Breaking News

ಕರ್ನಾಟಕದಿಂದ ಗೋವಾಕ್ಕೆ ಸುಮಾರು 620 ಕೆಜಿ ಗೋಮಾಂಸ ಸಾಗಾಟ!!! ಕಾರಿನೊಂದಿಗೆ ವ್ಯಕ್ತಿಯೋರ್ವನ ಬಂಧನ…

Spread the love

ಕರ್ನಾಟಕದಿಂದ ಗೋವಾಕ್ಕೆ ಸುಮಾರು 620 ಕೆಜಿ ಗೋಮಾಂಸ ಸಾಗಾಟ!!!
ಕಾರಿನೊಂದಿಗೆ ವ್ಯಕ್ತಿಯೋರ್ವನ ಬಂಧನ…
ಕರ್ನಾಟಕದಿಂದ ಗೋವಾಕ್ಕೆ ಸಾಗಿಸುತ್ತಿದ್ದ ಸುಮಾರು 620 ಕೆಜಿ ಗೋಮಾಂಸವನ್ನು ಮೋಲಂ ಚೆಕ್‌ಪೋಸ್ಟ್’ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿಯಿಂದ ಮಾಪುಸಾಗೆ ಇನ್ನೋವ್ಹಾ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 620 ಕೆಜಿ ಗೋಮಾಂಸವನ್ನು ಕುಳೆ ಪೊಲೀಸರು ಮೋಲಂ ಚೆಕ್‌ಪೋಸ್ಟ್’ನಲ್ಲಿ ವಶಪಡಿಸಿಕೊಂಡಿದ್ದಾರೆ. ಗೋಮಾಂಸ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋವ್ಹಾ ಕಾರನ್ನು ವಶಕ್ಕೆ ಪಡೆದು, ಯಾಸೀನ್ ಬೇಪಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೋಲಂನ ಪಶುವೈದ್ಯಾಧಿಕಾರಿ ಡಾ. ಕೇತನ್ ಚೌಗುಲೆ ಅವರು ವಶಪಡಿಸಿಕೊಂಡ ಗೋಮಾಂಸದ ಪಂಚನಾಮೆಯನ್ನು ನಡೆಸಿ, ಗೋಮಾಂಸದ ಮೇಲೆ ಫಿನೈಲ್ ಸುರಿಯುವ ಮೂಲಕ ಗೋಮಾಂಸವನ್ನು ವಿಲೇವಾರಿ ಮಾಡಿದರು. ಕುಳೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೇಕ್ಟರ್ ರಾಘೋಬಾ ಕಾಮತ್ ಮತ್ತು ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ವೈಭವಿ ಗಾಂವಕರ್ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ಮಾಡಲಾಗಿದೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ