Breaking News

ಹುಬ್ಬಳ್ಳಿ: ಫಿಶ್ ಮಾರ್ಕೆಟ್ ತೆರವಿಗೆ ವ್ಯಾಪಾರಸ್ಥರ ವಿರೋಧ

Spread the love

ಹುಬ್ಬಳ್ಳಿ: ಫಿಶ್ ಮಾರ್ಕೆಟ್ ತೆರವಿಗೆ ವ್ಯಾಪಾರಸ್ಥರ ವಿರೋಧ
ಬೆಳ್ಳಂ ಬೆಳಗ್ಗೆ ಹುಬ್ಬಳ್ಳಿಯ ಗಣೇಶಪೇಟ್ ಫಿಶ್ ಮಾರ್ಕೆಟ್‌‌ದಲ್ಲಿ ಪಾಲಿಕೆ ಜೆಸಿಬಿ ಸದ್ದು ಮಾಡಿದೆ. ಹಲವಾರು ದಿನಗಳಿಂದ ನೋಟಿಸ್ ನೀಡಿದ್ರೂ ಕೂಡ ವ್ಯಾಪಾರಸ್ಥರ ಅಂಗಡಿಗಳನ್ನು ತೆಗೆದುಕೊಂಡಿರಲಿಲ್ಲ. ಅದಕ್ಕಾಗಿ ಇಂದು ಪಾಲಿಕೆ ಅಧಿಕಾರಿಗಳು ಫೀಲ್ಡ್‌‌ಗೆ ಇಳಿದು, ಫಿಶ್ ಮಾರ್ಕೆಟ್ ತೆರವಿಗೆ ನಿಂತಿದ್ದಾರೆ. ಅದಕ್ಕೆ ವ್ಯಾಪಾರಸ್ಥರು ವಿರೋಧ ಮಾಡುತ್ತಿದ್ದಾರೆ.
ಸ್ಮಾರ್ಟ್ ಸಿಟಿ ಅಡಿಯಲ್ಲಿ ಹೊಸದಾಗಿ ಫೀಶ್ ಮಾರ್ಕೆಟ್ ನಿರ್ಮಾಣ ಮಾಡಿದ್ದಾರೆ. ಆದ್ರೆ ಈ ಎಲ್ಲ ವ್ಯಾಪಾರಸ್ಥರು ಅಲ್ಲಿನ ಮಳಿಗೆಗಳಿಗೆ ಹೋಗದೆ ಇಲ್ಲೆ ರಸ್ತೆಯನ್ನೇ ಅತಿಕ್ರಮಣ ಮಾಡಕೊಂಡು ಮೀನು ಮಾರಾಟ ಮಾಡುತ್ತಿದ್ದರು‌. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕೂಡ ಸಾಕಷ್ಟು ಬಾರಿ ಇವರಿಗೆ ನೋಟಿಸ್ ನೀಡಿದ್ದಾರೆ. ಆದ್ರೂ ಕೂಡ ಇವರು ಅಂಗಡಿಗಳನ್ನು ತೆರವು ಮಾಡಿರಲಿಲ್ಲ. ಅದಕ್ಕಾಗಿ ಇಂದು ಪಾಲಿಕೆ ಅಧಿಕಾರಿಗಳು ಜೆಸಿಬಿ ಸಮೇತ ತೆರವಿಗೆ ಬಂದಾಗ ವಿರೋಧ ಮಾಡುತ್ತಿದ್ದಾರೆ.
ಅಷ್ಟೆ ಅಲ್ದೆ ಫಿಶ್ ಮಾರ್ಕೆಟ್ ಅಸೋಸಿಯೇಷನ್ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ