Breaking News

ವಿದ್ಯುತ್ ಸಹಕಾರಿ ಸಂಘದ ನಿರ್ದೆಶಕರ ಮಿಂಚಿನ ಸಂಚಾರ ಸದಸ್ಯರಿಗೆ ಭರಪೂರ ಯೋಜನೆ.

Spread the love

ವಿದ್ಯುತ್ ಸಹಕಾರಿ ಸಂಘದ ನಿರ್ದೆಶಕರ ಮಿಂಚಿನ ಸಂಚಾರ ಸದಸ್ಯರಿಗೆ ಭರಪೂರ ಯೋಜನೆ.
ಹುಕ್ಕೇರಿ ತಾಲೂಕಿನ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಸಮಿಪಿಸುತ್ತಿದ್ದಂತೆ ಹಾಲಿ ಆಡಳಿತ ಮಂಡಳಿ ಸದಸ್ಯರು ಗ್ರಾಮಿಣ ಪ್ರದೇಶಗಳಿಗೆ ತೇರಳಿ ತೋಟ ಪಟ್ಟಿಗಳಲ್ಲಿ ವಾಸಿಸುವ ಜನರಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ನೀಡುವ ಕಾರ್ಯ ಭರದಿಂದ ಸಾಗಿದೆ.
ತಾಲೂಕಿನಲ್ಲಿ ಇತ್ತಿಚಿಗೆ ಮಾಜಿ ಸಂಸದ ರಮೇಶ ಕತ್ತಿ ಮತ್ತು ಎ ಬಿ ಪಾಟೀಲ ಗುಂಪು ಒಂದಡೆ ಮುಖಂಡರ ಮನೆ ಮನೆಗಳಿಗೆ ತೇರಳಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಮಾಜಿ ಸಂಸದ ಅಣ್ಣಾ ಸಾಹೇಬ ಜೋಲ್ಲೆ ಮತ್ತು ಶಾಸಕ ಬಾಲಚಂದ್ರ ಜಾರಕಿಹೋಳಿ ಬೆಂಬಲಿತ ಹಾಲಿ ಆಡಳಿತ ಗುಂಪಿನ ಸದಸ್ಯರಾದ ಸಂಘದ ಅದ್ಯಕ್ಷ ಜಯಗೌಡಾ ಪಾಟೀಲ, ನಿರ್ದೆಶಕರಾದ ಶಶಿರಾಜ ಪಾಟೀಲ, ರವೀಂದ್ರ ಹಿಡಕಲ್ ಒಳಗೊಂಡ ವಿದ್ಯುತ್ ಸಹಕಾರಿ ಸಂಘದ ಅಧಿಕಾರಿಗಳೊಂದಿಗೆ ಘೋಡಗೇರಿ, ಅಕ್ಕಿವಾಟ ಗ್ರಾಮಗಳಿಗೆ ತೇರಳಿ ತೋಟ ಪಟ್ಟಿಗಳಲ್ಲಿ ವಾಸಿಸುವ ಜನರ ಸಭೆ ಜರುಗಿಸಿ ಸಮಸ್ಯೆಗಳನ್ನು ಆಲಿಸಿ ಕೂಡಲೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಆದೇಶ ನೀಡಿದರು.
ನಂತರ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ರವಿಂದ್ರ ಹಿಡಕಲ್ ಮತ್ತು ಶಶಿರಾಜ ಪಾಟೀಲ ಮಾಜಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಮತ್ತು ಶಾಸಕ ಬಾಲಚಂದ್ರ ಜಾರಕಿಹೋಳಿ ಮಾರ್ಗದರ್ಶನದಲ್ಲಿ ವಿದ್ಯುತ್ ಸಹಕಾರಿ ಸಂಘವು ರೈತರಿಗೆ ಮತ್ತು ಗ್ರಾಹಕರ ವಿದ್ಯುತ್ ಸಮಸ್ಯೆಗಳ ಕುರಿತು ಆಯಾ ಗ್ರಾಮಗಳಿಗೆ ತೇರಳಿ ಸ್ಥಳದಲ್ಲೆ ಪರಿಹಾರ ಕಂಡುಕೋಳ್ಳಲಾಗುತ್ತಿದೆ ಎಂದರು
ಈ ಸಂದರ್ಭದಲ್ಲಿ ವಿದ್ಯುತ್ ಸಹಕಾರಿ ಸಂಘದ ಅಭಿಯಂತರರು, ಸಾರ್ವಜನಿಕರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ