Breaking News

ಘಟಪ್ರಭಾ ಪಟ್ಟಣದಲ್ಲಿ ಬೀಫ್ ಮಾರಾಟ ಬಂದ

Spread the love

ಘಟಪ್ರಭಾ ಪಟ್ಟಣದಲ್ಲಿ ಬೀಫ್ ಮಾರಾಟ ಬಂದ
ಘಟಪ್ರಭಾ: ಘಟಪ್ರಭಾ ಪಟ್ಟಣದಲ್ಲಿ ದನದ ಮಾಂಸ(ಬೀಫ್ ಮಾರಾಟ) ವ್ಯಾಪಾರಸ್ಥರು ಅಂಗಡಿಗಳು
ಬಂದ ಮಾಡಿರುವ ದೃಶ್ಯ ಶುಕ್ರವಾರ ಮಧ್ಯಾಹ್ನದಿಂದ ಕಂಡು ಬಂದಿದೆ.
ಗ್ರಾಹಕರು ದನದ ಮಾಂಸ ಖರೀದಿಗೆ ಎಂದು ಮಾರುಕಟ್ಟೆ ಹೋದಾಗ ಕಸಾಯಿ ಖಾನೆಯ ಅಂಗಡಿಗಳು ಸಂಪೂರ್ಣ ಬಂದಾಗಿದ್ದು ಕಂಡು ಮಾಂಸ ಪ್ರೀಯರು ನಿರಾಶಕರಾಗಿದ್ದಾರೆ.
ಮಾಂಸ ಪ್ರೀಯರು ಅಂಗಡಿಕಾರರನ್ನು ವಿಚಾರಿಸಿದಾಗ ಮಾಂಸ(ಬೀಫ್) ವ್ಯಾಪಾರಸ್ಥರು ನಾವೆಲ್ಲರೂ ಸೇರಿ ಸುಮಾರು 15 ರಿಂದ 30 ದಿನಗಳ ವರೆಗೆ ಮಾಂಸದ ಅಂಗಡಿಗಳನ್ನು ಬಂದ ಮಾಡುವುದಾಗಿ ಎಂದು ಹೇಳಿದ್ದಾರೆ.
ದನದ ಮಾಂಸದ ವ್ಯಾಪಾರಸ್ಥರ ಅಳಿಲು ವಿಚಾರಿಸಿದಾಗ ಬೀಫ್ ಮಾರಾಟಕ್ಕೆ ಕೆಲವು ಸಂಘಟನೆಗಳು ಅಡ್ಡಿ ಪಡಿಸುತ್ತಿವೆ. ಹೀಗಾಗಿ ನಾವು ಮಾರಾಟವನ್ನೇ ಬಂದ ಮಾಡಲು ನಾವೆಲ್ಲರೂ ಸೇರಿ ತಿರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಒಂದು ವೇಳೆ ಸರಕಾರ ನಮಗೆ ರಕ್ಷಣೆ ನೀಡಿದರೇ ಮಾತ್ರ ಮತ್ತೆ ಆರಂಭಿಸಲಾಗುವದು ಈ ಕುರಿತು ಬೆಳಗಾವಿಯಲ್ಲಿ ಬೀಫ್ ವ್ಯಾಪಾರಸ್ಥರ ಸಭೆ ಇದೆ ಸಭೆ ಬಳಿಕ ಬೀಫ್ ಮಾರಾಟದ ಬಗ್ಗೆ ತಿರ್ಮಾನ ಮಾಡಲಾಗುವದು ಎಂದು ಬೀಫ್ ಮಾರಾಟಗಾರರು ತಿಳಿಸಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ