Breaking News

ಇಪಿಎಫ್ ಅಕೌಂಟ್​​ಗಳಿಗೆ ವಾರ್ಷಿಕ ಬಡ್ಡಿ ಈ ವಾರವೇ ಜಮೆ? ಹಣ ಬಂದಿದೆಯಾ ಪರಿಶೀಲಿಸುವ ವಿಧಾನಗಳು

Spread the love

ನವದೆಹಲಿ, ಜುಲೈ 11: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್​ಒ (EPFO) ಕಳೆದ ವರ್ಷದ ಬಡ್ಡಿ ಹಣವನ್ನು ಎಲ್ಲಾ ಸಕ್ರಿಯ ಅಕೌಂಟ್​​ಗಳಿಗೂ ಜಮೆ ಮಾಡಿದೆ. 2024-25ರ ಹಣಕಾಸು ವರ್ಷಕ್ಕೆ ಇಪಿಎಫ್ ಹಣಕ್ಕೆ ಸರ್ಕಾರ ಶೇ. 8.25ರಷ್ಟು ವಾರ್ಷಿಕ ಬಡ್ಡಿಯನ್ನು ಪ್ರಕಟಿಸಿದೆ. ಇದೇ ಮಂಗಳವಾರದಂದು ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಮಾತನಾಡಿ, ಈ ವಾರದೊಳಗೆ ಬಡ್ಡಿಹಣವನ್ನು ಎಲ್ಲಾ ಅಕೌಂಟ್​​ಗಳಿಗೆ ಹಾಕಲಾಗುವುದು ಎಂದು ಹೇಳಿದ್ದರು. ಅವರ ಪ್ರಕಾರ, ಬಹುತೇಕ ಎಲ್ಲಾ ಇಪಿಎಫ್ ಖಾತೆಗಳಿಗೆ ಬಡ್ಡಿ ಜಮೆ ಮಾಡಲಾಗಿದೆ. 33.56 ಕೋಟಿ ಇಪಿಎಫ್ ಅಕೌಂಟ್​​ಗಳ ಪೈಕಿ 32.39 ಕೋಟಿ ಅಕೌಂಟ್​​ಗಳಿಗೆ ಇಂಟರೆಸ್ಟ್ ಕ್ರೆಡಿಟ್ ಮಾಡಲಾಗಿದೆ. ಉಳಿದವನ್ನು ಈ ವಾರದೊಳಗೆ ಮಾಡಲಾಗುವುದು ಎಂದಿದ್ದಾರೆ.

ನಿಮಗೆ ಇಪಿಎಫ್ ಇಂಟರೆಸ್ಟ್ ಕ್ರೆಡಿಟ್ ಆಗಿದೆಯಾ?

ನೀವು ಇಪಿಎಫ್ ಅಕೌಂಟ್ ಹೊಂದಿದ್ದು, ಅದರಲ್ಲಿರುವ ಹಣಕ್ಕೆ ಸರ್ಕಾರದಿಂದ ಬಡ್ಡಿ ಹಣ ಸೇರ್ಪಡೆಯಾಗಿದೆಯಾ ಎಂದು ಈಗಲೇ ಪರಿಶೀಲಿಸಿ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಸಕ್ರಿಯ ಅಕೌಂಟ್​​ಗಳಿಗೆ ಮಾತ್ರ ಬಡ್ಡಿ ಸಂದಾಯವಾಗುತ್ತದೆ. ಅಂದರೆ, ಸಂಸ್ಥೆ ಹಾಗು ನಿಮ್ಮ ಪಾಲಿನ ಹಣವು ಪ್ರತೀ ತಿಂಗಳು ಜಮೆಯಾಗುತ್ತಿರುವ ಖಾತೆಯನ್ನು ಸಕ್ರಿಯ ಅಕೌಂಟ್ ಎಂದು ಪರಿಗಣಿಸಲಾಗುತ್ತದೆ. ನೀವು ಹಿಂದೆ ಕೆಲಸ ಮಾಡಿದ ಕಂಪನಿಗಳಲ್ಲಿ ಇದ್ದ ಇಪಿಎಫ್ ಅಕೌಂಟ್​ಗಳನ್ನು ಹೊಸ ಅಕೌಂಟ್​​ನೊಂದಿಗೆ ಜೋಡಿಸದೇ ಹೋದರೆ ಹಳೆಯ ಅಕೌಂಟ್​​ಗಳಿಗೆ ಅದಕ್ಕೆ ಬಡ್ಡಿ ಸಿಗುವುದಿಲ್ಲ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ