Breaking News

ಡೇಟಿಂಗ್ ಆ್ಯಪ್‌ನ ಮೂಲಕ ಪರಿಚಯವಾದವನನ್ನು ಭೇಟಿಗೆಂದು ಕರೆಸಿಕೊಂಡು ಸುಲಿಗೆಗೈದಿದ್ದ ಮಹಿಳೆ ಸಹಿತ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Spread the love

ಬೆಂಗಳೂರು: ಡೇಟಿಂಗ್ ಆ್ಯಪ್‌ನ ಮೂಲಕ ಪರಿಚಯವಾದವನನ್ನು ಭೇಟಿಗೆ ಆಹ್ವಾನಿಸಿ ಸುಲಿಗೆ ಮಾಡಿದ್ದ ಮಹಿಳೆ ಸಹಿತ 6 ಮಂದಿ ಆರೋಪಿಗಳನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ಮೂಲದ 41 ವರ್ಷದ ಬೋಯಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉದ್ಯೋಗಿಯೊಬ್ಬರು ನೀಡಿದ್ದ ದೂರಿನನ್ವಯ ಸಂಗೀತಾ ಸಹಾನಿ (36), ಬೀರಬಲ್ ಮಜ್ಜಗಿ (21), ಅಭಿಷೇಕ್ (19), ಶ್ಯಾಮ್ ಸುಂದರ್ ಪಾಂಡೆ (20), ರಾಜು ಮಾನೆ (34) ಹಾಗೂ ಶರಣಬಸಪ್ಪ ಬಾಳಿಗೆರ್ (50) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ದೂರುದಾರ ಸುರೇಶ್‌ಗೆ (ಹೆಸರು ಬದಲಿಸಲಾಗಿದೆ) ಡೇಟಿಂಗ್ ಆ್ಯಪ್‌ವೊಂದರ ಮೂಲಕ 1 ತಿಂಗಳ ಹಿಂದಷ್ಟೇ ಆರೋಪಿ ಸಂಗೀತಾಳ ಪರಿಚಯವಾಗಿತ್ತು. ತನ್ನನ್ನು ರಾಜಸ್ಥಾನ ಮೂಲದ ರಾಕಿ ಎಂದು ಪರಿಚಯಿಸಿಕೊಂಡಿದ್ದ ಆಕೆ ತಾನು ಅವಿವಾಹಿತಳಾಗಿದ್ದು, ಏಳೆಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಬ್ಯುಸಿನೆಸ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಳು.

ಜುಲೈ 18ರಂದು ಸಂಜೆ ಸಂಗೀತಾಳ ಆಹ್ವಾನದ ಮೇರೆಗೆ ಯಲಹಂಕ ಸಮೀಪದ ಮಾಲ್‌ವೊಂದರಲ್ಲಿ ಆಕೆಯನ್ನು ಸುರೇಶ್ ಭೇಟಿಯಾಗಿದ್ದರು. ಬಳಿಕ ಇಬ್ಬರೂ ಸಹ ಆಟೋದಲ್ಲಿ ಸಂಗೀತಾಳ ಮನೆಗೆ ತೆರಳಿದ್ದರು. ಮನೆಯಲ್ಲಿ ಮದ್ಯಪಾನ ಮಾಡುತ್ತಾ ಕುಳಿತಿದ್ದಾಗ ಎಂಟ್ರಿ ಕೊಟ್ಟಿದ್ದ ಉಳಿದ ಆರೋಪಿಗಳು ‘ಮನೆಯಲ್ಲಿ ಮದ್ಯಪಾನ ಮಾಡುವಂತಿಲ್ಲ’ ಎನ್ನುತ್ತಾ ಸಂಗೀತಾ ಹಾಗೂ ಸುರೇಶ್‌ನ ಬ್ಯಾಗ್‌ಗಳನ್ನು ತಡಕಾಡಿದ್ದರು. ಬಳಿಕ ಸಂಗೀತಾಳ ಬ್ಯಾಗ್‌ನಲ್ಲಿದ್ದ ಬಿಳಿ ಪೌಡರ್‌ನ್ನು ತೋರಿಸಿ ‘ಎಂಡಿಎಂಎ ಸೇವನೆ ಮಾಡುತ್ತಿದ್ದೀರಿ, ಪೊಲೀಸರಿಗೆ ಮಾಹಿತಿ ನೀಡುತ್ತೇವೆ’ ಎಂದು ಬೆದರಿಸಿದ್ದರು.

ಬಳಿಕ ಸುರೇಶ್‌ರ ಮೊಬೈಲ್ ಕಸಿದುಕೊಂಡು ಡೇಟಿಂಗ್ ಆ್ಯಪ್‌ ಅನ್​ಇನ್ಸ್ಟಾಲ್​ ಮಾಡಿ, 15 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆರೋಪಿಗಳ ಮಾತಿನಂತೆ ಹಂತ ಹಂತವಾಗಿ ಒಟ್ಟು 2 ಲಕ್ಷ ರೂ. ಹಣವನ್ನು ಸುರೇಶ್ ವರ್ಗಾಯಿಸಿದ್ದರು. ಬಳಿಕ ಸುರೇಶ್‌ರನ್ನು ಬೈಕ್‌ನಲ್ಲಿ ಕರೆದೊಯ್ದು ವೀರಸಂದ್ರ ಬಳಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು. ಬಳಿಕ ತಾವು ಮೋಸ ಹೋಗಿರುವುದನ್ನು ಅರಿತ ಸುರೇಶ್, ಯಲಹಂಕ ಠಾಣೆಗೆ ದೂರು ನೀಡಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ