Breaking News

ಲೋಕಾಯುಕ್ತ ದಾಳಿ: ರಾಶಿರಾಶಿ ಚಿನ್ನ, ನಗದು ಸೇರಿ 37.41 ಕೋಟಿಯ ಆಸ್ತಿ ಪತ್ತೆ

Spread the love

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಆರೋಪದಡಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳೂ ಸೇರಿದಂತೆ ಏಕಕಾಲದಲ್ಲಿ 41 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಪ್ರಮಾಣದ ಚರ-ಸ್ಥಿರಾಸ್ತಿ ಪತ್ತೆ ಮಾಡಿದ್ದಾರೆ.

ಅಸಮತೋಲನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದರು. ಐಐಎಸ್ ಮಹಿಳಾ ಅಧಿಕಾರಿ ಒಳಗೊಂಡಂತೆ ಎಂಟು ಮಂದಿ ಅಧಿಕಾರಿಗಳ ಮನೆಗಳ ದಾಳಿ ನಡೆಸಿದ್ಧಾರೆ. ಬೆಂಗಳೂರು ನಗರ, ಮೈಸೂರು, ತುಮಕೂರು, ಕಲಬುರಗಿ, ಕೊಪ್ಪಳ ಹಾಗೂ ಕೊಡಗು ಜಿಲ್ಲೆಗಳಲ್ಲಿ ವಾಸವಾಗಿದ್ದ ಅಧಿಕಾರಿಗಳ ನಿವಾಸಗಳ ಮನೆ ದಾಳಿ ನಡೆಸಿ ಅವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ದಾಳಿ ವೇಳೆ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ, ಜಮೀನಿಗೆ ಸೇರಿದ ಪತ್ರಗಳು, ಲಕ್ಷಾಂತರ ರೂಪಾಯಿ ನಗದು, ಕೋಟಿ ಬೆಳೆಬಾಳುವ ಚಿನ್ನಾಭರಣ ಸೇರಿದಂತೆ ಒಟ್ಟು 37.41 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಸಿಕ್ಕ ಬೆಲೆಬಾಳುವ ವಸ್ತುಗಳು

ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಸಿಕ್ಕ ಬೆಲೆಬಾಳುವ ವಸ್ತುಗಳು (ETV Bharat)

ದಾಳಿಗೊಳಗಾದ ಅಧಿಕಾರಿಗಳು ಮತ್ತು ಪತ್ತೆಯಾದ ಆಸ್ತಿಪಾಸ್ತಿ:

ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಸಿಕ್ಕ ಬೆಲೆಬಾಳುವ ವಸ್ತುಗಳು

ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಸಿಕ್ಕ ಬೆಲೆಬಾಳುವ ವಸ್ತುಗಳು (ETV Bharat)

  • ಎಚ್.ವಿ.ಯರಪ್ಪ ರೆಡ್ಡಿ, ಕಾರ್ಯಪಾಲಕ ಅಭಿಯಂತರ, ಸಿ.ವಿ.ರಾಮನ್ ನಗರ, ಬಿಬಿಎಂಪಿ ಬೆಂಗಳೂರು
    ಸಿಕ್ಕಿದ್ದೇನು?: ಮೂರು ಕಡೆಗಳಲ್ಲಿ ದಾಳಿ. 2 ನಿವೇಶನಗಳು, 1 ವಾಸದ ಮನೆ, 93,200 ರೂ ನಗದು, 94 ಲಕ್ಷ ಮೌಲ್ಯದ ಚಿನ್ನಾಭರಣಗಳು, 22 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು 2.62 ಕೋಟಿಯ ಆಸ್ತಿ ಪತ್ತೆ.
  • ಡಾ.ವಸಂತಿ ಅಮರ್, ಬಿ.ವಿ. ಐಎಎಸ್. ವಿಶೇಷ ಉಪ ಆಯುಕ್ತರು ಕೆ-ರೈಡ್ ಬೆಂಗಳೂರು.
    ಸಿಕ್ಕಿದ್ದೇನು?: ಐದು ಕಡೆಗಳಲ್ಲಿ ಶೋಧ. 3 ನಿವೇಶನಗಳು, 4 ವಾಸದ ಮನೆಗಳು, 3 ಎಕರೆ ಕೃಷಿ ಜಮೀನು, 66,390 ನಗದು, 12 ಲಕ್ಷ ಮೌಲ್ಯದ ಚಿನ್ನ, 90 ಲಕ್ಷ ರೂ.ಬೆಲೆಯ ವಾಹನಗಳು, 9.02 ಕೋಟಿಯ ಆಸ್ತಿ ಪತ್ತೆ.
  • ಮಗ್ಗಿ ಮಾರುತಿ, ಸಹಾಯಕ ನಿರ್ದೇಶಕ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಎಂ.ಎಸ್.ಬಿಲ್ಡಿಂಗ್, ಬೆಂಗಳೂರು
    ಸಿಕ್ಕಿದ್ದೇನು?: 10 ಕಡೆಗಳಲ್ಲಿ ಶೋಧ, 4.85 ಕೋಟಿ ಬೆಲೆಯ 8 ನಿವೇಶನಗಳು, 5 ವಾಸದ ಮನೆಗಳು, 19 ಎಕರೆ ಕೃಷಿ ಜಮೀನು, 1.30 ಲಕ್ಷ ನಗದು, 77.76 ಲಕ್ಷ ಬೆಲೆಯ ಚಿನ್ನ, 42 ಲಕ್ಷ ಮೌಲ್ಯದ ವಾಹನಗಳು, 18.39 ಲಕ್ಷ ಬ್ಯಾಂಕ್ ಬ್ಯಾಲೆನ್ಸ್, ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 1.49 ಕೋಟಿ ಒಳಗೊಂಡಂತೆ ಒಟ್ಟು 6.34 ಕೋಟಿಯ ಆಸ್ತಿ ಪತ್ತೆ.
  • ವೆಂಕಟರಾಮ ಬಿ., ಕಚೇರಿ ಸಹಾಯಕ (ಆಡಳಿತ) ಎಂಸಿಸಿ, ಮೈಸೂರು, ಪ್ರಭಾರ ಎಸಿ ವಲಯ-5
    ಸಿಕ್ಕಿದ್ದೇನು?: ಐದು ಕಡೆಗಳಲ್ಲಿ ಶೋಧ. 3 ವಾಸದ ಮನೆಗಳು, 2.2 ಎಕರೆ ಕೃಷಿ ಜಮೀನು, 2.01 ಲಕ್ಷ ನಗದು, 37 ಲಕ್ಷ ಮೌಲ್ಯದ ಚಿನ್ನಾಭರಣ, 43.60 ಲಕ್ಷ ಮೌಲ್ಯದ ವಾಹನಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಒಟ್ಟು 3.71 ಕೋಟಿಯ ಆಸ್ತಿ ಪತ್ತೆ.
  • ರಾಜೇಶ್ ಎಂ., ಸಹಾಯಕ ಕಾರ್ಯಪಾಲಕ ಅಭಿಯಂತರ ಕೆಐಎಡಿಬಿ ತುಮಕೂರು
    ಸಿಕ್ಕಿದ್ದೇನು?: ಒಟ್ಟು ಆರು ಕಡೆಗಳಲ್ಲಿ ಶೋಧ. 3 ನಿವೇಶನಗಳು, 2 ವಾಸದ ಮನೆಗಳು, 5.6 ಎಕರೆ ಜಮೀನು, 6.46 ಲಕ್ಷ ಮೌಲ್ಯದ ನಗದು, 85 ಲಕ್ಷ ಮೌಲ್ಯದ ಚಿನ್ನ, 18 ಲಕ್ಷ ಮೌಲ್ಯದ ವಾಹನಗಳು, 48 ಲಕ್ಷ ಬ್ಯಾಂಕ್ ಬ್ಯಾಲೆನ್ಸ್, ಸೇರಿದಂತೆ ಒಟ್ಟು 3.67 ಕೋಟಿ ಆಸ್ತಿ ಪತ್ತೆ.
  • ಸುನೀಲ್ ಕುಮಾರ್. ಕಾರ್ಯಪಾಲಕ ಅಭಿಯಂತರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ
    ಸಿಕ್ಕಿದ್ದೇನು?: 4 ಕಡೆಗಳಲ್ಲಿ ಶೋಧ. 3 ನಿವೇಶನಗಳು, 1 ವಾಸದ ಮನೆ, 5.35 ಎಕರೆ ಕೃಷಿ ಜಮೀನು, 15,75 ಲಕ್ಷ ನಗದು, 1.26 ಕೋಟಿ ಬೆಲೆಬಾಳುವ 1.26 ಕೋಟಿ ಚಿನ್ನಾಭರಣ, 12.50 ಲಕ್ಷದ ಮೌಲ್ಯದ ವಾಹನಗಳು ಸೇರಿದಂತೆ 4.34 ಕೋಟಿಯ ಆಸ್ತಿ ಪತ್ತೆ.
  • ಶೇಖು ಚೌವ್ಹಾಣ್, ಉಪನಿರ್ದೇಶಕ ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ
    ಸಿಕ್ಕಿದ್ದೇನು?: 4 ಕಡೆಗಳಲ್ಲಿ ಶೋಧ. 13 ನಿವೇಶನಗಳು, 3 ವಾಸದ ಮನೆಗಳು, 7.28 ಎಕರೆ ಕೃಷಿ ಜಮೀನು, 52.49 ಲಕ್ಷ ನಗದು, 61.11 ಲಕ್ಷ ಮೌಲ್ಯದ ಗೋಲ್ಡ್, 12 ಲಕ್ಷ ಮೌಲ್ಯದ ವಾಹನಗಳು 12.49 ಲಕ್ಷದ ಬ್ಯಾಂಕ್ ಬ್ಯಾಲೆನ್ಸ್ ಸೇರಿದಂತೆ 3.11 ಕೋಟಿಯ ಆಸ್ತಿ ಪತ್ತೆ.
  • ಮಂಜುನಾಥಸ್ವಾಮಿ. ಎಂ.ಜಂಟಿ ನಿರ್ದೇಶಕ (ಪ್ರಭಾರ) ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ
    ಸಿಕ್ಕಿದ್ದೇನು?: 4 ಕಡೆಗಳಲ್ಲಿ ದಾಳಿ. 3 ನಿವೇಶನಗಳು, 2 ವಾಸದ ಮನೆಗಳು, 4 ಕೃಷಿ ಜಮೀನಿನ ಪತ್ರಗಳು, 2.27 ಲಕ್ಷ ನಗದು, 46 ಲಕ್ಷದ ಮೌಲ್ಯದ ಚಿನ್ನಾಭರಣಗಳು, 17 ಲಕ್ಷ ಮೌಲ್ಯದ ವಾಹನಗಳು, 10 ಲಕ್ಷ ಬೆಲೆಯ ಬೆಳೆ ಬಾಳುವ ವಸ್ತುಗಳು ಸೇರಿದಂತೆ ಒಟ್ಟು 5.20 ಕೋಟಿ ರೂ.ಮೌಲ್ಯದ ಆಸ್ತಿ ಪತ್ತೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ