Breaking News

ಮಹಿಳೆಯರು, ಯುವಕರು ಲಿಂಗಾಯತ ಧರ್ಮ ಬೆಳಸಬೇಕು

Spread the love

ಮಹಿಳೆಯರು, ಯುವಕರು ಲಿಂಗಾಯತ ಧರ್ಮ ಬೆಳಸಬೇಕು
ಪೀರನವಾಡಿಯಲ್ಲಿ ಶ್ರಾವಣ ಮಾಸದ ನಿಮಿತ್ಯ ಪಾದಯಾತ್ರೆಗೆ ಚಾಲನೇ ನೀಡಿದ ಚಂದ್ರಶೇಖರ ಸ್ವಾಮಿಜಿ ಅಭಿಮತ!!
May be an image of 7 people, temple and text
ಲಿಂಗಾಯತ ಒಳ ಪಂಗಡಗಳು ಒಗ್ಗಟ್ಟಾಗಿದ್ದರೆ ನಾವು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ನಾವೇಲ್ಲರು ಒಂದು ಎಂದು ಮುಂದೆ ಸಾಗೋನ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮಿಜಿ ಹೇಳಿದರು
May be an image of 4 people and temple
ರವಿವಾರ ಬೆಳಗಾವಿಯ ಪೀರನವಾಡಿಯ ಗುರು ಬೀರೇಶ್ವರ ದೇವಸ್ಥಾನದಲ್ಲಿ ಅಖಿಲ ಲಿಂಗಾಯತ ನೂರು ಕಾಯಕ ಪಂಗಡಗಳ ಒಕ್ಕೂಟದಿಂದ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಲಿಂಗಾಯತ ಒಳ ಪಂಗಡಗಳು ಒಂದಾಗಬೇಕು, ಸಮಾಜ ಕಟ್ಟುವ ಕೆಲಸದೊಂದಿಗೆ ಮಹಿಳೆಯರು, ಯುವಕರು ಲಿಂಗಾಯತ ಧರ್ಮ ಬೆಳಸಬೇಕೆಂದು ಚಂದ್ರಶೇಖರ ಸ್ವಾಮಿಜಿ ತಿಳಿಸಿದರುMay be an image of 4 people and temple
ಯಮಕನಮರಡಿಯ ಶೂನ್ಯ ಸಂಪಾದನಾ ಹುಣಸಿಕೊಳ್ಳ ಮಠದ ಉತ್ತರಾಧಿಕಾರಿ ಸಿದ್ದಬಸವ ದೇವರು, ಕಾಕತಿಯ ಶಿವಪೂಜಿ ಮಠದ ರಾಚಯ್ಯ್ ಮಹಾಸ್ವಾಮಿಗಳು , ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರೇಮ್ ಮಲ್ಲಪ್ಪ ಚೌಗುಲಾ, ರಾಜ್ಯ
ಪ್ರಧಾನ ಕಾರ್ಯದರ್ಶಿ ಕೆ ಆರ್ ಎಕ್ಸಂಬಿ, ರಾಜ್ಯ ಖಜಾಂಚಿ ಪ್ರಸಾದ್ ಹಿರೇಮಠ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪೀರನವಾಡಿ ಪ್ರದೇಶದಲ್ಲಿ ನಡೆದ ಪಾದಯಾತ್ರೆಯಲ್ಲಿ ಲಿಂಗಾಯತ ನೂರು ಕಾಯಕ ಪಂಗಡಗಳ ಸಾರ್ವಜನಿಕರು ಭಾಗವಹಿಸಿದ್ದರು

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ