡುವ ಮೂಲಕ ಸಾರ್ವಜನಿಕರ ಸೇವೆಗೆ ನಮ್ಮ ಸರ್ಕಾರ ಸದಾ ಬದ್ದವಾಗಿದೆ ಎಂದರು .
ನಂತರ ಮಾದ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ನಿನ್ನೆ ಬೆಂಗಳೂರಿನ ಪ್ರೀಢಂ ಪಾರ್ಕ ದಲ್ಲಿ ನಮ್ಮ ರಾಷ್ಟ್ರೀಯ ನಾಯಕರಾದ ರಾವುಲ ಗಾಂಧಿಯವರು ಚುನಾವಣೆ ಆಯುಕ್ತರ ಮತ್ತು ಬಿ ಜೆ ಪಿ ಸರ್ಕಾರದ ಚುನಾವಣೆ ನೀತಿ ಖಂಡಿಸಿ ಅಂಕಿ ಅಂಶಗಳ ಮೂಲಕ ಸಾಬೀತು ಮಾಡಿ ಪ್ರತಿಭಟನೆ ಮಾಡಲಾಗಿದೆ ಅವರು ಮಾಡಿದ ಆರೋಪ ಸತ್ಯವಾಗಿದೆ ಆದರೆ ವಿರೋಧ ಪಕ್ಷದವರು ಹುಸಿ ಬಾಂಬ್ ಎಂದು ಹೇಳುತ್ತಿರುವದು ಹಾಸ್ಯಾಸ್ಪದವಾಗಿದೆ ,ಚುನಾವಣೆ ಕಮಿಷನ್ ಸಹ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ನಂತರ ಇತ್ತಿಚಿಗೆ ಬೆಳಗಾವಿ ಜಿಲ್ಲೆಯ ಗೋಕಾಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅವಧಿ ಮುಗಿದ ಸುಮಾರು 97 ಲಕ್ಷ ರೂಪಾಯಿ ಡ್ರಗ್ಸ ಪತ್ತೆ ಹಚ್ಚಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಹೌದು ಉಪ ಲೋಕಾಯುಕ್ತ ತಂಡ ಸಂಚರಿಸುವಾಗ ಕಂಡು ಬಂದಿದೆ ಆದರೆ ಅವಧಿ ಮುಗಿದ ಔಷಧಿಗಳನ್ನು ಉಗ್ರಾಣದಲ್ಲಿ ಶೇಕರಿಸಿ ಇಡಲಾಗಿದೆ ಅದನ್ನು ರೋಗಿಗಳಿಗೆ ಹಂಚಿಕೆ ಮಾಡಿಲ್ಲಾ ನಮ್ಮ ಇಲಾಖೆಯಿಂದ ಅವಧಿ ಮುಗಿದ ಔಷಧಿಗಳನ್ನು ಐದು ವರ್ಷಕ್ಕೊಮ್ಮೆ ಕಂಪನಿಗಳಿಗೆ ವಾಪಸ ನೀಡುತ್ತೆವೆ ಆ ಸ್ಟಾಕ್ ಸಿಕ್ಕೆದೆ ನಾನು ಇಗಾಗಲೆ ಆದೇಶ ಹೋರಡಿಸಿ ಪ್ರತಿ ಎರಡು ವರ್ಷಕ್ಕೊಮ್ಮೆ ಅವಧಿ ಮುಗಿದ ಔಷಧಿಗಳನ್ನು ವಿಲೇವಾರಿ ಮಾಡಲು ತಿಳಿಸಿದ್ದೆನೆ ಮತ್ತು ಈ ರೀತಿ ಘಟನೆಗಳು ಜರುಗದಂತೆ ನಿಗಾ ವಹಿಸಲು ತಿಳಿಸಿದ್ದೆನೆ ಎಂದರು
ಇದಕ್ಕೂ ಮೊದಲು ಸಚಿವರನ್ನು ಮಹಿಳಾ ಸಿಬ್ಬಂದಿಗಳು ರಾಕಿ ಕಟ್ಟುವ ಮೂಲಕ ಬರಮಾಡಿಕೋಳ್ಳಲಾಯಿತು.
ಶಾಸಕ ನಿಖಿಲ್ ಕತ್ತಿ ಮಾತನಾಡಿ ನಮ್ಮ ತಂದೆಯವರಾದ ದಿವಂಗತ ಉಮೇಶ ಕತ್ತಿಯರ ಪ್ರಯತ್ನದಿಂದ ಹುಕ್ಕೇರಿ ತಾಲೂಕಿನ ಸಂಕೇಶ್ವರ ,ಅಮ್ಮಣಗಿ ಮತ್ತು ಹುಕ್ಕೇರಿ ನಗರಗಳಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಆಸ್ಪತ್ರೆಗಳಿಗೆ ಹೈಟೆಕ್ ಸ್ಪರ್ಷ ನೀಡಿ ಅತ್ಯಾಧುನಿಕ ಉಪಕರಣಗಳನ್ನು ನೀಡಲಾಗಿದೆ ಕಾರಣ ಸಚಿವರು ಆಸ್ಪತ್ರೆಗಳಿಗೆ ಸೂಕ್ತ ವೈದ್ಯರನ್ನು ಮತ್ತು ಸಿಬ್ಬಂದಿಗಳನ್ನು ನೀಡ ಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ ಬಲರಾಮ ಕಟ್ಟಿಮನಿ, ಇ ಓ ಟಿ ಆರ್ ಮಲ್ಕಾಡದ, ಗ್ಯಾರಂಟಿ ಯೋಜನೆ ಅದ್ಯಕ್ಷ ಶಾನೂಲ ತಹಸಿಲ್ದಾರ, ಮುಖಂಡರಾದ ಕಿರಣ ರಜಪೂತ, ರಾಜು ಮುನ್ನೋಳ್ಳಿ, ಗುರು ಕುಲಕರ್ಣಿ, ಸತ್ತೆಪ್ಪಾ ನಾಯಿಕ, ಪುರಸಭೆ ಉಪಾದ್ಯಕ್ಷ ಸಚೀನ ಭೋಪಳೆ, ಗುತ್ತಿಗೆದಾರ ಬಸವರಾಜ ಗಂಗಣ್ಣವರ ಮೊದಲಾದವರು ಉಪಸ್ಥಿತರಿದ್ದರು.
Laxmi News 24×7