ಅರ್ಥಪೂರ್ಣವಾಗಿ ನಡೆದ ಪತ್ರಿಕಾ ದಿನಾಚರಣೆ; ಪತ್ರಕರ್ತರ ಆರೋಗ್ಯಕ್ಕಾಗಿ ಠೇವಣಿ ಇರಿಸಿದ ಸಚಿವದ್ವಯರು
ಸಮಾಜದ ಅಂಕು ಡೊಂಕು ತಿದ್ದುವವರು ಪತ್ರಕರ್ತರು ಹಗಲಿರುಳು ಎನ್ನದೇ ಸಮಾಜದಲ್ಲಿ ಆಗುಹೋಗುಗಳ ಕುರಿತು ಸಮಾಜಕ್ಕೆ ನಿಖರವಾದ ಮಾಹಿತಿ ನೀಡುವವರು ಪತ್ರಕರ್ತರೇ. ಪತ್ರಕರ್ತರು ವರ್ಷದಲ್ಲಿ ಒಂದು ದಿನ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ಒಂದೇಡೆ ಸೇರಿಕೊಂಡು ತಮ್ಮ ಕಷ್ಟ ಕೊಟಲೆಗಳನ್ನು ಹಂಚಿಕೊಂಡು, ಹಿರಿಯರಿಗೆ ಗೌರವ ಸಲ್ಲಿಸಲು ತಮ್ಮ ಮಕ್ಕಳ ಪ್ರತಿಭೆಗಳನ್ನು ಶ್ಲಾಘಿಸಿ, ಸನ್ಮಾನಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಂಡು ಸಂಭ್ರಮಿಸುತ್ತಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್….
ವಿಜಯಪುರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಮಾರಂಭ ಉದ್ಘಾಟಿಸಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ ಪತ್ರಕರ್ತರ ಸಕಲ ಸಮಸ್ಯೆ ನಿವಾರಣೆಗಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಪ್ರಾಮಾಣಿಕವಗಿ ಪ್ರಯತ್ನ ಮಾಡುವ ಜೊತೆಗೆ ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಐದು ಲಕ್ಷ ರೂ.ಗಳ ಠೇವಣಿ ಇರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಘೋಷಿಸಿದರು. ಇನ್ನೂ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು ಪತ್ರಕರ್ತರ ಆರೋಗ್ಯಕ್ಕಾಗಿ ಠೇವಣಿ ಇರಿಸಿ ಎಂಬ ಮನವಿಗೆ ವೇದಿಕೆಯಲ್ಲಿಯೇ ಸ್ಪಂದಿಸಿ ಸಚಿವ ಪಾಟೀಲರು ಠೇವಣಿ ಇರಿಸುವ ಭರವಸೆ ನೀಡಿದರು.
ಇನ್ನೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ವೈಜ್ಞಾನಿಕ ಹಾಗೂ ಸಂಶೋಧನಾತ್ಮಕ ಬರವಣಿಗೆಗಳು ಇಲ್ಲದೇ ಇರುವುದರಿಂದ ಸಮಾಜಕ್ಕೆ ಅನೇಕ ರೀತಿಯ ಹಿನ್ನಡೆಯಾಗಿದೆ, ಈ ನಿಟ್ಟಿನಲ್ಲಿ ಸಂಶೋಧನಾತ್ಮಕ, ವೈಜ್ಞಾನಿಕ ನೆಲೆಗಟ್ಟಿನ ವಿಚಾರಗಳು ಪ್ರಸಾರಗೊಳ್ಳಬೇಕಿದೆ ಎಂದರು.
ದೃಶ್ಯ ಮಾಧ್ಯಮಗಳಿಗೆ ಬ್ರೇಕಿಂಗ್ ನ್ಯೂಸ್ ಪ್ರಥಮಾದ್ಯತೆಯಾಗಿ ಪ್ರಗತಿ ಎರಡನೇಯ ಆದ್ಯತೆಯಾಗಿದೆ, ಆದರೆ ಪತ್ರಿಕೆಗಳಿಗೆ ಪ್ರಗತಿ ವಿಷಯವೇ ಅಗ್ರವಾಗಿರುವುದು ಸಂತೋಷದ ಸಂಗತಿ ಎಂದರು.
ರಾಜ್ಯ ಸರ್ಕಾರ ಪತ್ರಕರ್ತರ ಹಿತರಕ್ಷಣೆಗೆ ಹಲವಾರು ಯೋಜನೆ ಗಳನ್ನು ಜಾರಿಗೊಳಿಸಿದ್ದು, ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಠೇವಣಿ ಇರಿಸುವ ಕಾರ್ಯಕ್ಕೆ ನಾನು ಕೈ ಜೋಡಿಸುವೆ ಎಂದು ಐದು ಲಕ್ಷ ರೂ.ಗಳ ಠೇವಣಿ ಇರಿಸುವುದಾಗಿ ಘೋಷಿಸಿದರು.
ಇನ್ನೂ ಮಾನ್ಯತೆ ಇಲ್ಲದ ಪತ್ರಕರ್ತರಿಗೂ ಮಾಧ್ಯಮ ಸಂಜೀವಿನಿ ವಿಸ್ತರಿಸಿ ಎಂದು
ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ಮನವಿ ಮಾಡಿಕೊಂಡರು. ಇನ್ನೂ ಗ್ರಾಮೀಣ ಪತ್ರಕರ್ತರ ಸವಾಲುಗಳ ಕುರಿತು ಉಪನ್ಯಾಸ ಮಂಡಿಸಿದ ಹಿರಿಯ ಪತ್ರಕರ್ತ ಗೋಪಾಲ ನಾಯಕ ಮಾತನಾಡಿ,
ಗ್ರಾಮೀಣ ಭಾಗದಲ್ಲೂ ಸಹ ಪತ್ರಿಕೋದ್ಯಮ ವಿಶಾಲವಾಗಿ ವ್ಯಾಪಿಸಿದೆ, ಗ್ರಾಮೀಣ ಪತ್ರಕರ್ತರು ತಮ್ಮ ಭಾಗದ ದೇವಾಲಯ, ಅಪೂರ್ವ ಸ್ಮಾರಕಗಳ ಇತಿಹಾಸವನ್ನು ಸಂಶೋಧಿಸಿ ಪ್ರಕಟಿಸಿ ಅವುಗಳನ್ನು ಪ್ರವಾಸೋದ್ಯಮ ಕ್ಷೇತ್ರಗಳನ್ನಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ತಮ್ಮ ಗ್ರಾಮಕ್ಕೆ ಯಾವ ಕೈಗಾರಿಕೆ ಬರಬೇಕು, ಯಾವ ಯೋಜನೆ ಬರಬೇಕು ಎಂಬ ಬಗ್ಗೆ ಬೆಳಕು ಚೆಲ್ಲಿ ಸರ್ಕಾರದ ಗಮನ ಸೆಳೆಯಬೇಕು ಎಂದು ಕರೆ ನೀಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ ಯಡಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನೂ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಲಾಯಿತು.
ವಿಜಯಪುರ ಘಟಕದಿಂದ ಮಹಿಳಾ ವಿಭಾಗದಿಂದ ಶ್ರೀಮತಿ ಸರೋಜಿನಿ ಕುಲಕರ್ಣಿ, ಪರಶುರಾಮ್ ಶಿವಶರಣ,ನವೀನ್ ಅಂಜುಮ್ ಮಮದಾಪುರ, ವಿನೋದ್ ಸಾರವಾಡ, ಶರಣಬಸಪ್ಪ ಮಸಳಿ, ಅಪ್ಪು ಚಿನಗುಂಡಿ,ಗುರಪ್ಪ ಲೋಕುರಿ, ಮಲ್ಲಿಕಾರ್ಜುನ ಅಲ್ಲಾಪುರ, ಮಂಜು ಕಲಾಲ, ಕೊಲ್ಲಾರದ ಮಲ್ಲಿಕಾರ್ಜುನ ಕುಬಕಡ್ಡಿ ಮತ್ತಿತರರ ಪತ್ರಕರ್ತರು ಸೇರಿದಂತೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ ೧೭ ವಿದ್ಯಾರ್ಥಿನಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಒಟ್ನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮ ಅದ್ದೂರಿಯಾಗಿ ಅರ್ಥಪೂರ್ಣವಾಗಿ
ನಡೆಯಿತು.
Laxmi News 24×7