Breaking News

ಸ್ವಾವಲಂಬಿ ಬದುಕಿಗೆ ಆಸರೆಯಾದ ಕೈ ಕಸೂತಿ ಕೆಲಸ: ಇತರರಿಗೂ ಕಲಿಸುವ ಮೂಲಕ ಮಾದರಿಯಾದ ಪಶ್ಚಿಮ ಬಂಗಾಳ ಮಹಿಳೆ

Spread the love

ಬೀದರ್, ಜೂನ್​ 02: ಅಂದು ದೇಶದಲ್ಲಿ ಕೋವಿಡ್​ ಸೋಂಕಿನಿಂದ ಮನುಕುಲವೇ ನಲುಗಿ ಹೋಗಿತ್ತು. ಅದೆಷ್ಟೋ ಜನರು ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕುಳಿತು ಊಟಕ್ಕೂ ಪರದಾಟ ನಡೆಸಿದ್ದರು.

ಆದರೆ ಅದೇ ಸಮಯವನ್ನು ಬಳಸಿಕೊಂಡ ಮಹಿಳೆಯೊಬ್ಬರು (woman) ಕೈ ಕಸೂತಿ (Hand Embroidery) ಕಲಿತುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡರು.

ತಾವು ಕಲಿತು ಸುಮ್ಮನಾಗದೇ ಇಂದು ಗ್ರಾಮೀಣ ಮಹಿಳೆಯರಿಗೆ ಕಲಿಸಿಕೊಡುತ್ತಿದ್ದಾರೆ. ಆ ಮೂಲಕ ಮಾದರಿ ಮಹಿಳೆಯಾಗಿದ್ದಾರೆ.ಕೊಲ್ಕತ್ತಾದ ಸುಕಲಿ ಎಂಬುವವರು ಹೊಟ್ಟೆ ಪಾಡಿಗಾಗಿ ಕರ್ನಾಟದ ಬೀದರ್​ ಜಿಲ್ಲೆಗೆ 11 ವರ್ಷದ ಹಿಂದೆ ಆಗಮಿಸಿದ್ದು, ಭಾಲ್ಕಿ ತಾಲೂಕಿನ ಕೋಣಮೆಳಕುಂದಾ ಗ್ರಾದಮದಲ್ಲಿ ವಾಸವಾಗಿದ್ದಾರೆ.

ತಮ್ಮ ಕೈ ಕಸೂತಿ ಕೆಲಸದಿಂದಲ್ಲೇ ಸದ್ಯ ಎಲ್ಲರ ಗಮನ‌ ಸೆಳೆಯುತ್ತಿದ್ದಾರೆ. ಇವರು ತಯಾರಿಸುವ ಮನೆ ಅಲಂಕಾರಿಕಾ ವಸ್ತುಗಳಿಗಿದೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ.


Spread the love

About Laxminews 24x7

Check Also

ಬೀದರ್‌ನಲ್ಲಿ ಸಿಡಿಲು ಬಡಿದು ಯುವರೈತ ಸ್ಥಳದಲ್ಲೇ ಸಾವು

Spread the loveಬೀದರ್: ಕೃಷಿ ಚಟುವಟಿಕೆಗಾಗಿ ಜಮೀನಿಗೆ ಹೋಗಿದ್ದಾಗ ಸಿಡಿಲು  ಬಡಿದು ಯುವರೈತ  ಸಾವನ್ನಪ್ಪಿದ ದಾರುಣ ಘಟನೆ ಬೀದರ್ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ