Breaking News

ಸಂತ ಮೀರಾ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ

Spread the love

ಸಂತ ಮೀರಾ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ
ಅನಗೋಳದ ಸಂತ ಮೀರಾ ಆಂಗ್ಲ ಮಾಧ್ಯಮ
ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ
ಶ್ರೀನಿವಾಸ್ ಜನಕಲ್ಯಾಣ ಸಂಸ್ಥೆ ಕಾರ್ಯದರ್ಶಿ ಸುಧೀರ್ ಗಾಡ್ಗೀಳರಿಂದ ಚಾಲನೆ
ಅತಿಥಿಗಳಿಂದ ಭಾಷಣ ವಿದ್ಯಾರ್ಥಿಗಳ ಶಿಕ್ಷಕರ ಸನ್ಮಾನ
ಅನಗೋಳದಲ್ಲಿರುವ ಸಂತ ಮೀರಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಗುರುಪೂರ್ಣಿಮೆ ಹಬ್ಬವನ್ನು ಅದ್ಧೂರಿಯಾಗಿ ಮತ್ತು ಭಕ್ತಿಭಾವದಿಂದ ಶಾಲೆಯ ಮಾಧವ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಶ್ರೀನಿವಾಸ, ಜನಕಲ್ಯಾಣ ಟ್ರಸ್ಟ್‌ ಕಾರ್ಯದರ್ಶಿ ಸುಧೀರ್ ಗಾಡಗಿಳ್, ಶಾಲೆಯ ಅಧ್ಯಕ್ಷ ಪರಮೇಶ್ವರ ಹೆಗಡೆ, ಶಾಲಾ ಆಡಳಿತಾಧಿಕಾರಿ ರಾಘವೇಂದ್ರ ಕುಲಕರ್ಣಿ, ಮುಖ್ಯೋಪಾಧ್ಯಾಯಿನಿ ಸುಜಾತಾ ದಫ್ತರದಾರ, ಉಪಮುಖ್ಯೋಪಾಧ್ಯಾಯಿನಿ ಋತುಜಾ ಜಾಧವ ಹಾಜರಿದ್ದರು. ಓಂಕಾರ ಫೋಟೋ ಪೂಜೆ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಅತಿಥಿಗಳನ್ನು ರೂಪಾ ಕುಮೂಠಕರ್ ಸ್ವಾಗತಿಸಿದರು. ನಂತರ ಗುರುಸ್ತೋತ್ರ ಪಠಣದೊಂದಿಗೆ ಮುಂದಿನ ಕಾರ್ಯಕ್ರಮಗಳು ನಡೆದವು.
ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ
ದಿವ್ಯ ಧಾಬಿಮಠ ಹಾಗೂ ಗೌಸಿಯಾ ಮಡಿವಾಳ ಮಾತನಾಡಿದರು
2024–25ರ 10 ಮತ್ತು 8ನೇನೇ ತರಗತಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ಗುರುಗಳ ಮಹತ್ವವನ್ನು ವಿವರಿಸಿದರು. ಶಾಲೆಯ ಆಡಳಿತಾಧಿಕಾರಿಗಳು ಹಾಗೂ ಅಧ್ಯಕ್ಷರು ಕೂಡ ಮಾತನಾಡಿದರು. ಆದರ್ಶ ಶಿಕ್ಷಕರನ್ನು ಸನ್ಮಾನ ಮಾಡಲಾಯಿತು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ