Breaking News

ಹಿರೇಕೊಡಿ ಗ್ರಾ.ಪಂ. ಸೀಜ್ ಟ್ರೇಜರಿ ಒಡೆದ ಪ್ರಕರಣ ಸದಸ್ಯೆ ಅನೀತಾ ವಿಕ್ರಮ ಬನಗೆ ನೇತೃತ್ವದಲ್ಲಿ ಪ್ರತಿಭಟನೆ

Spread the love

ಹಿರೇಕೊಡಿ ಗ್ರಾ.ಪಂ. ಸೀಜ್ ಟ್ರೇಜರಿ ಒಡೆದ ಪ್ರಕರಣ
ಸದಸ್ಯೆ ಅನೀತಾ ವಿಕ್ರಮ ಬನಗೆ ನೇತೃತ್ವದಲ್ಲಿ ಪ್ರತಿಭಟನೆ
ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ‌ಹಿರೆಕೋಡಿ ಗ್ರಾಮ ಪಂಚಾಯತನಲ್ಲಿ ಇತ್ತಿಚಿಗೆ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಆಗಿನ ತಾ.ಪಂನ ಕಾರ್ಯನಿರ್ವಾಹಕ ಅಧಿಕಾರಿ ಕಾದ್ರೋಳಿಯವರ ನೇತೃತ್ವದಲ್ಲಿ ದಾಖಲೆಗಳನ್ನು ಒಳಗೊಂಡ ಟೇಜರಿಯನ್ನು ಸೀಜ್ ಮಾಡಲಾಗಿತ್ತು.
ಆದ್ರೆ ಇವತ್ತು ‌ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಇಲ್ಲದೆ ಟೇಜರಿಯ ಸೀಜ್ ಒಡೆದಿರುವುದನ್ನು ಖಂಡಿಸಿ‌ ಸದಸ್ಯೆ ಅನೀತಾ ವಿಕ್ರಮ ಬನಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಹೌದು ಇತ್ತಿಚಿಗೆ ಹಿರೇಕೋಡಿ ಗ್ರಾಮ ಪಂಚಾಯತನಲ್ಲಿ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ದಾಖಲೆಗಳನ್ನು ಒಳಗೊಂಡ ಟೇಜರಿಯನ್ನು ಸೀಜ್ ಮಾಡಲಾಗಿತ್ತು.ಆದ್ರೆ ಟೇಜರಿಯ ಸೀಜ್ ವನ್ನು ಒಡೆಯಲಾಗಿದೆ ಎಂದು ಆರೋಪಿ ಸದಸ್ಯೆ ಅನೀತಾ ವಿಕ್ರಮ ಬನಗೆಯವರ ನೇತೃತ್ವದಲ್ಲಿ ಪ್ರತಿಭಟನೆ ‌ನಡೆಸಿ ತಪ್ಪಿತಸ್ತರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು.
ಬಳಿಕ ಗ್ರಾಮಸ್ಥರು ಗ್ರಾ.ಪಂ ವಿರುದ್ಧ ಹಾಗೂ ಪಿಡಿಓ ಅಂಬರೀಶ ಪಾಟೀಲ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಬಗ್ಗೆ ಪಿಡಿಓ ಅಂಬರೀಶ್ ಪಾಟೀಲಯವರನ್ನು ಕೇಳಿದರೆ ಟೇಜರಿ ಸೀಜ್ ಯಾರು ಓಪನ್ ಮಾಡಿದ್ದಾರೆ ಎಂಬುದು ನನಗೆ ಗೊತ್ತೆ ಇಲ್ಲ ಎಂದರು.

 


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ